Advertisement

ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧಾ ಮನೋಭಾವ ಹೊಂದಲಿ

04:40 PM Dec 02, 2017 | Team Udayavani |

ಯಾದಗಿರಿ: ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಒದಗಿಸಲು ಪಿಯು ಶಿಕ್ಷಣ ಇಲಾಖೆ ಸಾಂಸ್ಕೃತಿಕ ಚಟುವಟಿಕೆಗಳ ಜಿಲ್ಲಾಮಟ್ಟದ ಸ್ಪರ್ಧೆ ಏರ್ಪಡಿಸಿದ್ದು, ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಚೆನ್ನಾರಡ್ಡಿ ತುನ್ನೂರ ಹೇಳಿದರು.

Advertisement

ನಗರದ ನ್ಯೂ ಕನ್ನಡ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಯಾದಗಿರಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಹೊಂದಿರಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ ಮತ್ತೂಂದು ಸ್ಪರ್ಧೆಗೆ ತಯರಾಗಬೇಕು ಎಂದು ಹೇಳಿದರು.

ಚಂದ್ರಶೇಖರ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿದ್ರಾಮಪ್ಪ ಚೇಗುಂಟಾ ಮಾತನಾಡಿ, ಸ್ಪರ್ಧಾಳುಗಳು ಯಾವತ್ತೂ
ಎದೆಗುಂದಬಾರದು. ಸ್ಪರ್ಧೆಯಲ್ಲಿ ಭಾಗವಹಿಸುವುದು ಎಂದರೆ ಸಾಮಾನ್ಯವಲ್ಲ. ಅದು ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಎಂದರು.

ಪ್ರಾಚಾರ್ಯ ರಘುನಾಥರಡ್ಡಿ ಪಾಟೀಲ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಕಾಲೇಜಿನಲ್ಲಿ ಸ್ಪರ್ಧಾ ಚಟುವಟಿಕೆಗಳ ಜಿಲ್ಲಾಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ಜಿಲ್ಲೆಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಲಾಗಿದೆ. ಇಲ್ಲಿ ಸ್ಪರ್ಧೆ ಮಾಡುವ ವಿದ್ಯಾರ್ಥಿಗಳು ಕೂಡ ಇಂದಿಗೂ ನಮ್ಮ ಕಾಲೇಜಿನ ಮೇಲೆ ಭರವಸೆ ಇಟ್ಟು ಸ್ಪರ್ಧೆಗೆ ಬರುತ್ತಿದ್ದಾರೆ ಎಂದು ಹೇಳಿದರು.

Advertisement

ರಸಪ್ರಶ್ನೆ ವಿಭಾಗದಲ್ಲಿ ಬಂಗಾರೆಪ್ಪ ಹಾಗೂ ಶಿವಮ್ಮ ತಂಡ, ಚರ್ಚಾ ಸ್ಪರ್ಧೆಯಲ್ಲಿ ಲಿಂಗೇಶ್ವರಿ, ವಿಜ್ಞಾನ ಉಪನ್ಯಾಸದಲ್ಲಿ ಶೃತಿ, ಪ್ರಬಂಧ ಸ್ಪರ್ಧೆಯಲ್ಲಿ ಶಿಲ್ಪಾ ಶಹಾಪುರ, ಕಾವೇರಿ, ಚಿತ್ರಕಲೆಯಲ್ಲಿ ವಿಜಯಲಕ್ಷ್ಮೀ, ಏಕಪಾತ್ರಾಭೀನಯದಲ್ಲಿ ಶ್ರೀನಿವಾಸ, ಭಾವಗೀತೆಯಲ್ಲಿ ಗೀತಾ ಶಹಾಪುರ, ಜಾನಪದ ಗೀತೆಯಲ್ಲಿ ಬಸವರಾಜ ಹತ್ತಿಕುಣಿ ಪ್ರಥಮ ಬಹುಮಾನ ಪಡೆದರು. ಕಾಲೇಜಿನ ಸಂಯೋಜಕ ವೆಂಕಟರಾವ್‌ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಎಂ.ಎಸ್‌. ಅಂಗಡಿ, ಅಶೋಕ ಆವಂಟಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next