Advertisement

ಇಡಿ ಬಗ್ಗೆ ಆಕ್ಷೇಪವಿದ್ದರೆ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಲಿ: ಶೆಟ್ಟರ್

02:52 PM Jun 17, 2022 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ವರಿಷ್ಠರ ವಿರುದ್ಧದ ಇ.ಡಿ ವಿಚಾರಣೆಗೆ ಸಂಬಂಧಿಸಿದಂತೆ ಆಕ್ಷೇಪವಿದ್ದರೆ ಕೋರ್ಟ್ ಮೊರೆ ಹೋಗಲಿ, ಅದು ಬಿಟ್ಟು ಕಾಂಗ್ರೆಸ್ಸಿಗರು ಬೀದಿಗಿಳಿದು ಹೋರಾಟ ಮಾಡುವುದು ನೋಡಿದರೆ, ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠರು ತಪ್ಪೆಸಗಿದ್ದು ಸ್ಪಷ್ಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

Advertisement

ಇಲ್ಲಿನ ಡೆನಿಸನ್ಸ್ ಹೊಟೇಲ್ ನಲ್ಲಿ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಇ.ಡಿ ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿಚಾರದಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿ. ಆದರೆ ಕಾಂಗ್ರೆಸ್ ನವರು ದೇಶಾದ್ಯಂತ ಬೀದಿಗಿಳಿದು ಹೋರಾಟದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯುಪಿಎ ಎರಡನೇ ಅವಧಿಯಲ್ಲಿ ಎಷ್ಟು ಹಗರಣಗಳಾಗಿವೆ ಎಂದು ದೇಶದ ಜನ ನೋಡಿದ್ದಾರೆ. ಮೋದಿಯವರ ಸರಕಾರ ಬಂದು ಎಂಟು ವರ್ಷಗಳಾಗಿವೆ. ಇದುವರೆಗೆ ಒಂದೇ ಒಂದು ಹಗರಣ, ಕಪ್ಪು ಚುಕ್ಕೆ ಇದೆಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಮಲಗಿದ್ದ ವೇಳೆ ಅಪ್ರಾಪ್ತೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದ ಆರೋಪಿಗೆ 20 ವರ್ಷ ಜೈಲು

ಕೇಂದ್ರದಲ್ಲಿ ಸಿಎಜಿ ವರದಿ ಬಹಿರಂಗ ಪಡಿಸದಿರುವ ಬಗ್ಗೆ ವಿಪಕ್ಷಗಳು ಸಂಸತ್ತಿನಲ್ಲಿ ಪ್ರಶ್ನಿಸಲಿ. ಬೇಡ ಎಂದವರಾರು ಎಂದರು.

Advertisement

ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅಗ್ನಿಪಥ ಯೋಜನೆ ಘೋಷಣೆ ಆಗಿದೆಯಷ್ಟೆ. ಇನ್ನು ಅನುಷ್ಠಾನಗೊಂಡಿಲ್ಲ. ಹೊಸ ಯೋಜನೆ ಸಾಧಕ ಬಾಧಕ ಇರತ್ತದೆ ಅದರ ಬಗ್ಗೆ ಏಕಾಏಕಿ ಹೋರಾಟ ಸರಿಯಲ್ಲ ಎಂದರು.

ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸೋಲಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next