Advertisement

ಬಂಜಾರಾ ಮಕ್ಕಳು ಶೈಕ್ಷಣಿಕವಾಗಿ ಬಲಗೊಳ್ಳಲಿ: ಜಾಧವ

01:52 PM Aug 17, 2022 | Team Udayavani |

ಕಲಬುರಗಿ: ಬಂಜಾರಾ ಮಕ್ಕಳು ಶೈಕ್ಷಣಿಕವಾಗಿ ಇನ್ನಷ್ಟು ಬಲಗೊಳ್ಳಬೇಕಾದ ಅವಶ್ಯಕತೆ ಇದೆ. ಉನ್ನತ ಶಿಕ್ಷಣದಲ್ಲೂ ಈಗೀಗ ಸಾಧನೆ ಕಂಡು ಬರುತ್ತಿದ್ದು, ಐಎಎಸ್‌, ಐಪಿಎಸ್‌ ಮತ್ತು ಐಎಸ್‌ಎಫ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಹುದ್ದೆಗೆ ಏರಬೇಕು ಎಂದು ಸಂಸದ ಡಾ| ಉಮೇಶ ಜಾಧವ ಕರೆ ನೀಡಿದರು.

Advertisement

ನಗರದ ಎಂಜಿನಿಯರ್‌ ವಿಶ್ವೇಶ್ವರಯ್ಯ ಭವನದಲ್ಲಿ ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಂದು ವಾರಗೀಯ ಸಮಾಜದ ವಿದ್ಯಾರ್ಥಿಗಳು, ಯುವ ಜನತೆ ಉನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅದು ನಮಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಬಂಜಾರಾ ಯುವ ಜನತೆ ಹೆಚ್ಚಿನ ಮಟ್ಟದಲ್ಲಿ ಉನ್ನತ ಶಿಕ್ಷಣದತ್ತ ಒಲವು ತೋರಬೇಕು ಎಂದ ಅವರು, ಕೇವಲ ರಾಜಕಾರಣಿಗಳ ಬೆಂಬಲ ಇದ್ದರೆ ಉನ್ನತ ಸಾಧನೆ ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪರಿಶ್ರಮ ಪಡಬೇಕು ಎಂದರು.

ಮುಗಳನಾಗಾವಿಯ ಶ್ರೀ ಜೇಮಸಿಂಗ್‌ ಮಹಾರಾಜರು, ಬೆಡಸೂರ್‌ನ ಶ್ರೀ ಪರ್ವತಲಿಂಗ ಮಹಾರಾಜರು, ಗೊಬ್ಬುರವಾಡಿಯ ಶ್ರೀ ಬಳಿರಾಮ ಮಹಾರಾಜರು, ಕೇಸರಟಗಿಯ ಲತಾದೇವಿ, ಚೌಡಾಪುರದ ಶ್ರೀ ಮುರಹರಿ ಮಹಾರಾಜರು, ಗುವಿವಿ ಕುಲಪತಿ ದಯಾನಂದ ಅಗಸರ, ಕೆಎಎಸ್‌ ಪ್ರಕಾಶ ರಜಪೂತ, ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಪಾಲಿಕೆ ಸದಸ್ಯ ಕೃಷ್ಣನಾಯಕ, ವಿಠ್ಠಲ ಜಾಧವ, ನಾಮದೇವ ಕರಹರಿ, ಸುಶೀಲಾಬಾಯಿ ರಾಠೊಡ, ಬಿ.ಬಿ.ನಾಯಕ, ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮ ಚವ್ಹಾಣ, ಅರುಣಕುಮಾರ, ಪಾಲಿಕೆ ಉಪ ಆಯುಕ್ತ ಆರ್‌.ಪಿ.ಜಾಧವ, ಜನಾರ್ದನ ಪವಾರ, ರಮೇಶ ಪವಾರ, ಸಂತೋಷ ಚವ್ಹಾಣ, ಸಂಘದ ಅಧ್ಯಕ್ಷ ಸುನೀಲಕುಮಾರ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಸತೀಶ ರಾಮಚಂದ್ರ ಚವ್ಹಾಣ, ಉಪಾಧ್ಯಕ್ಷ ಹರಿಶ್ಚಂದ್ರ ರಾಠೊಡ, ಶಿವರಾಮ ರಾಠೊಡ ಇತರರು ಇದ್ದರು.

ನಮ್ಮ ಸಮುದಾಯಿಕ ಪ್ರಗತಿಯಲ್ಲಿ ಈಚೆಗೆ ಯುವಕರ ಪಾತ್ರ ಕುಗ್ಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖರು, ರಾಜಕೀಯ ಧುರೀಣರು, ಆರ್ಥಿಕ ವಲಯದಲ್ಲಿನ ವ್ಯಕ್ತಿಗಳು, ಉದ್ಯಮಿಗಳು ತಮ್ಮ ಸಮುದಾಯದತ್ತ ತಿರುಗಿ ನೋಡಿದರೆ ಸಾಧನೆಗಳು ಸಾಧ್ಯ. ಈ ನಿಟ್ಟಿನಲ್ಲಿ ಬಂಜಾರಾ ಸಮುದಾಯದಲ್ಲೂ ಕ್ರಾಂತಿಕಾರಕ ಶೈಕ್ಷಣಿಕ ಪ್ರಗತಿ ಆಗಬೇಕು. ಪ್ರೊ|ದಯಾನಂದ ಅಗಸರ್‌, ಗುವಿವಿ ಕುಲಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next