Advertisement

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

12:58 PM Dec 14, 2024 | Team Udayavani |

ವಿಶ್ವದಲ್ಲಿ ಹೆಚ್‌ಐವಿ/ಏಡ್ಸ್‌ ಸೋಂಕಿನ ತಡೆ, ನಿರ್ಮೂಲನೆಗೆ ಪೂರಕವಾದ ಬೆಂಬಲಿತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಮುದಾಯ,ಯುವ ಜನತೆ ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸಿ,ಸರಿಯಾದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶದಿಂದ ಹೆಚ್‌ ಐವಿ ತಡೆಗಟ್ಟುವ ಲಸಿಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಡಿಸೆಂಬರ್‌ 1ರಂದು ಪ್ರತಿವಷ ವಿಶ್ವ ಏಡ್ಸ್‌ ದಿನವನ್ನಾಗಿ ಆಚರಿಲಾಗುತ್ತದೆ.

Advertisement

1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್‌ ಪ್ರಕರಣ ಪತ್ತೆಯಾಯಿತು.1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಏಡ್ಸ್‌ ಮಾರಕ ರೋಗ. ಚಿಕಿತ್ಸೆ ಇನ್ನೂ ಲಭ್ಯವಾಗಿಲ್ಲ ಆದರೆ ಅದರ ಶೋಧನಾಕಾರ್ಯ ಮುಂದುವರೆದಿದೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರದಹಾಗೆ ತಡೆಯುವುದು ಉತ್ತಮ.

ಏಡ್ಸ್‌ ಹಲವು ಕಾರಣಗಳಿಂದ ಬರುವ ಸೋಂಕು. ಆದರೆ ಒಬ್ಬ ವ್ಯಕ್ತಿಗೆ ಎಚ್‌ಐವಿ ಬಂದಿದೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಹಾದು ಹೋಗುವ ಕಲ್ಪನೆ ಆ ವ್ಯಕ್ತಿ ಎಚ್‌ಐವಿ ಸೋಂಕಿತನ ಜತೆಗೆ ದೈಹಿ ಕ ಸಂಪರ್ಕ ಹೊಂದಿದ್ದಾನೆ/ ಳೆ ಎಂಬುದಾಗಿ. ಕೆಲವೊಂದು ಪ್ರಕರಣಗಳಲ್ಲಿ ಇದು ಸತ್ಯವೇ ಆಗಿದ್ದರೂ, ಮತ್ತೆ ಕೆಲವು ಸಂದರ್ಭಗಳಲ್ಲಿ ಈ ಎಣಿಕೆ ತಪ್ಪಾಗುತ್ತದೆ. ಸೋಂಕಿತ ವ್ಯಕ್ತಿಗಳಿಂದ ರಕ್ತ, ವೀರ್ಯ, ಎದೆ ಹಾಲು,ಬಳಸಿದ ಸಿರೇಂಜ್‌ ಬಳಸಿ ಇಂಜೆಕ್ಷನ್‌, ಯೋನಿ ಸ್ರವಿಸುವಿಕೆ ಸೇರಿದಂತೆ ದೇಹದ ದ್ರವಗಳ ಮೂಲಕ ಎಚ್‌ಐವಿ ಹರಡಬಹುದು. ಗರ್ಭಾವಸ್ಥೆಯಲ್ಲಿ ತಾಯಿಯಿಂದ ಮಗುವಿಗೆ ಸಹ ಹರಡುತ್ತದೆ.

ಯಾವುದೇ ವ್ಯಕ್ತಿಯ ದೇಹ ಸೇರಿದ ನಂತರ ಎಚ್‌ಐವಿ ಕಾಯಿಲೆ ಉಂಟು ಮಾಡುವ ವೈರಸ್‌ ಸುಲಭವಾಗಿ ಸಾಯುವುದಿಲ್ಲ.ದೇಹದಲ್ಲಿರುವ ಬಿಳಿ ರಕ್ತಕಣಗಳನ್ನು ಕೊಲ್ಲುತ್ತಾ ಹೋಗುತ್ತದೆ. ಇದರಿಂದ ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಂಡು ನಾನಾ ಕಾಯಿಲೆಗಳು ಆವರಿಸುತ್ತವೆ.ಇಂತಹ ಪರಿಸ್ಥಿತಿ ಉಂಟಾದಾಗ ವ್ಯಕ್ತಿ ಏಡ್ಸ್‌ ಹಂತಕ್ಕೆ ಹೋಗಿದ್ದಾನೆ ಎಂದರ್ಥ.

ಹ್ಯೂಮನ್‌ ಇಮ್ಯುನೊ ಡಿಫಿಷಿಯನ್ಸಿ ವೈರಸ್‌(ಎಚ್‌ ಐವಿ)ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯ ಜೀವಕೋಶಗಳಿಗೆ ಸೋಂಕು ತರುತ್ತದೆ, ಇದು ಮಾರಣಾಂತಿಕ ಸ್ಥಿತಿ ಅಥವಾ ಏಡ್‌ Õಗೆ ಕಾರಣವಾಗುತ್ತದೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, 2021ರ ಕೊನೆಯಲ್ಲಿ ಸುಮಾರು 44 ಮಿಲಿಯನ್‌ ಜನರು ಹೆಚ್‌ ಐವಿ ಯೊಂದಿಗೆ ವಾಸಿಸುತ್ತಿದ್ದಾರೆ ಎನ್ನುವುದು ಸೂಜಿಗದ ವಿಷಯ…!

Advertisement

ವಿಶ್ವ ಸಂಸ್ಥೆ 1988 ರಿಂದ ಇಂದಿನವರೆಗೂ ಪ್ರತಿ ವರ್ಷ ವಿಶ್ವ ಏಡ್ಸ್‌ ದಿನವನ್ನು ಒಂದೊಂದು ಘೋಷವಾಕ್ಯ ಇಟ್ಟುಕೊಂಡು ಆಚರಣೆ ಮಾಡುತ್ತಾ ಬಂದಿದೆ.ಅದರಂತೆ ಈ ವರ್ಷ “ಸರಿಯಾದ ದಾರಿ ಹಿಡಿಯಿರಿ; ನನ್ನ ಆರೋಗ್ಯ, ನನ್ನ ಹಕ್ಕು!” (ಟೇಕ್‌ ದಿ ರೈಟ್ಸ್ ಪಾತ್‌;‌ ಮೈ ಹೆಲ್ತ್ ಮೈ ರೈಟ್‌)‌ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಏಡ್ಸ್‌ ಅನ್ನು ಕೊನೆಗೊಳಿಸುವಲ್ಲಿ ಮತ್ತು ಕಳಂಕವನ್ನು ನಿರ್ಮೂಲನೆ ಮಾಡುವಲ್ಲಿ ಮಾನವ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಸಮಾನತೆ ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಬೆಂಬಲಿಸುವ ಮೂಲಕ, ಜನರ ಹಕ್ಕುಗಳನ್ನು ರಕ್ಷಿಸುವ ಮತ್ತು ಜಾಗೃತಿ ಅಭಿಯಾನಗಳನ್ನು ಉತ್ತೇಜಿಸುವ ಕಾನೂನುಗಳ ಅಗತ್ಯ ಎತ್ತಿ ತೋರಿಸುತ್ತದೆ. ರೋಗ ಲಕ್ಷಣಗಳ ಕಾಣಿಸಿಕೊಂಡರೂ ಗೌಪ್ಯತೆ ಕಾಪಾಡುವುದರಿಂದ ಪ್ರಯೋಜನವಿಲ್ಲ. ಕಾಯಿಲೆ ಬಗ್ಗೆ ಅನುಮಾನಗಳಿದ್ದರೆ ಆಸ್ಪತ್ರೆಗಳಿಗೆ ಹೋಗಿ ತಜ್ಞರಿಂದ ಪರೀಕ್ಷಿಸಿಕೊಳ್ಳಬೇಕು. ಮುಕ್ತವಾಗಿ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು.ಆದ್ದರಿಂದ ಏಡ್ಸ್‌ ಬಗ್ಗೆ ಭಯ ಬೇಡ-ಜಾಗೃತಿ ಮೂಲ ಮಂತ್ರವಾಗಿರಲಿ.

 ಬಸವರಾಜ ಎಂ. ಗದಗ

Advertisement

Udayavani is now on Telegram. Click here to join our channel and stay updated with the latest news.

Next