Advertisement

ಪಾಕ್‌ಗೆ ಪಾಠ: ಸರಕಾರದ ಬೆನ್ನಿಗೆ ನಿಂತ ವಿಪಕ್ಷಗಳು

12:30 AM Feb 27, 2019 | |

ಹೊಸದಿಲ್ಲಿ: ಪಾಕ್‌ನಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿಯಾ ಗಿದೆ ಎಂಬ ಸುದ್ದಿ ಹೊರಬಿದ್ದ ತತ್‌ಕ್ಷಣದಿಂದಲೇ ಕೇಂದ್ರ ಸರಕಾರದ ಬೆನ್ನಿಗೆ ವಿಪಕ್ಷಗಳೂ ನಿಂತವು. ಈ ಮೂಲಕ ಭಾರತಕ್ಕಾಗಿ ಒಂದು ಎಂಬ ಸಂದೇಶ ರವಾನಿಸಲು ಪ್ರಯತ್ನಿಸಿದವು. ಹಿಂದಿನ ಸರ್ಜಿಕಲ್‌ ದಾಳಿಯ ಸಂದರ್ಭದಲ್ಲಿ, ವಿಪಕ್ಷಗಳು ಭಿನ್ನರಾಗ ಹಾಡಿ ಪ್ರಧಾನಿ ಮೋದಿ ಸರಕಾರ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಟೀಕಿಸಿದ್ದವು. ಒಂದು ಹಂತದಲ್ಲಿ ಸರ್ಜಿಕಲ್‌ ದಾಳಿಗೆ ಸಾಕ್ಷ್ಯವನ್ನೂ ಕೇಳಿದ್ದು, ಜನಸಾಮಾನ್ಯರ ತೀವ್ರ ಖಂಡನೆಗೆ ಗುರಿಯಾಗಿತ್ತು.

Advertisement

ಪುಲ್ವಾಮಾ ದಾಳಿ ಕಾರಣ 
ಆಡಳಿತ ಪಕ್ಷ, ವಿಪಕ್ಷಗಳು ಈ ವಿಷಯದಲ್ಲಿ ಒಂದಾಗಲು ಕಾರಣ ಪುಲ್ವಾಮಾ ದಾಳಿ. ಈ ಬೆಳವಣಿಗೆ ಬಳಿಕ ದೇಶಾದ್ಯಂತ ಪಾಕ್‌ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿ ಪ್ರದೇಶದಲ್ಲೂ ಖಂಡನೆ, ಯೋಧರಿಗೆ ಶ್ರದ್ಧಾಂಜಲಿ ನಡೆದಿತ್ತು. ಈ ವೇಳೆ ಸರಕಾರದ ವೈಫ‌ಲ್ಯ ಎಂದು ಅಲ್ಪ ಆಕ್ಷೇಪ ವ್ಯಕ್ತವಾಗಿದ್ದರೂ ಪ್ರತೀಕಾರದ ಅಗತ್ಯ ವನ್ನು ವಿಪಕ್ಷಗಳೂ ಪ್ರತಿ ಪಾದಿಸಿದ್ದವು. ಇದ ರಿಂದ ಉಗ್ರರಿಗೆ, ಪಾಕ್‌ಗೆ ಪಾಠ ಕಲಿಸಲು ಅನುಕೂಲವಾಯಿತು.

ಚುನಾವಣೆ ಎಫೆಕ್ಟ್!
ಒಂದು ವೇಳೆ ಪುಲ್ವಾಮಾ ಘಟನೆಯಲ್ಲಿ ಜನರ ಭಾವನೆಗೆ ವಿರುದ್ಧವಾಗಿ ವಿಪಕ್ಷಗಳು ಸರಕಾರಕ್ಕೆ ಬೆಂಬಲ ನೀಡದಿದ್ದರೆ ಮತ್ತು ಸೋಮವಾರದ ದಾಳಿ  ವಿಷಯದಲ್ಲಿ ಅಪಸ್ವರ ಎತ್ತಿದ್ದರೆ, ಇಡೀ ದೇಶ ವಿಪಕ್ಷಗಳ ವರ್ತನೆ ಯನ್ನು ತೀವ್ರವಾಗಿ ಖಂಡಿಸು ತ್ತಿತ್ತು. ಇಂಥ ಸಂದರ್ಭದಲ್ಲೂ ರಾಜಕೀಯ ಮಾಡಿ ದ್ದೇವೆಂದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ತಿರಸ್ಕರಿಸಿದರೆ ಎಂಬ ಆತಂಕ ವಿಪಕ್ಷಗಳದ್ದು.

ವಿಪಕ್ಷಗಳಿಗೂ ಮಾಹಿತಿ 
ಪಾಕ್‌ ನೆಲದಲ್ಲಿನ ದಾಳಿ ಕುರಿತಾಗಿ ಕೇಂದ್ರ ಸರಕಾರ, ಪ್ರಮುಖ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಮವಾಗಿ ಬೆಳಗ್ಗೆಯೇ ಪ್ರಮುಖ ನಾಯಕರಿಗೆ ವಿಷಯವನ್ನು ತಿಳಿಸಿತು. ಜತೆಗೆ ಸಭೆ ಕರೆಯಿತು. ಈ ಉಪಕ್ರಮವೂ ದೇಶದ ಭದ್ರತೆ ಸಂಗತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನೂ ಒಂದೇ ದಿಸೆಯಲ್ಲಿ ಸಾಗುವಂತೆ ಮಾಡಿವೆ. ಹಾಗಾಗಿ ಉಗ್ರರ ತಾಣಗಳ ಮೇಲಿನ ದಾಳಿಯಂತೆಯೇ ಇದೂ ಸಹ ಒಂದು ಸ್ಟ್ರಾಟೆಜಿಕ್‌ ನಡೆ ಎನ್ನಲಾಗುತ್ತಿದೆ. 

ನ್ಯೂಯಾರ್ಕ್‌ ಟೈಮ್ಸ್‌ ಹೇಳಿದ್ದೇನು?
ಪುಲ್ವಾಮಾ ಘಟನೆಗೆ ಭಾರತ ತನ್ನದೇ ರೀತಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌  ಹೇಳಿದೆ. ದಾಳಿಯ ತೀವ್ರತೆಗೆ ಒಳಗಾದ ಚಿತ್ರಗಳನ್ನು ಪ್ರಕಟಿಸಿರುವ ನ್ಯೂಯಾರ್ಕ್‌ ಟೈಮ್ಸ್‌ ಭಾರತೀಯ ಮಾಧ್ಯಮಗಳ ವರದಿಯನ್ನೇ ಹೆಚ್ಚು ಉಲ್ಲೇಖೀಸಿದೆ. ಪಾಕಿಸ್ಥಾನದ ಹೇಳಿಕೆಗಳನ್ನು ಅಷ್ಟಾಗಿ ಅದು ಗಂಭೀರವಾಗಿ ಪರಿಗಣಿಸಲಿಲ್ಲ. ಪಾಕಿಸ್ಥಾನ ಉಗ್ರರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರಣ 1.3 ಬಿಲಿಯನ್‌ ಡಾಲರ್‌ ಮಿಲಿಟರಿ ಅನುದಾನವನ್ನು ಟ್ರಂಪ್‌ ಸರಕಾರ ಈಗಾಗಲೇ ನಿಲ್ಲಿಸಿದೆ ಎಂದು ಅದು ಪುನರ್‌ ಉಚ್ಚರಿಸುವ ಮೂಲಕ ಭಾರತದ ಪರವಾಗಿ ವಾದ ಮಾಡಿದೆ.

Advertisement

“ಜೂಟ್‌ ಭಾರತ್‌’: ಪಾಕ್‌ ಮೀಡಿಯಾ
 ಭಾರತೀಯ ವಾಯು ಸೇನೆಯ ದಾಳಿಯನ್ನು ಇಡೀ ದಿನ  ಪಾಕ್‌ ಮಾಧ್ಯಮಗಳು ಒಪ್ಪಿಕೊಳ್ಳದೇ ದಿನವಿಡೀ ಭಾರತವನ್ನು “ಜೂಟ್‌ ಭಾರತ’ ಎಂದು ಜರೆದವು. ಮೋದಿ ಚುನಾವಣೆ ಬಂದಾಗ ಅಲ್ಲಿನ ಜನರನ್ನು ಓಲೈಸಲು ಈ ಕೆಲಸ ಮಾಡಿದ್ದಾರೆ ಎಂದರು ನ್ಯೂಸ್‌ ಆ್ಯಂಕರ್‌ಗಳು. ಇಂಗ್ಲಿಷ್‌ ಪತ್ರಿಕೆಯೊಂದರ ಆನ್‌ಲೈನ್‌ ಆವೃತ್ತಿ “ಕೆಲವರು ಹತ್ಯೆಯಾಗಿರುವ ಸಾಧ್ಯತೆ’ ಎಂದೇ ಹೇಳುತ್ತಿತ್ತು. ಉಳಿದವದ್ದೂ ಇದೇ ಹಾದಿ.  

“ದಾಳಿ ನಡೆದಿಲ್ಲ, ನಮ್ಮ ದುಷ್ಮನ್‌ ಭಾರತ ಸುಳ್ಳು ಹೇಳುತ್ತಿದೆ ಎನ್ನುತ್ತಿದ್ದ ಪಾಕ್‌, ಸಂಜೆ ಬಳಿಕ ತನ್ನ ಏರ್‌ ಫೋರ್ಸ್‌ನ ಸಾಮರ್ಥ್ಯವನ್ನು ಪ್ರಸಾರಿಸ ತೊಡಗಿತು. ಮೋದಿಯ ಲಘು ಧಾಟಿಯ ಭಾಷಣಗಳನ್ನು ನ್ಯೂಸ್‌ ಆ್ಯಂಕರ್‌ಗಳು ಹಾಗೂ ಚರ್ಚಾರ್ಥಿಗಳು ವ್ಯಂಗ್ಯ ಮಾಡುತ್ತಿದ್ದರು. 

“ದಾಳಿಯಾಗಿದ್ದು ನಿಜ, ಆದರೆ ಸಾವು ನೋವು ಸಂಭವಿಸಿಲ್ಲ’ ಎಂದಿತು ದಿ ನೇಷನ್‌.  ಭಾರತ ದಾಳಿ ಮಾಡಿದ ಜಾಗವನ್ನು ಯಾರು ಬೇಕಾದರೂ ಬಂದು ನೋಡಿಕೊಂಡು ಹೋಗಲಿ. ಅಲ್ಲಿ ಒಂದು ಹನಿ ರಕ್ತವಾದರೂ ಚೆಲ್ಲಿದ್ದರೆ ತೋರಿಸಲಿ ಎಂದಿತು ಡಾನ್‌. ಜತೆಗೆ ಇಮ್ರಾನ್‌ ಖಾನ್‌ನನ್ನು ಶಾಂತಿಯ ರಾಯಭಾರಿ ಎಂದವು. 

ಪಾಕ್‌ ಟ್ವಿಟ್
ಮಿರಾಜ್‌-2000ನಂತಹ ಅತ್ಯುನ್ನತ ಯುದ್ಧವಿಮಾನವನ್ನು ಭಾರತೀಯರು ಅಮಾಯಕ ಮರಗಳ ಮೇಲೆ ಪ್ರಯೋಗಿ ಸುತ್ತಿದ್ದಾರೆ.
ಪಾಕ್‌ ಟ್ವೀಟಿಗ

ಭಾರತೀಯ ಯುದ್ಧ ವಿಮಾನಗಳು ಉಗ್ರರ ಮೇಲೆ ಮೇಲೆ ದಾಳಿ ಮಾಡಿದ್ದಾ ಅಥವಾ ಮರಗಳ ಮೇಲೆ ದಾಳಿ ಮಾಡಿದರೋ ಎಂದು ಗೊತ್ತಾಗುತ್ತಿಲ್ಲ.
ಫ‌ುರಾVನ್‌ ಖಾಸ್ಮಿ

ಭಾರತದ 12 ವಿಮಾನಗಳು ಕೇವಲ 1 ಸಾವಿರ ಕಿಲೋ ತೂಕದ ಬಾಂಬ್‌ಗಳನ್ನು ಹಾಕಿ ಕತ್ತಲೆಯಲ್ಲಿ 300 ಶವಗಳನ್ನೂ ಎಣಿಸಿಕೊಂಡು ಹೋಗಿವೆ.
ಶೇಹದ್‌ ಹುಸೈನ್‌ 

ಭಾರತೀಯರು ವಿನಾ ಕಾರಣ 1 ಸಾವಿರ ಕಿಲೋ ಟೊಮೇಟೊಗಳನ್ನು ಪಾಕ್‌ನ ಕಾಡಿಗೆ ಎಸೆದು ಹೋಗಿದ್ದಾರೆ.
ಪಾಕ್‌ ಟ್ವೀಟಿಗ

Advertisement

Udayavani is now on Telegram. Click here to join our channel and stay updated with the latest news.

Next