Advertisement

ಜೆಡಿಎಸ್‌ ನಿಂದ ಗೆದ್ದು ಬಿಜೆಪಿಗೆ ಪಾಠ: ಬೆಳಮಗಿ

11:46 AM May 05, 2018 | |

ಶಹಾಬಾದ: ಜೆಡಿಎಸ್‌ನಿಂದ ಈ ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರೇವುನಾಯಕ ಬೆಳಮಗಿ ಹೇಳಿದರು. ವಿಧಾನಸಭೆ ಚುನಾವಣೆ ನಿಮಿತ್ತ ನಗರದಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ಮಾಡಿದ ಬಳಿಕ ಮಾತನಾಡಿದರು. 

Advertisement

ಬಿಜೆಪಿಯನ್ನು ಈ ಭಾಗದಲ್ಲಿ ಅತ್ಯಂತ ಬಲಿಷ್ಠವನ್ನಾಗಿ ಮಾಡಿದ್ದೆ. ಆದರೆ ಯಡಿಯೂರಪ್ಪ ಅವರು ಕಳೆದ ಬಾರಿ ಕೆಜೆಪಿಗೆ ಬರಲಿಲ್ಲ ಎಂದು ಈ ಬಾರಿ ಟಿಕೆಟ್‌ ನೀಡದೇ ಅನ್ಯಾಯ ಮಾಡಿದ್ದಾರೆ. ಆದರೆ ದೇವೇಗೌಡರು ನನ್ನನ್ನು ಪರಿಗಣಿಸಿ ಟಿಕೆಟ್‌ ನೀಡಿದ್ದಾರೆ. ಶಾಸಕ, ಸಚಿವನಾಗಿ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರು ಹತ್ತಿರದಿಂದ ಬಲ್ಲವರು. ಆದ್ದರಿಂದ ಈ ಬಾರಿ ಗೆಲುವು ಸಾಧಿ ಸುವ ಮೂಲಕ ಯಡಿಯೂರಪ್ಪ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಲೋಹಿತ್‌ ಕಟ್ಟಿ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್‌ ಸರಕಾರದ ಆಡಳಿತದಿಂದ ಬೇಸತ್ತಿರುವ ಜನರು ಈ ಬಾರಿ ಜೆಡಿಎಸ್‌ ಕಡೆಗೆ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರ ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ಮಾಡಿದಲ್ಲದೇ, ಜನರಪರವಾದ ಯಾವುದೇ ನೀತಿ ಜಾರಿಗೆ ತಂದಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸುವ ಮೂಲಕ ಮತ್ತೇ ಅಧಿಕಾರಕ್ಕೆ ಬರುತ್ತದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೀಡಿದ ಆಡಳಿತವನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ವಿವಿಧ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಏನಾದರೂ ಅಭಿವೃದ್ಧಿಯಾಗಬೇಕಾದರೆ ಅದು ಜೆಡಿಎಸ್‌ ನಿಂದಲೇ ಎಂದು ಅರಿತಿದ್ದಾರೆ. ಆದ್ದರಿಂದ ಪಕ್ಷವನ್ನು ತೊರೆದು ಹಲವು ಜನರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಮುಖಂಡರಾದ ಕೃಷ್ಣಾರೆಡ್ಡಿ, ನಗರದ ಜೆಡಿಎಸ್‌ ಅಧ್ಯಕ್ಷ ರಾಜ್‌ ಮಹ್ಮದ್‌ ರಾಜಾ, ರಾಮಕುಮಾರ ಸಿಂ, ಮ.ಉಬೆದುಲ್ಲಾ, ಮಹ್ಮದ್‌ ಅಜರ್‌, ಬಸವರಾಜ ಮಯೂರ, ಶೇಖ್‌ ಮೆಹಬೂಬ್‌, ಅಬ್ದುಲ್‌ ಜಬ್ಟಾರ್‌, ಶಿವಕುಮಾರ ತಳವಾರ, ಹಾಜಿ ಕರೀಮ್‌, ಮೋಹನ ಹಳ್ಳಿ, ಬಸವರಾಜ ದಂಡಗುಲಕರ್‌, ಶೇಖ ಬಶಿರೋದ್ದಿನ್‌, ಶೇಖ ಬಾಬು ಉಸ್ಮಾನ್‌, ಶಿವಶಾಲಕುಮಾರ ಪಟ್ಟಣಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next