Advertisement
ಝೆರಾಕ್ಸ್ ಪ್ರತಿಗಳಿಂದ ಪಾಠಒಂದರಿಂದ ಹತ್ತನೇ ತರಗತಿಯ ತನಕ ಪಠ್ಯಪುಸ್ತಕದ ಅಭಾವ ಕಮಡು ಬಂದಿದ್ದು ಎಸೆಸೆಲ್ಸಿ ವಿದ್ಯಾರ್ಥಿಗಳ ಕನ್ನಡ ಪಠ್ಯ ಪುಸ್ತಕ ಇನ್ನೂ ವಿದ್ಯಾರ್ಥಿಗಳ ಕೈಗೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಮನಗಂಡು ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಝೆರಾಕ್ಸ್ ಪ್ರತಿಗಳನ್ನು ಕೊಟ್ಟು ಪಾಠ ಮಾಡುವುದು ಕೆಲವು ಶಾಲೆಗಳಲ್ಲಿ ಕಂಡು ಬಂದಿದೆ. ಝೆರಾಕ್ಸ್ ಪ್ರತಿಯಲ್ಲೇ ಈಗಾಗಲೇ ಕನ್ನಡದ ಆರು ಪಾಠಗಳನ್ನು ಮುಗಿಸಿದ್ದರೂ ಇಲಾಖೆ ಮಾತ್ರ ಕೆಲವೇ ದಿನಗಳಲ್ಲಿ ಪುಸ್ತಕ ದೊರೆಯುವುದು ಎನ್ನುವ ಭರವಸೆಯನ್ನು ನೀಡುತ್ತಿದ್ದಾರೆ.
ಸರಕಾರ ಈ ಹಿಂದೆ ಅಂಗಡಿಗಳಲ್ಲಿ ಪಠ್ಯಪುಸ್ತಕ ಮಾರಾಟ ಮಾಡುವುದನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಅಂಗಡಿಗಳಲ್ಲೂ ಪಠ್ಯಪುಸ್ತಕ ಲಭ್ಯವಾಗುತ್ತಿಲ್ಲ. ಈ ಬಾರಿ ಉಡುಪಿ ಜಿಲ್ಲೆಯ ಶೈಕ್ಷಣಿಕ ಫಲಿತಾಂಶಕ್ಕೆ ತೊಂದರೆಯಾಗದಂತೆ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ ಎನ್ನುವುದು ಕೆಲವು ಅಧ್ಯಾಪಕರ ಅಭಿಪ್ರಾಯವಾಗಿದೆ. ಮುದ್ರಣ ಕಾಗದದ ಕೊರತೆ
ಬರಗಾಲದ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಪೂರೈಕೆಯಾಗುತ್ತಿದ್ದ ಮುದ್ರಣ ಕಾಗದಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಸಕಾಲದಲ್ಲಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ. 1ರಿಂದ 10ನೇ ತರಗತಿಯ ತನಕ ಸುಮಾರು ಆರು ಕೋಟಿ ಪುಸ್ತಕವನ್ನು ಮುದ್ರಿಸಬೇಕಾಗಿದೆ. ಮುದ್ರಣ ಕಾಗದ ಪೂರೈಕೆಯ ವಿಳಂಬದಿಂದಾಗಿ ದರ ವ್ಯತ್ಯಾಸವಾಗಿದ್ದರಿಂದ ಪುಸ್ತಕ ಮುದ್ರಣದಲ್ಲಿ ತಡವಾಗಿ ಆರಂಭವಾಗಿದೆ.
Related Articles
– ಸೀತಾರಾಮ್ ಶೆಟ್ಟಿ,
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ
Advertisement