Advertisement

ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

02:58 PM Feb 04, 2020 | Suhan S |

ಶಿರೂರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಕ್ಷಣ ಇಲಾಖೆ ಇವರ ಅಡಿಯಲ್ಲಿ ನೀಲಾನಗರದ ಗ್ರಾಪಂ ಆಶ್ರಯದಲ್ಲಿ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.

Advertisement

ಕಿರಿಯ ಆರೋಗ್ಯ ಸಹಾಯಕ ಕೆ.ಎಫ್‌ ಮಾಯಾಚಾರಿ ಮಾತನಾಡಿ, ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕುಷ್ಠರೋಗವು ಮೈಕ್ರೋ ಬ್ಯಾಕ್ಟೋರಿಯಾಮ್‌ ಲೇಫ್ರಿ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಇದು ನರಗಳ ಹಾಗೂ ಚರ್ಮದ ಮೇಲೆ ಪರಿಣಾಮ ಬೀಳುತ್ತದೆ. ದೇಹದ ಯಾವುದೇ ಭಾಗದಲ್ಲಿ ತಿಳಿ-ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳ ಮೇಲೆ ಸ್ಪರ್ಶಜ್ಞಾನ ಇರುವುದಿಲ್ಲ. ಇಂಥ ಮಚ್ಚೆಗಳು ಕಂಡುಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು. ಈ ರೋಗದಿಂದ ಭಯಪಡುವ ಅವಶ್ಯವಿಲ್ಲ ಎಂದರು.

ನಂತರ ಈ ಕುಷ್ಠರೋಗದ ನಿರ್ಮೂಲನೆಗೆ ಅತಿಥಿಗಳಿಂದ ಹಾಗೂ ವಿದ್ಯಾರ್ಥಿಗಳಿಂದ, ಅಧಿಕಾರಿಗಳಿಂದ ಪ್ರತಿಜ್ಞಾವಿಧಿ  ಬೋಧಿಸಲಾಯಿತು. ಶಿಕ್ಷಕ ಬಿ.ಆರ್‌ ಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ನಂತರ ಮಕ್ಕಳಿಂದ ಕುಷ್ಠರೋಗದ ಅರಿವು ಕುರಿತು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಯಿತು.

ಪಿಡಿಒ ಎಂ. ಎಂ ಬೋಸಗೊಂಡ, ಸುನಿತಾ ಮೆಣಸಗಿ, ಎಚ್‌.ಬಿ. ನಾಯ್ಕಲ್‌, ವಿಜಯಕುಮಾರ ಶೆಟ್ಟಿ, ಹನಮಂತ ಗೌಡರ, ಯಮನೂರ ಕಟ್ಟಿಮನಿ, ಬಜಪ್ಪ ಪೂಜಾರಿ, ಏಕನಾಥ ಮಾಳಗಿಮನಿ, ತವರಪ್ಪ ಕಟ್ಟಿಮನಿ, ಸಂತೋಷ ಕಟ್ಟಿಮನಿ. ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next