Advertisement

ಚಿರತೆ ಹಾವಳಿಗೆ ರೋಸಿ ಹೋದ ಜನತೆ

12:37 PM Apr 30, 2023 | Team Udayavani |

ಕುದೂರು: ಕುದೂರು ಹೋಬಳಿಯ ಅದರಂಗಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಗಿಮಡು, ರಂಗ ಯ್ಯ ನಪಾಳ್ಯ, ಬೆಟ್ಟಹಳ್ಳಿ ಕಾಲೋನಿ ಜನತೆ ಚಿರತೆ ಹಾವಳಿಗೆ ರೋಸಿ ಹೋಗಿದ್ದು, ಭಯದಿಂದ ಸಂಜೆ ಯಾದರೆ ಮನೆಯಿಂದ ಹೊರಬರದಂತ ವಾತಾವರಣ ನಿರ್ಮಾಣವಾಗಿದೆ.

Advertisement

ಇತ್ತೀಚೆಗೆ ಅದರಂಗಿ, ಕಾಗಿಮಡು ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ವಾಸಿಸಲು ಭಯ ಪಡುವ ಸನ್ನಿವೇಶ ಸೃಷ್ಟಿಯಾಗಿದೆ. ಹೊಲದ ಕಡೆ ಹೋಗಿ ತಿಂಗಳುಗಲೆ ಕಳೆದಿವೆ. ಬೆಟ್ಟಹಳ್ಳಿ ಕಾಲೋನಿ ಹಾಗೂ ಅದರಂಗಿ ಅರಣ್ಯಕ್ಕೆ ಹೊಂದಿಕೊಂಡಿದೆ. ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಪ್ರಾಣಿಗಳು ಹಾಗೂ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಕೈಗೆ ಬಂದ ಫಸಲು ನಾಶವಾಗುತ್ತಿದ್ದು, ರೈತರ ಜೀವನಾಡಿಯಾಗಿರುವ ಹೈನುಗಾರಿಕೆ ಮೂಲವಾದ ಹಸು-ಕರುಗಳ ಮೇಲೆ ಚಿರತೆಗಳು ಹಾಡ ಹಗಲಲ್ಲೇ ದಾಳಿ ಮಾಡುತ್ತಿರುವುದು ನುಂಗ ಲಾರದ ತುತ್ತಾಗಿದೆ. ರೈತರ ಸಂಕಷ್ಟಕ್ಕೆ ಧಾವಿಸಬೇಕಾದ ಜಿಲ್ಲಾಡಳಿತ ,ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ರೈತಾಪಿ ವರ್ಗವನ್ನು ಮತ್ತಷ್ಟು ಕಳವಳಕ್ಕೀಡು ಮಾಡಿದೆ.

ರಸ್ತೆಯಲ್ಲಿ ಓಡಾಟವೂ ಕಷ್ಟ: ಅದರಂಗಿ ,ಕಾಗಿಮಡು ಗ್ರಾಮದಲ್ಲಿ ರಾತ್ರಿಯಾದರೆ ಓಡಾಡಲು ಕಷ್ಟವಾಗಿದೆ. ಅಕ್ಕ ಪಕ್ಕ ಹೊಲ, ಮರದ ಪೊಟರೆ, ತೋಟಗಳಿದ್ದು, ಚಿರತೆ ಅಡಗಿದರೂ ಸಹ ಗೊತ್ತಾಗುವುದಿಲ್ಲ. ಈ ರಸ್ತೆಯಲ್ಲಿ 2-3 ಬಾರಿ ಚಿರತೆ ಮನುಷ್ಯರ ಮೇಲೆ ಎರಗಿದ್ದು, ಜನ ಮತ್ತಷ್ಟು ಭಯ ಭೀತರಾಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಬೆಟ್ಟಹಳ್ಳಿ ಕಾಲೋನಿಯಲ್ಲಿ ಹೊಲಕ್ಕೆ ಹೋಗಿದ್ದ ಮನುಷ್ಯನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಹಾಡಹಗಲಲ್ಲೇ ಮನೆಯಲ್ಲಿ ಸಾಕಿದ ನಾಯಿಗಳ ಮೇಲೆ ದಾಳಿ ನೆಡೆಸಿ, ನಾಯಿಗಳನ್ನು ತಿಂದು ಹಾಕಿವೆ. ಇನ್ನೂ ಹಸು- ಕರುಗಳನ್ನು ಮೇಯಿಸಲು ಹೊಲಕ್ಕೆ ಕಡೆ ಹೋಗು ವುದಕ್ಕೂ ಭಯವಾಗುತ್ತದೆ ಎನ್ನುತ್ತಾರೆ ಅದರಂಗಿ ಗ್ರಾಮದ ವಿಜಯಕುಮಾರ್‌.

ಸಂಜೆಯಾದರೆ ಮನೆಯ ಬಾಗಿಲು ಬಂದ್‌: ಅರಣ್ಯ ದ ಪಕ್ಕದಲ್ಲೇ ಇರುವ ಗ್ರಾಮದವರು ಸಂಜೆ ಆಯಿತೆಂದರೆ ಸಾಕು ಅಲ್ಲಲ್ಲಿ ಚಿರತೆಯ ದರ್ಶನ ಆಗುತ್ತದೆ. ಇದರ ಹಾವಳಿಯಿಂದ ಸಾಕು ಪ್ರಾಣಿಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ಬಾಗಿಲನ್ನು ಬಂದ್‌ ಮಾಡುತ್ತಾರೆ. ಮತ್ತೇ ಬೆಳಗ್ಗೆಯೇ ಬಾಗಿಲು ತೆಗೆಯುವುದು, ಕಾಡು ಪ್ರಾಣಿಗಳಿಗೆ ಹೆದರಿ ಜೀವ ಬಿಗಿ ಹಿಡಿದು, ಜೀವನ ಸಾಗಿಸುತ್ತಿರುವವನ್ನು ನೋಡಿದರೆ ಸಾಕಪ್ಪ ಬದುಕು ಎಂದೇನಿಸುತ್ತದೆ.

Advertisement

ಅರಣ್ಯ ನಾಶ ಕಾರಣ: ದಿನೇ ದಿನೇ ಚಿರತೆ ಸೇರಿದಂತೆ ಕಸಡು ಪ್ರಾಣಿಗಳ ಹಾವಳಿ ಹೆಚ್ಚಾಗಲು ಅರಣ್ಯ ನಾಶವಾಗುತ್ತಿರುವುದೇ ಮೂಲ ಕಾರಣವಾಗುತ್ತಿದೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾದ ಕಾರ ಣ ಚಿರತೆಗಳು ಊರಿಗೆ ಲಗ್ಗೆ ಇಡುತ್ತಿವೆ. ಹಿಂದೆಲ್ಲ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿತ್ತು. ಆದರೆ, ಆನೆಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಟ್ಟಿರು ವುದರಿಂದ ಇವುಗಳ ಉಪಟಳ ಕಡಿಮೆಯಾಗಿದೆ. ಚಿರತೆ ಸಂಕಟ ಎದುರಾಗಿದೆ.

ಕ್ಯಾಮೆರಾ ಅಳವಡಿಸಲು ಸಲಹೆ: ಅರಣ್ಯಾಧಿಕಾರಿಗಳು ಅವಘಡ ಸಂಭವಿಸಿದ ನಂತರ ಭೇಟಿ ನೀಡಿ ಸಾಂತ್ವಾನ ಹೇಳಿ, ಹೆಚ್ಚೆಂದರೆ ಪರಿಹಾರವನ್ನು ನೀಡುತ್ತಾರೆ. ಅಲ್ಲಲ್ಲಿ ಎರಡು ಮೂರು ಬೊನ್‌ಗಳನ್ನು ಇಟ್ಟು ಸುಮ್ಮನಾಗುವ ಬದಲು, ಚಿರತೆ ಹಾವಳಿ ಹೆಚ್ಚಿರುವ ಗ್ರಾಮಗಳ ಬಳಿ ಕ್ಯಾಮೆರಾಗಳನ್ನು ಅಳವಡಿಸಿ, ಚಿರತೆಯ ಚಲನವಲನಗಳನ್ನು ವೀಕ್ಷಿಸಿ ಸೆರೆಹಿಡಿದು ಮುಕ್ತಿ ನೀಡಬೇಕು.

ಕೃಷಿ ಚಟುವಟಿಕೆ ಕುಂಠಿತವಾಗುವ ಆತಂಕ: ಹಳ್ಳಿಗಳ ಪೊದೆಗಳಲ್ಲಿ ವಾಸಿಸುವ ಜನತೆ ಹೊಲ ,ಗದ್ದೆಗಳಿಗೆ ತೆರ ಳುವ ಜನಗಳ ಮೇಲೆ ಎರಗುವ ಆತಂಕ ಎದುರಾ ಗಿದ್ದು, ಜನ ಹೊರ ಬರಲು ಹೆದರುತ್ತಿದ್ದಾರೆ. ಇದದರಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗುವ ಅತಂಕ ಎದು ರಾಗಿದೆ. ರಾತ್ರಿ ವೇಳೆ ಆಹಾರ ಅರಿಸಿ ಬರುವ ಪ್ರಾಣಿಗಳ ಹಾವಳಿ ಯಿಂದ ಕೆಲಸಕ್ಕೆ ಹೋಗುವವರು ರಾತ್ರಿ ಮನೆಗೆ ಬರುವವರೆಗೂ ಆತಂಕ ಇರುತ್ತದೆ.

ತಾಲೂಕಿನಲ್ಲಿ ಚಿರತೆ ಹಾವಳಿ ದಿನೇ ದಿನೆ ಹೆಚ್ಚುತ್ತಿದೆ. ಸರ್ಕಾರ ಹಾಗೂ ಅರಣ್ಯಾಧಿಕಾರಿಗಳಿಗೆ ಮಾನವನ ಜೀವಕ್ಕಿಂತ ವನ್ಯ ಜೀವಗಳ ರಕ್ಷಣೆಯೇ ಹೆಚ್ಚಾಗಿ ಹೋಗಿದೆ. ನಮಗೂ ರಕ್ಷಣೆ ನೀಡುವ ಕಾಲ ದೂರವಿಲ್ಲ, ಹಾಡಹಗಲಲ್ಲೇ ಮನೆಯಲ್ಲಿ ಸಾಕಿರುವ ನಾಯಿಗಳ ಮೇಲೆ ದಾಳೆ ನಡೆಸುತ್ತಿವೆ. – ವಿಜಯಕುಮಾರ್‌, ರೈತ ಅದರಂಗಿ

-ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next