ಕೇರಳ: ಕೋಳಿ ಗೂಡೊಂದರಲ್ಲಿ ಸಿಲುಕಿದ್ದ ಚಿರತೆಯೊಂದು ಶಾಕ್‌ಗೊಳಗಾಗಿ ಮೃತಪಟ್ಟಿರುವ ಘಟನೆ ಕೇರಳದ ಮಾನರಕ್ಕಾಡ್‌ನಲ್ಲಿ ನಡೆದಿದೆ.
ಚಿರತೆಯು ಶನಿವಾರ ತಡರಾತ್ರಿ ಇಲ್ಲಿನ ಮೆಕ್ಕಲಾಪುರದ ಮನೆಯೊಂದರ ಕೋಳಿ ಗೂಡಿನೊಳಕ್ಕೆ ನುಗ್ಗಿತ್ತು. ಅದನ್ನು ಕಂಡ ಕೂಡಲೇ ಭೀತಿಗೊಳಗಾದ ಮನೆಯ ಮಾಲೀಕನು, ಹೊರಗಿನಿಂದ ಕೋಳಿಗೂಡಿನ ಬಾಗಿಲನ್ನು ಲಾಕ್ ಮಾಡಿ, ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ಬೆಳಗ್ಗೆ ಅಧಿಕಾರಿಗಳು ಬಂದಾಗ ಚಿರತೆ ಗೂಡಿನೊಳಗೆ ಸಾವನ್ನಪ್ಪಿತ್ತು. ಚಿರತೆ ಹೊರಬರಲು ಪ್ರಯತ್ನಿಸಿದಾಗ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ, 6 ಗಂಟೆಗೂ ಅಧಿಕ ಕಾಲ ಒಳಗಿದ್ದ ಕಾರಣ, ಅದು ಆಘಾತಕ್ಕೊಳಗಾಗಿ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.