Advertisement

ಕಾಂತಾವರ ಕಾಡಿನಲ್ಲಿ ಚಿರತೆ : ಆತಂಕದಲ್ಲಿ ಜನತೆ

01:00 AM Feb 23, 2019 | Team Udayavani |

ಕಾರ್ಕಳ: ಕಾಂತಾವರ ಗ್ರಾ. ಪಂ. ವ್ಯಾಪ್ತಿಯ ಬಾರಾಡಿ, ಬೇಲಾಡಿ, ಕಾಂತಾವರ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಣಸಿಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಫೆ. 15ರಂದು  ಬರಂಗ ಎಂಬಲ್ಲಿ ಮುತ್ತಿ ಪೂಜಾರಿ ಎಂಬವರ ಮೇಲೆ ಚಿರತೆ ದಾಳಿ ನಡೆಸಿತ್ತು. ಮತ್ತೋರ್ವರಿಗೂ ತರಚಿದ ಗಾಯವಾಗಿತ್ತು. ಅನಂತರ ಒಂದು ಚಿರತೆಯನ್ನು ಸೆರೆಹಿಡಿಯಲಾಗಿತ್ತು. 

Advertisement

ಫೆ.17ರಿಂದ ಅಂಬಲಪದವು ಪರಿಸರದ ಶಾಂತಾ ಮತ್ತು ಶೀನ ಮೂಲ್ಯ ಅವರ ದನ ಮೇಯಲು ಬಿಟ್ಟಲ್ಲಿಂದ ನಾಪತ್ತೆಯಾಗಿದ್ದು, ಶೀನ ಮೂಲ್ಯ ಅವರ ದನದ ಕಳೇಬರ ಫೆ.21ರಂದು ಪಕ್ಕದ ಗುಡ್ಡದಲ್ಲಿ ಅರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಶಾಂತಾ ಅವರ ಮನೆಯ ದನ ಇನ್ನೂ ಪತ್ತೆಯಾಗಿಲ್ಲ.

ಕಾಂತಾವರ ದಟ್ಟ ಅರಣ್ಯದಲ್ಲಿ ಅನೇಕ ಚಿರತೆಗಳಿವೆ ಎನ್ನಲಾಗಿದೆ.  ಇತ್ತೀಚೆಗೆ ಮುಖ್ಯರಸ್ತೆಗಳತ್ತ  ಚಿರತೆಗಳು ಬರುತ್ತಿರುವುದು ಈ ಭಾಗದ ಜನರ ನಿದ್ದೆಗೆಡಿಸಿದೆ. 

ಚಿರತೆ ಗೂಡಿನ ಬೇಡಿಕೆ
ಚಿರತೆ ಸೆರೆಹಿಡಿಯಲು ಗೂಡನ್ನು ಅಳವಡಿಸಬೇಕೆನ್ನುವ ಬೇಡಿಕೆ ಇಲ್ಲಿನವರದ್ದು. ಗೂಡು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂಬ ಆಗ್ರಹ ವ್ಯಕ್ತಪಡಿಸುತ್ತಾರೆ ಶಿವಾನಂದರು.

ಕಾರ್ಕಳದಲ್ಲಿ ಸಕಲ ವ್ಯವಸ್ಥೆಯಿರಲಿ
ಚಿರತೆ ಕಂಡೊಡನೆ ದೂರದ ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿ ಅಲ್ಲಿನ ತಜ್ಞರು ಆಗಮಿಸುವಾಗ ಸಾಕಷ್ಟು ತಡವಾಗುತ್ತಿದೆ. ಹೀಗಾಗಿ ಕಾರ್ಕಳದಲ್ಲೇ ತಜ್ಞರು, ಅರಿವಳಿಕೆ ಗನ್ನು, ಮದ್ದು ಲಭ್ಯವಿದ್ದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಮಾಡಲಾಗಿದೆ.  ಜಿಲ್ಲಾಧಿಕಾರಿ, ಶಾಸಕರು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಎಂದು ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕೋಟ್ಯಾನ್‌ ಹೇಳಿದರು. 

Advertisement

ಚಿರತೆ ಜನರಿಗೆ  ಹೆದರುತ್ತೆ. ಅರಣ್ಯದಲ್ಲಿ ಆಹಾರ ಸಿಗದಿದ್ದಾಗ ಅವು ನಾಡಿನತ್ತ ಧಾವಿಸುತ್ತೆ. ಕಾರ್ಕಳ ಪರಿಸರದ ಕೆಲವೆಡೆ ಚಿರತೆ ಗೂಡು ಅಳವಡಿಸಲಾಗಿದೆ ಎಂದು ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next