Advertisement

ಆತ್ರಾಡಿ ಮದಗ: ಹಾಡಹಗಲೇ ಚಿರತೆ ದಾಳಿಗೆ ಕರು ಸಾವು

12:12 AM Feb 07, 2023 | Team Udayavani |

ಉಡುಪಿ: ಹಾಡಹಗಲೇ ಚಿರತೆ ದಾಳಿ ನಡೆಸಿ ಕರುವೊಂದನ್ನು ಕೊಂದು ತಿಂದ ಘಟನೆ ಆತ್ರಾಡಿ ಮದಗದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಸ್ಥಳೀಯ ನಿವಾಸಿ ಉಮೇಶ್‌ ಶೆಟ್ಟಿ ಅವರು ಮೇಯಲು ಬಿಟ್ಟಿದ್ದ ದನದ ಕರುವನ್ನು ಮರಳಿ ತರಲೆಂದು ಮಧ್ಯಾಹ್ನ ತೆರಳಿದ್ದಾಗ ಅವರ ಕಣ್ಣೆದುರಿನಲ್ಲಿ ಘಟನೆ ನಡೆದಿದೆ. ಕರುವಿನ ಕತ್ತನ್ನು ಚಿರತೆ ಬಗೆದು ತಿಂದಿದೆ. ಉಮೇಶ್‌ ಅವರು ಚಿರತೆಯನ್ನು ಓಡಿಸಲು ಯತ್ನಿಸಿದಾಗ ಅದು ಅವರ ಮೇಲೆರಗಲು ಮುಂದಾಗಿತ್ತು.

ಈ ಭಾಗದಲ್ಲಿ ಶ್ವಾನಗಳು, ಕೋಳಿಗಳು ಸಾಮಾನ್ಯ ಎಂಬಂತೆ ನಾಪತ್ತೆಯಾಗುತ್ತಿವೆ. ಒಂದು ವಾರಗಳಿಂದ ಪರೀಕ, ಆತ್ರಾಡಿ, ಹೆರ್ಗ, ಮದಗ, ಪರ್ಕಳ ಭಾಗದಲ್ಲಿ ಚಿರತೆ ಓಡಾಟ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮೌನವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜ. 21ರಂದು ಹೆರ್ಗದ ಬಳಿ ಗ¨ªೆಯಲ್ಲಿ ಕೋಣವನ್ನು ಚಿರತೆ ಕೊಂದಿತ್ತು. ಸ್ವಲ್ಪ ಸಮಯದ ಹಿಂದೆ ಇದೇ ಪರಿಸರದಲ್ಲಿ ಶಿಕ್ಷಕ ಕೆದ್ಲಾಯರ ಮನೆಯ ಸಾಕು ನಾಯಿಯ ಬೇಟೆಗೆ ಯತ್ನಿಸಿದ ಚಿರತೆ ವಿಫ‌ಲವಾಗಿತ್ತು. ಅದರ ಸಿಸಿ ಕೆಮರಾ ದೃಶ್ಯ ವೈರಲ್‌ ಆಗಿತ್ತು. ಈಗ ಮತ್ತೆ ಚಿರತೆಯ ಉಪಟಳ ಕಂಡುಬಂದಿದೆ.

ಘಟನ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳವಾರ ಬೋನು ಇರಿಸುವ ಭರವಸೆ ನೀಡಿದ್ದಾರೆ.

Advertisement

ತುರ್ತು ಸ್ಪಂದನೆಗೆ ಆಗ್ರಹ
ಚಿರತೆ ಸಹಿತ ಕಾಡುಪ್ರಾಣಿಗಳ ದಾಳಿ ಬಗ್ಗೆ ಆಗಿಂದಾಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅರಣ್ಯ ಇಲಾಖೆ ತುರ್ತು ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮನುಷ್ಯರಿಗೆ ಅಪಾಯ ಸಂಭವಿಸಿ ಜನ ರೊಚ್ಚಿಗೆದ್ದ ಬಳಿಕ ಎಚ್ಚರಗೊಳ್ಳುವ ಅರಣ್ಯ ಇಲಾಖೆಯು ತನ್ನ ನಡೆಯನ್ನು ಬದಲಿಸಿಕೊಂಡು ಈಗಾಗಲೇ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next