ಬೆಳಗಾವಿ: ಇಲ್ಲಿಯ ಹನುಮಾನ್ ನಗರ ಸಮೀಪದ ಹೊಂದಿಕೊಂಡಿರುವ ಗಾಲ್ಫ್ ಗ್ರೌಂಡ್ ನಲ್ಲಿ ಗುರುವಾರ ಬೆಳಗ್ಗೆ ಚಿರತೆ ಕಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಚಿರತೆ ಹುಡುಕಾಟ ಆರಂಭವಾಗಿದೆ.
ಗುರುವಾರ ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಜನರಿಗೆ ಚಿರತೆ ಕಂಡು ಬಂದಿದೆ. ಗಾಲ್ಫ್ ಮೈದಾನದಲ್ಲಿ ಸುತ್ತಲಿನ ಮಿಲಿಟರಿಯವರು ಹಾಗೂ ಜನರು ವಾಯು ವಿಹಾರಕ್ಕೆ ಬಂದಿದ್ದರು. ಆ ವೇಳೆ ಸುತ್ತಲೂ ಇರುವ ಗಿಡದ ಪಕ್ಕದಲ್ಲಿ ಚಿರತೆ ಅಡ್ಡಾಡುತ್ತಿರುವುದು ಜನರ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ:ಚೆಸ್ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆದ 12 ವರ್ಷದ ಅಭಿಮನ್ಯು ಮಿಶ್ರಾ
ಅರಣ್ಯ ಇಲಾಖೆಯವರು ಅಲ್ಲಿಗೆ ಧಾವಿಸಿದ್ದು, ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಹುಡುಕಾಟಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಲ್ಫ್ ಗ್ರೌಂಡಕ್ಕೆ ಆಗಮಿಸಿದ್ದಾರೆ. ಚಿರತೆಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜನರು ಚಿರತೆ ಕಂಡು ಹೆದರಿದ ಅವರು ತಕ್ಷಣ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಗಾಲ್ಫ್ ಗ್ರೌಂಡ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.