ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವಥಕಟ್ಟೆಯ ಶಿರ್ವ- ಪಳ್ಳಿ ರಸ್ತೆ ಬದಿಯ ಕಾಡಿನಲ್ಲಿ ಚಿರತೆಯೊಂದು ತಂತಿ ಬೇಲಿಗೆ ಸಿಲುಕಿ ಬಿದ್ದಿದೆ.
ಪಡುಬಿದ್ರಿ ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಉಡುಪಿ ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕೆ., ಅರಣ್ಯ ರಕ್ಷಕರಾದ ಚರಣ್ ರಾಜ್ ಜೋಗಿ, ಮಂಜುನಾಥ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜಾಯ್ ಉಪಸ್ಥಿತರಿದ್ದು, ಅರೆವಳಿಕೆ ತಜ್ಞ ವೈದ್ಯರ ನಿರೀಕ್ಷೆ ಯಲ್ಲಿದ್ದಾರೆ.
ಈ ರಸ್ತೆಯಲ್ಲಿ ಪ್ರತೀದಿನ ಶಿರ್ವದ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಗೆ ಕೆಲಸಕ್ಕೆ ಹೋಗುವ ಪರಿಸರದ ನಾಗರಿಕರು, ವಾಹನ ಸವಾರರು ಭಯಭೀತರಾಗಿದ್ದರು.
ಇದನ್ನೂ ಓದಿ :ವಿಜಯಪುರ: ಗೋಲಗುಂಬಜ್ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ