Advertisement

ಸುಪ್ಪೆಯಲ್ಲಿ ಚಿರತೆ ಪ್ರತ್ಯಕ್ಷ್ಯ: ಮತ್ತೆ ಆತಂಕ

04:21 PM Nov 25, 2018 | Team Udayavani |

ಬೆಳಗಾವಿ: ತಾಲೂಕಿನ ಕುದ್ರೆಮನಿ ಗ್ರಾಮಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸುಪ್ಪೆ ಗ್ರಾಮದ ಬಳಿ ಶನಿವಾರ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಸುತ್ತಲಿನ ಗ್ರಾಮದ ಜನರಲ್ಲಿ ಆತಂಕ ಉಂಟುಮಾಡಿದೆ. ಮಹಾರಾಷ್ಟ್ರದ ಚಂದಗಡ ತಾಲೂಕಿನ ಸುಪ್ಪೆ ಗ್ರಾಮದ ಬಳಿಯ ಹೊಲದಲ್ಲಿ ಚಿರತೆ ಓಡಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಆರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿಮುಟ್ಟಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ಹಾಗೂ ಸಿಬ್ಬಂದಿ ಮತ್ತು ಮಹಾರಾಷ್ಟ್ರದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬಲೆಗೆ ಹಾಕಲು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಚಿರತೆಯು ಒಂದು ವಾರದಿಂದ ಯಾವುದೇ ಬೇಟೆ ಸಿಗದೇ ನಿತ್ರಾಣವಾಗಿದೆ. ಹೀಗಾಗಿ ಅದನ್ನು ಸುಲಭವಾಗಿ ಹಿಡಿಯಲು ಕಾರ್ಯಾಚರಣೆ ನಡೆಸಿದ್ದೇವೆ. ಗ್ರಾಮಸ್ಥರಿಗೆ ಸಹ ಎಚ್ಚರದಿಂದ ಇರಬೇಕು. ರಾತ್ರಿ ಹೊತ್ತು ಹೊರಗಡೆ ಓಡಾಡದಂತೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next