Advertisement

ಮುಳ್ಳುಹಂದಿ ತಿಂದು ಚಿರತೆ ಸಾವು: 20 ದಿನದ ನಂತರ ಬೆಳಕಿಗೆ

05:20 PM Jan 05, 2022 | Team Udayavani |

ಗುಂಡ್ಲುಪೇಟೆ: ಮುಳ್ಳುಹಂದಿ ತಿಂದು 6-8 ತಿಂಗಳ ಚಿರತೆಯೊಂದು ಕಳೆದ 20 ದಿನಗಳ ಹಿಂದೆ ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಬೋಗಯ್ಯನಹುಂಡಿ ಗ್ರಾಮದ ರೈತರ ಜಮೀನೊಂದರಲ್ಲಿ ನಡೆದಿದೆ. ಇದು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ತಡವಾಗಿ ಬುಧವಾರ ಬೆಳಕಿಗೆ ಬಂದಿದೆ.

Advertisement

ಗುಂಡ್ಲುಪೇಟೆ ಉಪ ವಿಭಾಗದ ಬಫರ್ ಜೋನ್ ವಲಯದ ಬೆಟ್ಟದಮಾದಹಳ್ಳಿ ಎಲ್ಲೆಯ ಬೋಗಯ್ಯನಹುಂಡಿ ಗ್ರಾಮದ ಗುರುಸ್ವಾಮಪ್ಪ ಬಿನ್ ನಾಗಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ.ವಾಸೀಂಮಿರ್ಜಾ, ವನ್ಯಜೀವಿ ಪರಿಪಾಲಕ ಎಂ.ಕೆ.ನಂಜುಂಡೇರಾಜೆ ಅರಸ್, ಆರ್.ರಘುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಚಿರತೆಯ ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದೆ. ಚಿರತೆ ಮೃತಪಟ್ಟ ಸ್ಥಳದ ಪಕ್ಕದಲ್ಲಿ ಮುಳ್ಳಂದಿಯ ಮುಳ್ಳುಗಳು ಹಾಗೂ ಇತರೆ ಭಾಗಗಳು ಬಿದ್ದಿದೆ. ಮರಣೋತ್ತರ ಪರೀಕ್ಷೆಯನ್ನು ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ನಡೆಸಿದ್ದು, ಹೊಟ್ಟೆ ಭಾಗ ತೆರೆದು ನೋಡಿದಾಗ ಮುಳ್ಳಂದಿಯ ಮುಳ್ಳುಗಳು ಹಾಗೂ ಬಾಯಿಯ ಭಾಗಗಳು ಇರುವುದು ಧೃಡಪಡಿಸಿದರು.

ನಂತರ ಮೃತ ಚಿರತೆಯ ಕಳೆಬರವನ್ನು ಅರಣ್ಯ ಅಧಿಕಾರಿಗಳು ಹಾಗು ಸ್ಥಳೀಯರ ಸಮ್ಮುಖದಲ್ಲಿ ಸುಡಲಾಯಿತು ಎಂದು ಎಸಿಎಫ್ ಪರಮೇಶ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next