Advertisement

ಹಸುಗಳ ಬಲಿ ಪಡೆಯುತ್ತಿದ್ದ ಚಿರತೆ ಸೆರೆ

12:09 PM Nov 11, 2021 | Team Udayavani |

ಹುಣಸೂರು: ಹಲವಾರು ದಿನಗಳಿಂದ ಹನಗೋಡು ಭಾಗದ ರೈತರು-ಸಾರ್ವಜನಿಕರನ್ನು ಭಯಭೀತರನ್ನಾಗಿ ಸಿದ್ದ ಚಿರತೆಯು ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ಸಿದ್ದರಾಜು ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಆರು ವರ್ಷದ ಗಂಡು ಚಿರತೆಯು ಸೆರೆ ಸಿಕ್ಕಿದೆ.

Advertisement

ಬುಧವಾರ ಬೆಳಗ್ಗೆ ಜಮೀನಿನ ಮಾಲಿಕ ಸಿದ್ದರಾಜು ಅವರು ಪ್ರಾದೇಶಿಕ ಅರಣ್ಯ ಇಲಾಖೆಯ ಆರ್‌ ಎಫ್‌ಒ ನಂದಕುಮಾರ್‌ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನದ ಕಲ್ಲಹಳ್ಳ ಅರಣ್ಯದಲ್ಲಿ ಬಂಧ ಮುಕ್ತಗೊಳಿಸಿದರು. ಕಳೆದ 5-6 ತಿಂಗಳುಗಳಿಂದ ಚಿರತೆಯು ಲಕ್ಷ್ಮಣತೀರ್ಥ ನದಿ ದಂಡೆ ಹಾಗೂ ಕಬ್ಬಿನಗದ್ದೆಯ ಆಸುಪಾಸು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ತಿಂದು ಹಾಕುತ್ತಿತ್ತು.

ಇದನ್ನೂ ಓದಿ:-ಮದಕರಿ ನಾಯಕನಿಗೆ ವಿಷ ಹಾಕಿಕೊಂದ ಟಿಪ್ಪುಜಯಂತಿ ಮಾಡಿದ್ದು ಸಿದ್ದರಾಮಯ್ಯ ಸಾಧನೆ:ಪ್ರತಾಪ್ ಸಿಂಹ

ಇದಲ್ಲದೇ ಗ್ರಾಮದೊಳಗೂ ನುಗ್ಗಿ ಕೊಟ್ಟಿಗೆಯಲ್ಲಿರುವ ಸಾಕುನಾಯಿ, ಆಡು-ಕುರಿಗಳ ಮೇಲೆ ದಾಳಿ ನಡೆಸಿ ಜನರನ್ನು ಭಯಭೀತರನ್ನಾಗಿಸಿತ್ತು. ಅರಣ್ಯ ಇಲಾಖೆಯವರು ಹತ್ತಾರು ಬಾರಿ ಜಾಗ ಬದಲಾಯಿಸಿ ಬೋನ್‌ ಇರಿಸಿದ್ದರೂ ಚಿರತೆ ಬೋನಿನಲ್ಲಿ ಸೆರೆಯಾಗದೆ ಚಳ್ಳೆ ಹಣ್ಣು ತಿನ್ನಿಸಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಓಡಾಡುತ್ತಿತ್ತು.

ಇನ್ನೂ 2 ಚಿರತೆ ಇವೆ: ವಡ್ಡಂಬಾಳು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಹಲವಾರು ಬಾರಿ ಬೋನ್‌ ಇರಿಸಲಾಗಿತ್ತಾದರೂ ಬೋನಿಗೆ ಚಿರತೆ ಬೀಳುತ್ತಿಲ್ಲ, ಮತ್ತೆ ಸ್ಥಳವನ್ನು ಬದಲಾಯಿಸುತ್ತಿತ್ತು. ಇದೀಗ ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದಲ್ಲದೆ ಇನ್ನೂ ಎರಡು ಚಿರತೆಗಳಿದ್ದು, ಅವುಗಳನ್ನೂ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Advertisement

 ಚಿರತೆಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಬೋನ್‌ನಲ್ಲಿ ಬಂಧಿಯಾಗಿರುವ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದು, ಅರಣ್ಯ ಇಲಾಖೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ದಿನಗಳ ನಂತರವಷ್ಟೆ ಕಾಡಿಗೆ ಬಿಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ತಾಲೂಕಿನ ಹೆಗ್ಗಂದೂರಿನಲ್ಲಿ ಸೆರೆ ಸಿಕ್ಕ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದರೆ, ಮತ್ತೂಂದೆಡೆ ಕಾಲಿಗೂ ಗಾಯಗಳಾಗಿದೆ. ಕಾಡಿನೊಳಗೆ ಬಿಟ್ಟಲ್ಲಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಗೊಳ್ಳಲಿದೆ. ಹೀಗಾಗಿ ಪಶುವೈದ್ಯ ಡಾ.ರಮೇಶ್‌ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಗುಳ್ಳೆಯನ್ನು ತೆಗೆದಿದ್ದಾರೆ. ಇನ್ನೆಡು ದಿನಗಳ ಕಾಲ ನಿಗಾ ಇಡಲಾಗುವುದು, ಬಳಿಕ ಕಾಡಿಗೆ ಬಿಡಲಾಗುವುದೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next