Advertisement
ಬುಧವಾರ ಬೆಳಗ್ಗೆ ಜಮೀನಿನ ಮಾಲಿಕ ಸಿದ್ದರಾಜು ಅವರು ಪ್ರಾದೇಶಿಕ ಅರಣ್ಯ ಇಲಾಖೆಯ ಆರ್ ಎಫ್‌ಒ ನಂದಕುಮಾರ್‌ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನದ ಕಲ್ಲಹಳ್ಳ ಅರಣ್ಯದಲ್ಲಿ ಬಂಧ ಮುಕ್ತಗೊಳಿಸಿದರು. ಕಳೆದ 5-6 ತಿಂಗಳುಗಳಿಂದ ಚಿರತೆಯು ಲಕ್ಷ್ಮಣತೀರ್ಥ ನದಿ ದಂಡೆ ಹಾಗೂ ಕಬ್ಬಿನಗದ್ದೆಯ ಆಸುಪಾಸು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ತಿಂದು ಹಾಕುತ್ತಿತ್ತು.
Related Articles
Advertisement
ಚಿರತೆಗೆ ಕಣ್ಣಿನ ಶಸ್ತ್ರಚಿಕಿತ್ಸೆ
ಬೋನ್‌ನಲ್ಲಿ ಬಂಧಿಯಾಗಿರುವ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದು, ಅರಣ್ಯ ಇಲಾಖೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ದಿನಗಳ ನಂತರವಷ್ಟೆ ಕಾಡಿಗೆ ಬಿಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ತಾಲೂಕಿನ ಹೆಗ್ಗಂದೂರಿನಲ್ಲಿ ಸೆರೆ ಸಿಕ್ಕ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದರೆ, ಮತ್ತೂಂದೆಡೆ ಕಾಲಿಗೂ ಗಾಯಗಳಾಗಿದೆ. ಕಾಡಿನೊಳಗೆ ಬಿಟ್ಟಲ್ಲಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಗೊಳ್ಳಲಿದೆ. ಹೀಗಾಗಿ ಪಶುವೈದ್ಯ ಡಾ.ರಮೇಶ್ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಗುಳ್ಳೆಯನ್ನು ತೆಗೆದಿದ್ದಾರೆ. ಇನ್ನೆಡು ದಿನಗಳ ಕಾಲ ನಿಗಾ ಇಡಲಾಗುವುದು, ಬಳಿಕ ಕಾಡಿಗೆ ಬಿಡಲಾಗುವುದೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.