Advertisement

ಚಿರತೆ, ಕರಡಿ, ಕಾಡಾನೆಗಳ ಕಾಟಕ್ಕೆ ಬೇಸತ್ತ ರೈತ

01:37 PM Jan 23, 2023 | Team Udayavani |

ಚನ್ನಪಟ್ಟಣ: ತಾಲೂಕಿನ ಚನ್ನಿಗನ ಹೊಸಹಳ್ಳಿ ಗ್ರಾಮದ ರೈತಮಹಿಳೆಯನ್ನು ಆರು ತಿಂಗಳ ಹಿಂದೆ ಬಲಿ ತೆಗೆದುಕೊಂಡ ಕಾಡಾನೆಯ ದಾಂಧಲೆ ಹಸಿರಾಗಿರುವಾಗಲೇ ಚನ್ನಪಟ್ಟಣ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಕಾಡಾನೆಗಳ ಕಾಟ, ಚಿರತೆ ಹಾವಳಿ ಹಾಗೂ ಇನ್ನಿತರೆ ಕಾಡು ಪ್ರಾಣಿಗಳ ಅಬ್ಬರ ರೈತರ ಬದುಕನ್ನು ಬರ್ಬರ ಮಾಡಿದೆ.

Advertisement

ಕಳವಳ: ಕಾಡು ಪ್ರಾಣಿಗಳ ಹಾವಳಿಯಿಂದ ಒಂದೆಡೆ ಕೈಗೆ ಬಂದ ರೈತರ ಫ‌ಸಲು ನಾಶವಾಗುತ್ತಿದ್ದರೆ, ಇನ್ನೊಂದೆಡೆ ರೈತರು ಮತ್ತೂಂದು ಜೀವನಾಡಿಯಾದ ಹೈನುಗಾರಿಕೆ ಮೂಲವಾದ ಹಸು-ಕರುಗಳ ಮೇಲೆ ಚಿರತೆಗಳು ಹಾಡ ಹಗಲೇ ದಾಳಿ ಮಾಡುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರೈತರ ಸಂಕಷ್ಟಕ್ಕೆ ಧಾವಿಸಬೇಕಾದ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ರೈತಾಪಿ ವರ್ಗವನ್ನು ಮತ್ತಷ್ಟು ಕಳವಳಕ್ಕೀಡು ಮಾಡಿದೆ. ಕಳೆದೊಂದು ವಾರದಲ್ಲಿ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ, ಹೊಂಗನೂರು ಸುತ್ತಮುತ್ತಲಿನ ಗ್ರಾಮಗಳಾದ ಹೊಡಿಕೆ ಹೊಸಹಳ್ಳಿ, ಕೋಡಿಪುರ, ನೀಲಸಂದ್ರ, ಕೂಡ್ಲೂರು ಬಳಿ ಕಣ್ವ ನದಿಯಲ್ಲಿ ಐದಾರು ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ಚಿಕ್ಕಮಳೂರು ಹಾಗೂ ಹೊಟ್ಟಿಗನ ಹೊಸಹಳ್ಳಿಯವರೆಗೂ ಕಾಡಾನೆಗಳ ಹಾವಳಿ ವಿಸ್ತರಿಸಿದೆ.

ಕೃಷಿ ಬೆಳೆ ನಾಶ: ಇದಲ್ಲದೆ, ಸಾತನೂರು ಮಾರ್ಗದ ಸಿಂಗರಾಜಪುರ, ಭೂಹಳ್ಳಿ, ಉಜ್ಜನಹಳ್ಳಿ, ಬಿ.ವಿ.ಹಳ್ಳಿ ಸೇರಿದಂತೆ ಈ ಭಾಗದಲ್ಲಿ ಅನೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಿಂಡು ಬೆಳೆದು ನಿಂತ ಕೃಷಿ ಬೆಳೆಗಳನ್ನು ನಾಶ ಮಾಡಿವೆ. ನಗರಕ್ಕೆ ಅತಿ ಸಮೀಪ ಇರುವ ದೇವರ ಹೊಸಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಹಸುವೊಂದನ್ನು ಕೊಂದು ಹಾಕಿದೆ. ಒಟ್ಟಾರೆ ಹೇಳುವುದಾದರೆ ರಾಮನಗರ ಜಿಲ್ಲೆಯಲ್ಲಿ ಈಗ ಕಾಡಾನೆ, ಚಿರತೆ, ಕರಡಿ ಬಿಟ್ಟರೆ ಬೇರೆ ಮಾತೇ ಇಲ್ಲ. ಇವತ್ತು ಎಲ್ಲಿ ಚಿರತೆ ದಾಳಿ ಮಾಡಿದೆ. ಎಷ್ಟು ಚಿರತೆಗಳು ಸೆರೆ ಸಿಕ್ಕಿವೆ ಎಂಬುದೇ ಜನರ ಪ್ರಮುಖ ಚರ್ಚಾ ವಿಷಯವಾಗಿದೆ.

ನುಂಗಲಾರದ ತುತ್ತು: ಅಚ್ಚರಿ ಎಂದರೆ, ಚಿರತೆಗಳನ್ನು ಸೆರೆ ಹಿಡಿದಂತೆಲ್ಲಾ ಮತ್ತಷ್ಟು ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ಅರಣ್ಯ ಇಲಾಖೆ ಬಲೆಗೆ ಬಿದ್ದ ಚಿರತೆಗಳನ್ನು ಎಲ್ಲಿಗೆ ಬಿಡುತ್ತಿದ್ದಾರೆ. ಬಿಟ್ಟ ಚಿರತೆಗಳು ಪುನಃ ಅದೇ ಜಾಗಕ್ಕೆ ಮರಳಿ ಬರುತ್ತಿವೆಯೇ ಎಂಬ ಜನರ ಸಂಶಯಕ್ಕೆ ಅರಣ್ಯ ಇಲಾಖೆ ತುಟಿ ಬಿಚ್ಚಿಲ್ಲ. ಕಳೆದ 20 ವರ್ಷಗಳಿಂದೀಚೆಗೆ ಮಿತಿ ಮೀರಿರುವ ಚಿರತೆಗಳ ಸಂತತಿ ರಾಜ್ಯದ ಬಹುಪಾಲು ಜಿಲ್ಲೆಗಳ ರೈತಾಪಿಗಳಿಗೆ ನುಂಗಲಾರದ ತುತ್ತಾಗಿದೆ. ಪ್ರತಿ ನಿತ್ಯ ಒಂದಲ್ಲಾ ಒಂದು ಜಿಲ್ಲೆಯ ತಾಲೂಕಿನ ಹಳ್ಳಿಗಳಲ್ಲಿ ಜಾನುವಾರುಗಳ ಜೀವ ಹಾನಿಯಾಗುತ್ತಿದೆ. ಆದರೂ ಅರಣ್ಯ ಇಲಾಖೆ ಸೇರಿದಂತೆ ಸರ್ಕಾರ ಜಾನುವಾರು ಮತ್ತು ಜನರ ಜೀವದ ಬೆಲೆ ಅರಿಯದೆ ಚಿರತೆ ದಾಳಿ ಸಾಮಾನ್ಯವಾಗಿದೆ ಎಂದು ಕೈ ಕಟ್ಟಿ ಕುಳಿತಿ ರುವುದು ಜನ ಜಾನುವಾರಗಳ ಜೀವಕ್ಕೆ ಸರ್ಕಾರ ನೀಡಿರುವ ಬೆಲೆ ಇದೇನಾ? ಎಂಬ ಪ್ರಶ್ನೆ ಎದ್ದಿದೆ.

ಕಾಡಿಗಿಂತ ನಾಡಲ್ಲೇ ವಾಸ: ರಾಜ್ಯದ ಮಟ್ಟಿಗೆ ಹೇಳುವುದಾದರೆ, ದಟ್ಟ ಕಾಡುಗಳಿಗಿಂತಲೂ ಕಾಡಂ ಚಿನ ಗ್ರಾಮ, ಪಾಳು ಬಿದ್ದ ಜಮೀನುಗಳೇ ಚಿರತೆಗಳ ಆಶ್ರಯ ತಾಣವಾಗಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೆ ರವಾನೆಯಾಗುವ ಕೋಳಿ ಹಾಗೂ ಇನ್ನಿತರ ಪ್ರಾಣಿಗಳ ತ್ಯಾಜ್ಯವು ನಾಯಿಗಳನ್ನು ಆಕರ್ಷಿಸುತ್ತಿದೆ. ನಾಯಿಗಳನ್ನು ಬೇಟೆಯಾಡಲು ಚಿರತೆಗಳ ಆಗಮನವಾಗುತ್ತಿವೆ. ಅಲ್ಲದೇ, ಅವುಗಳ ಸಂತಾನಾಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾ ಣವಾಗುತ್ತಿದೆ. ಅದರಲ್ಲೂ ಬೆಟ್ಟಗುಡ್ಡಗಳ ಬಾಹು ಳ್ಯವುಳ್ಳ ಪ್ರದೇಶದಲ್ಲಿ ಚಿರತೆ ಹಾವಳಿ ತೀವ್ರವಾಗಿದ್ದು, ಗ್ರಾಮೀಣರು ರಾತ್ರಿ ವೇಳೆ ಇರಲಿ, ಹಗಲು ಹೊತ್ತಿನಲ್ಲೇ ಮನೆಗಳಿಂದ ಹೊರಬರಲು ಹೆದರು ವಂತಾಗಿದೆ. ಇನ್ನು ಪುಟ್ಟ ಮಕ್ಕಳನ್ನೇ ಚಿರತೆಗಳು ಹೊತ್ತೂಯ್ಯುವ ಪ್ರಕರಣಗಳೂ ವರದಿಯಾಗುತ್ತಿವೆ.

Advertisement

ಮೌನ: ಚಿರತೆಗಳ ಹಾವಳಿಯಿಂದ ಚಿಂತಾಕ್ರಾಂತ ವಾಗಿರುವ ಅರಣ್ಯ ಇಲಾಖೆ, ವನ್ಯಜೀವಿಗಳಿಂದ ಜನರು ಹಾಗೂ ಸಾಕು ಪ್ರಾಣಿಗಳನ್ನು ರಕ್ಷಿಸಲು ಜನಜಾಗೃತಿಗೆ ಮುಂದಾಗಿದೆ. ರಾತ್ರಿ ವೇಳೆ ಹೊರಗೆ ಮಲಗಿಕೊಳ್ಳಬೇಡಿ. ಸಾಕು ಪ್ರಾಣಿಗಳನ್ನು ಮನೆ ಯೊಳಗೆ ಕಟ್ಟಿಕೊಂಡು ಬಿಗಿಯಾಗಿ ಬಾಗಿಲು ಹಾಕಿಕೊಳ್ಳಿ. ಸಂಜೆ 6 ಗಂಟೆ ಬಳಿಕ ಒಬ್ಬಂಟಿಯಾಗಿ ಎಲ್ಲೂ ತಿರುಗಾಡಬೇಡಿ ಎಂದು ತಮಟೆ ಬಡಿದು ಪ್ರತಿ ಹಳ್ಳಿಯಲ್ಲೂ ಡಂಗೂರ ಸಾರುತ್ತಿದ್ದಾರೆಯೇ ವಿನಃ ಸಮಸ್ಯೆಯ ಮೂಲ ಹುಡುಕಿ ಸಂಪೂರ್ಣ ಚಿರತೆ ಹಿಡಿದು ಅಭಯಾರಣ್ಯಗಳಿಗೆ ಬಿಡುತ್ತಿಲ್ಲ.

ಸಮಸ್ಯೆಯಾಗಿಯೇ ಉಳಿದಿದೆ: ಕಳೆದ 4 – 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾ ಗಿದೆ. ಅವುಗಳಿಗೆ ಆಹಾರದ ಸಮಸ್ಯೆಯೂ ಉಂಟಾ ಗಿದೆ. ಆದರೆ, ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾ ರಿಕೆ ಸೇರಿದಂತೆ ಕಾಮಗಾರಿ ಹೆಚ್ಚಿದಂತೆ ಚಿರತೆಗಳು ನಾಡಿನತ್ತ ಆಹಾರಕ್ಕಾಗಿ ದಾಳಿ ಮಾಡುತ್ತಿವೆ. ಆದರೂ, ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ.

ಆಹಾರದ ಸಮಸ್ಯೆ ಆಗಿದೆ: ಚಿರತೆ ದಾಳಿಯ ಮೂಲ ಸಮಸ್ಯೆ ಯಾರಿ ಗೂ ಗೊತ್ತಿಲ್ಲ. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಬೇಕಾಗುವ ನೇರಳೆ, ಹಲಸು ಮರಗಳನ್ನು ಮತ್ತು ಗಿಡಮೂಲಿಕೆ ಗಿಡಗಳನ್ನು ಬೆಳೆಸುವ ಗೋಜಿಗೆ ಅರಣ್ಯ ಇಲಾಖೆ ಹೋಗುತ್ತಿಲ್ಲ. ಹೀಗಾಗಿ ಅಲ್ಲಿ ಸಸ್ಯ ಹಾರಿ ಪ್ರಾಣಿಗಳು ವಾಸಿಸುತ್ತಿಲ್ಲ. ಸಸ್ಯಾಹಾರಿ ಪ್ರಾಣಿ ಗಳನ್ನು ತಿಂದು ಜೀವಿಸುವ ಚಿರತೆಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಅರಣ್ಯ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ.ವೆಚ್ಚ ಮಾಡುತ್ತದೆ. ಆದರೆ, ಕಾಡನ್ನು ವೈಜ್ಞಾನಿಕವಾಗಿ ಬೆಳೆಸುತ್ತಿಲ್ಲ. ನೀಲಗಿರಿ, ಅಕೇಶಿಯಾ ಗಿಡಗಳನ್ನು ಬೆಳೆಸಿದರೆ ಪ್ರಾಣಿಗಳಿಗೆ ಆಗುವ ಪ್ರಯೋಜನ ವೇನು?. ಇದರಿಂದ ಸಸ್ಯಾಹಾರಿ ಮತ್ತು ಮಾಂಸಾ ಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಅನಿವಾರ್ಯ ವಾಗಿ ಎದುರಾಗುತ್ತದೆ. ಹೆಚ್ಚಾಗಿ ಮೊಲ, ಜಿಂಕೆ, ಕೋತಿ ಮೊದಲಾದ ಪ್ರಾಣಿಗಳು ಕಾಡಿ ನಲ್ಲಿದ್ದರೆ ಚಿರತೆಗಳು ನಾಡಿಗೆ ಬರುವುದಿಲ್ಲ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

4-5 ವರ್ಷದಲ್ಲಿ ಚಿರತೆಗಳ ಸಂತಾನ ಹೆಚ್ಚಳ : ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕುವ ಸವಾಲು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮುಂದಿದೆ. ಕಳೆದ 4 – 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾಗಿದೆ. ಆಹಾರದ ಸಮಸ್ಯೆ ಕಾರಣ, ಚಿರತೆಗಳು ನಾಡಿನತ್ತ ಬರುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಯುಕ್ತವಾಗಿ ಪರಿಣಾಮಕಾರಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ದೇವರಾಜು ತಿಳಿಸಿದ್ದಾರೆ.

ಎಲ್ಲಿಲ್ಲಿ ಹಾವಳಿ? :

  • ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ,  ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ
  • ಹೊಂಗನೂರು ಸುತ್ತಮುತ್ತಲಿನ ಪ್ರದೇಶ
  • ಮಳೂರು ಹೋಬಳಿ, ವಿರುಪಾಕ್ಷಿಪುರ ಹೋಬಳಿಗಳಲ್ಲಿ ಹೆಚ್ಚಾದ ಕಾಡುಪ್ರಾಣಿಗಳ ಹಾವಳಿ.

ಕೇವಲ ದಾಳಿಯಾದಾಗ ಮಾತ್ರ ಒಂದು ಚಿರತೆಯನ್ನೋ, ಕರಡಿಯನ್ನೋ ಹಿಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ?. ರೈತರ ಅಹವಾಲು ಆಲಿಸುವ ಪರಿಪಾಠವನ್ನು ಜಿಲ್ಲಾಡಳಿತ, ಅರಣ್ಯ ಇಲಾಖೆ ಬೆಳೆಸಿಕೊಳ್ಳಬೇಕು. – ಸುಳ್ಳೇರಿ ಶಿವಣ್ಣ, ಪ್ರಗತಿಪರ ಕೃಷಿಕ, ಚನ್ನಪಟ್ಟಣ ತಾಲೂಕು

ಪ್ರಾಣಿಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಮತ್ತು ಸರ್ಕಾರ ವೈಜಾnನಿಕ ಯೋಜನೆ ರೂಪಿಸಬೇಕು. ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಇನ್ನಾದರೂ ಕೃಷಿಕರ ಬೆಳೆ ರಕ್ಷಿಸಬೇಕು. – ಸಿ.ಪುಟ್ಟಸ್ವಾಮಿ, ರೈತ ಸಂಘಟನೆ ಹಿರಿಯ ನಾಯಕರು, ಚನ್ನಪಟ್ಟಣ

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next