Advertisement
ಕಳವಳ: ಕಾಡು ಪ್ರಾಣಿಗಳ ಹಾವಳಿಯಿಂದ ಒಂದೆಡೆ ಕೈಗೆ ಬಂದ ರೈತರ ಫಸಲು ನಾಶವಾಗುತ್ತಿದ್ದರೆ, ಇನ್ನೊಂದೆಡೆ ರೈತರು ಮತ್ತೂಂದು ಜೀವನಾಡಿಯಾದ ಹೈನುಗಾರಿಕೆ ಮೂಲವಾದ ಹಸು-ಕರುಗಳ ಮೇಲೆ ಚಿರತೆಗಳು ಹಾಡ ಹಗಲೇ ದಾಳಿ ಮಾಡುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರೈತರ ಸಂಕಷ್ಟಕ್ಕೆ ಧಾವಿಸಬೇಕಾದ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದು ರೈತಾಪಿ ವರ್ಗವನ್ನು ಮತ್ತಷ್ಟು ಕಳವಳಕ್ಕೀಡು ಮಾಡಿದೆ. ಕಳೆದೊಂದು ವಾರದಲ್ಲಿ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ, ಹೊಂಗನೂರು ಸುತ್ತಮುತ್ತಲಿನ ಗ್ರಾಮಗಳಾದ ಹೊಡಿಕೆ ಹೊಸಹಳ್ಳಿ, ಕೋಡಿಪುರ, ನೀಲಸಂದ್ರ, ಕೂಡ್ಲೂರು ಬಳಿ ಕಣ್ವ ನದಿಯಲ್ಲಿ ಐದಾರು ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ಚಿಕ್ಕಮಳೂರು ಹಾಗೂ ಹೊಟ್ಟಿಗನ ಹೊಸಹಳ್ಳಿಯವರೆಗೂ ಕಾಡಾನೆಗಳ ಹಾವಳಿ ವಿಸ್ತರಿಸಿದೆ.
Related Articles
Advertisement
ಮೌನ: ಚಿರತೆಗಳ ಹಾವಳಿಯಿಂದ ಚಿಂತಾಕ್ರಾಂತ ವಾಗಿರುವ ಅರಣ್ಯ ಇಲಾಖೆ, ವನ್ಯಜೀವಿಗಳಿಂದ ಜನರು ಹಾಗೂ ಸಾಕು ಪ್ರಾಣಿಗಳನ್ನು ರಕ್ಷಿಸಲು ಜನಜಾಗೃತಿಗೆ ಮುಂದಾಗಿದೆ. ರಾತ್ರಿ ವೇಳೆ ಹೊರಗೆ ಮಲಗಿಕೊಳ್ಳಬೇಡಿ. ಸಾಕು ಪ್ರಾಣಿಗಳನ್ನು ಮನೆ ಯೊಳಗೆ ಕಟ್ಟಿಕೊಂಡು ಬಿಗಿಯಾಗಿ ಬಾಗಿಲು ಹಾಕಿಕೊಳ್ಳಿ. ಸಂಜೆ 6 ಗಂಟೆ ಬಳಿಕ ಒಬ್ಬಂಟಿಯಾಗಿ ಎಲ್ಲೂ ತಿರುಗಾಡಬೇಡಿ ಎಂದು ತಮಟೆ ಬಡಿದು ಪ್ರತಿ ಹಳ್ಳಿಯಲ್ಲೂ ಡಂಗೂರ ಸಾರುತ್ತಿದ್ದಾರೆಯೇ ವಿನಃ ಸಮಸ್ಯೆಯ ಮೂಲ ಹುಡುಕಿ ಸಂಪೂರ್ಣ ಚಿರತೆ ಹಿಡಿದು ಅಭಯಾರಣ್ಯಗಳಿಗೆ ಬಿಡುತ್ತಿಲ್ಲ.
ಸಮಸ್ಯೆಯಾಗಿಯೇ ಉಳಿದಿದೆ: ಕಳೆದ 4 – 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾ ಗಿದೆ. ಅವುಗಳಿಗೆ ಆಹಾರದ ಸಮಸ್ಯೆಯೂ ಉಂಟಾ ಗಿದೆ. ಆದರೆ, ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾ ರಿಕೆ ಸೇರಿದಂತೆ ಕಾಮಗಾರಿ ಹೆಚ್ಚಿದಂತೆ ಚಿರತೆಗಳು ನಾಡಿನತ್ತ ಆಹಾರಕ್ಕಾಗಿ ದಾಳಿ ಮಾಡುತ್ತಿವೆ. ಆದರೂ, ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ.
ಆಹಾರದ ಸಮಸ್ಯೆ ಆಗಿದೆ: ಚಿರತೆ ದಾಳಿಯ ಮೂಲ ಸಮಸ್ಯೆ ಯಾರಿ ಗೂ ಗೊತ್ತಿಲ್ಲ. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಬೇಕಾಗುವ ನೇರಳೆ, ಹಲಸು ಮರಗಳನ್ನು ಮತ್ತು ಗಿಡಮೂಲಿಕೆ ಗಿಡಗಳನ್ನು ಬೆಳೆಸುವ ಗೋಜಿಗೆ ಅರಣ್ಯ ಇಲಾಖೆ ಹೋಗುತ್ತಿಲ್ಲ. ಹೀಗಾಗಿ ಅಲ್ಲಿ ಸಸ್ಯ ಹಾರಿ ಪ್ರಾಣಿಗಳು ವಾಸಿಸುತ್ತಿಲ್ಲ. ಸಸ್ಯಾಹಾರಿ ಪ್ರಾಣಿ ಗಳನ್ನು ತಿಂದು ಜೀವಿಸುವ ಚಿರತೆಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಅರಣ್ಯ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ.ವೆಚ್ಚ ಮಾಡುತ್ತದೆ. ಆದರೆ, ಕಾಡನ್ನು ವೈಜ್ಞಾನಿಕವಾಗಿ ಬೆಳೆಸುತ್ತಿಲ್ಲ. ನೀಲಗಿರಿ, ಅಕೇಶಿಯಾ ಗಿಡಗಳನ್ನು ಬೆಳೆಸಿದರೆ ಪ್ರಾಣಿಗಳಿಗೆ ಆಗುವ ಪ್ರಯೋಜನ ವೇನು?. ಇದರಿಂದ ಸಸ್ಯಾಹಾರಿ ಮತ್ತು ಮಾಂಸಾ ಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಅನಿವಾರ್ಯ ವಾಗಿ ಎದುರಾಗುತ್ತದೆ. ಹೆಚ್ಚಾಗಿ ಮೊಲ, ಜಿಂಕೆ, ಕೋತಿ ಮೊದಲಾದ ಪ್ರಾಣಿಗಳು ಕಾಡಿ ನಲ್ಲಿದ್ದರೆ ಚಿರತೆಗಳು ನಾಡಿಗೆ ಬರುವುದಿಲ್ಲ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.
4-5 ವರ್ಷದಲ್ಲಿ ಚಿರತೆಗಳ ಸಂತಾನ ಹೆಚ್ಚಳ : ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕುವ ಸವಾಲು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮುಂದಿದೆ. ಕಳೆದ 4 – 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾಗಿದೆ. ಆಹಾರದ ಸಮಸ್ಯೆ ಕಾರಣ, ಚಿರತೆಗಳು ನಾಡಿನತ್ತ ಬರುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಯುಕ್ತವಾಗಿ ಪರಿಣಾಮಕಾರಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ದೇವರಾಜು ತಿಳಿಸಿದ್ದಾರೆ.
ಎಲ್ಲಿಲ್ಲಿ ಹಾವಳಿ? :
- ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ, ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶ
- ಹೊಂಗನೂರು ಸುತ್ತಮುತ್ತಲಿನ ಪ್ರದೇಶ
- ಮಳೂರು ಹೋಬಳಿ, ವಿರುಪಾಕ್ಷಿಪುರ ಹೋಬಳಿಗಳಲ್ಲಿ ಹೆಚ್ಚಾದ ಕಾಡುಪ್ರಾಣಿಗಳ ಹಾವಳಿ.