Advertisement

ವಿಮಾನದಲ್ಲಿ ಚಿರತೆ ಮರಿ!

01:17 AM Feb 03, 2019 | |

ಚೆನ್ನೈ: ಚಿರತೆ ಮರಿಯೊಂದು ಥಾಯ್ಲೆಂಡ್‌ನಿಂದ ಚೆನ್ನೈಗೆ ಆಗಮಿಸಿದೆ! ಅದು ಹೇಗೆ ಅಂದುಕೊಂಡಿರಾ? ಪ್ರಯಾಣಿಕರೊಬ್ಬರು ಅಕ್ರಮವಾಗಿ ಚಿರತೆ ಮರಿಯನ್ನು ವಿಮಾನದಲ್ಲಿ ತಂದಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬೆಳಗ್ಗೆ ಅದನ್ನು ವಶಪಡಿಸಿಕೊಂಡಿದ್ದಾರೆ. ಕಾಹ ಮೊಯ್ದೀನ್‌ ಎಂಬಾತ ವಿಮಾನದಿಂದ ಇಳಿದು ಹೊರಬರುತ್ತಿದ್ದಾಗ ತಪಾಸಣೆ ವೇಳೆ, ಆತನ ಬ್ಯಾಗೇಜ್‌ನಲ್ಲಿ ನರಳಾಟದಂಥ ಸದ್ದು ಕೇಳಿಸಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಪ್ಲಾಸ್ಟಿಕ್‌ ಪೆಟ್ಟಿಗೆಯಲ್ಲಿ ಚಿರತೆ ಮರಿಯನ್ನು ಇರಿಸಿದ್ದು ಬೆಳಕಿಗೆ ಬಂದಿದೆ. ಮರಿ 1.1 ಕೆ.ಜಿ. ತೂಕ ಇತ್ತು. ಈ ವಿಚಾರವನ್ನು ಥಾಯ್ಲೆಂಡ್‌ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಮೊಯ್ದೀನ್‌ನನ್ನು ಅರಣ್ಯ ಇಲಾಖೆ ವಶದಲ್ಲಿರಿಸಿಕೊಂಡಿದೆ. ಚಿರತೆ ಮರಿ ಗಾಬರಿಗೊಂಡಂತಿತ್ತು. ಸದ್ಯ ಅದು ಅರಣ್ಯಾಧಿಕಾರಿಗಳ ಆಶ್ರಯದಲ್ಲಿದೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಅಡಿ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next