ತಿ.ನರಸೀಪುರ: ಚಿರತೆ ದಾಳಿಗೆ ತುತ್ತಾದ ಬಾಲಕನ ಸಾವಿನಿಂದ ನೊಂದ ಹೊರಳಹಳ್ಳಿ ಗ್ರಾಮಸ್ಥರು, ತಾಲೂಕು ಕುರುಬರ ಸಂಘದ ಮುಖಂಡರು, ರೈತರು, ದಲಿತ ಸಂಘಟನೆಗಳು ಸೇರಿದಂತೆ ಹಲವಾರು ಮಂದಿ ಜಮಾಯಿಸಿ ಪಟ್ಟಣದ ಕಪಿಲಾ ಮೇಲ್ಸೇತುವೆ ಬಳಿ ಪ್ರತಿಭಟನಾ ಧರಣಿ ನಡೆಸಿದರು.
ತಾಲೂಕಿನಲ್ಲಿ ಚಿರತೆ ದಾಳಿ ಯಿಂದಾಗಿ ನಾಲ್ವರು ಪ್ರಾಣ ತೆತ್ತಿದ್ದಾರೆ. ನಿರಂತರವಾಗಿ ಈ ಘಟನೆಗಳು ನಡೆಯುತ್ತಿದ್ದರೂ ಕೂಡ ಅರಣ್ಯ ಇಲಾಖೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿಲ್ಲ. ಇದರಿಂ ದಾಗಿ ಮತ್ತೆ ಮತ್ತೆ ಈ ಘಟನೆಗಳು ಮರುಕಳಿಸುತ್ತಿದ್ದು ಜನರ ಪ್ರಾಣ ರಕ್ಷಣೆ ಇಲ್ಲವಾಗಿದೆ ಜನಸಾಮಾನ್ಯರು, ಬಡವರು ರೈತರು ತಮ್ಮ ಜಮೀನುಗಳಿಗೆ ತರಲು ಬಹಳಷ್ಟು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡ ಯಾವುದೇ ರೀತಿಯ ಸರಿಯಾದ ಕ್ರಮವನ್ನು ವಹಿಸುತ್ತಿಲ್ಲ. ಸರ್ಕಾರ ಧೋರಣೆ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಅಶ್ವಿನ್ ಕುಮಾರ್ ಜಿಲ್ಲಾಧಿಕಾರಿ ರಾಜೇಂದ್ರ ಪ್ರತಿಭಟನಾಕಾರರ ಮನವಿ ಆಲಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಸಂತೃಪ್ತಿ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಳೆದ 3 ತಿಂಗಳಿಂದ ಚಿರತೆ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ. ಮೊದಲ ಪ್ರಕರಣ ಆದ ವೇಳೆ ಕ್ರಮವಹಿಸಲು ನಾವು ಒತ್ತಾಯ ಮಾಡಿದ್ದೆವು. ಆದರೆ ಅರಣ್ಯ ಇಲಾಖೆ ಗಮನಹರಿಸಿಲ್ಲ ಈಗ ನಾಲ್ವರು ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಶಾಸಕ ಅಶ್ವಿನ್‌ಕುಮಾರ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೂ ಸರ್ಕಾರ ಸೂಕ್ತ ಗಮನಹರಿಸಿಲ್ಲ. ಅಗತ್ಯ ಸಹಕಾರ ನೀಡಿಲ್ಲ ಇದರ ಫಲ ಪ್ರತಿಭಟನೆ ಹಂತ ತಲುಪಿದೆ ಎಂದರು.
ಸುಮಾರು ಎರಡು ಗಂಟೆ ಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನಾ ಧರಣಿ ನಡೆಯಿತು. ಇದರಿಂದಾಗಿ ಮೈಸೂರು, ಚಾಮ ರಾಜನಗರ ಕೊಳ್ಳೇಗಾಲ ಮಂಡ್ಯ ಮತ್ತಿತರ ಕಡೆಗಳಿಗೆ ತೆರಳಲು ಹೊರಟ್ಟಿದ್ದ ಜನರು ಪ್ರತಿಭ ಟನೆಯಿಂದಾಗಿ ಪರದಾಡುವಂತಾಯಿತು.