Advertisement

ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!

08:43 AM Aug 13, 2022 | Team Udayavani |

ಉಡುಪಿ : ಹೆರ್ಗ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದ್ಲಾಯ ಅವರ ಮನೆಯ ಅಂಗಳದಲ್ಲಿದ್ದ ಶ್ವಾನಕ್ಕೆ ಚಿರತೆ ಹೊಂಚು ಹಾಕಿಕೊಂಡು ಬಂದಿದ್ದು, ಅದೃಷ್ಟವಶಾತ್‌ ಶ್ವಾನ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

Advertisement

ಕುತ್ತಿಗೆಯ ಬೆಲ್ಟ್ ಸಹಿತ ಸಾಕು ನಾಯಿಯನ್ನು ಮನೆ ಎದುರು ಕಟ್ಟಲಾಗಿತ್ತು. ರಾತ್ರಿ ಸುಮಾರು 1 ಗಂಟೆ ವೇಳೆ ಚಿರತೆ ಆಗಮಿಸಿ ನಾಯಿಯನ್ನು ಕೊಲ್ಲಲು ಯತ್ನಿಸಿದೆ. ಈ ವೇಳೆ ನಾಯಿ ಜೋರಾಗಿ ಬೊಗಳಿ ಸತ್ತಂತೆ ನಟಿಸಿದ ಬಳಿಕ ಮನೆಯ ಮಾಲಕರು ಹೊರಭಾಗದ ಲೈಟ್‌ಹಾಕಿದ್ದು, ಈ ವೇಳೆ ಚಿರತೆ ಓಡಿ ಹೋಗಿದೆ.

ಘಟನೆಯ ದೃಶ್ಯಾವಳಿ ಮನೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಈ ಹಿಂದೆಯೂ ಚಿರತೆ ಪ್ರತ್ಯಕ್ಷವಾಗಿದ್ದ ಚಿರತೆ ಮತ್ತೆ ಕಾಣಸಿಕ್ಕಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯವರು ಆಯಕಟ್ಟಿನ ಸ್ಥಳದಲ್ಲಿ ಬೋನ್‌ ಇರಿಸಿದ್ದಾರೆ. ನಾಯಿಯ ಕುತ್ತಿಗೆ ಭಾಗದಲ್ಲಿ ಹಲವಾರು ತರಚಿದ ಗಾಯಗಳು ಉಂಟಾಗಿವೆ. ಸದ್ಯಕ್ಕೆ ನಾಯಿಗೆ ಮನೆಯ ಒಳಭಾಗದಲ್ಲಿ ಆರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next