Advertisement

ಭರಮಸಾಗರ: ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

03:58 PM Jul 05, 2022 | Team Udayavani |

ಭರಮಸಾಗರ: (ಚಿತ್ರದುರ್ಗ) : ಸಮೀಪದ‌ ಅಳಗವಾಡಿಯ  ಉಣ್ಣೆ ಬಸಪ್ಪನ ಗುಡಿ ಬಳಿ  ಚಿರತೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದನ್ನು ಕಾರೊಂದರ ಪ್ರಯಾಣಿಕರು  ತಮ್ಮ ಮೊಬೈಲ್ ನಲ್ಲಿ  ಸೆರೆ ಹಿಡಿದಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಚಿರತೆಗಳು ಅಳಗವಾಡಿ ಗುಡ್ಡಗಳಿಗೆ ಹೊಂದಿಕೊಂಡ ಅರಣ್ಯ ಭಾಗಗಳಲ್ಲಿ ನೆಲೆಸಿದೆ. ಸೋಮವಾರ ಕಾರಿನಲ್ಲಿ‌ ಪ್ರಯಾಣಿಸುತ್ತಿದ್ದವರೊಬ್ಬರಿಗೆ ರಸ್ತೆ ಪಕ್ಕದಲ್ಲಿ ಚಿರತೆ ದರ್ಶನ ನೀಡಿದೆ. ಚಿರತೆಯ ವಿಡಿಯೋ ಮಾಡಿ ಕಾರು ಪ್ರಯಾಣಿಕರು ಸ್ಥಳೀಯ ರೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.  ಚಿರತೆ ವಿಡಿಯೋ ಅಳಗವಾಡಿ ಸುತ್ತಮುತ್ತಲಿನ ಓಬಳಾಪುರ, ಪಳಕೆಹಳ್ಳಿ, ಬಾವಿಹಾಳ್, ಜಮ್ಮೆನಹಳ್ಳಿ, ದೊಡ್ಡಿಗನಾಳ್ , ಹಳವುದರ, ಪುಡಕಲಹಳ್ಳಿ ಸೇರಿದಂತೆ ಇತರೆ ಹಳ್ಳಿಗಳ ಜನರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.

ಇದೀಗ ಚಿರತೆಗಳ ಇರುವಿಕೆ ಸ್ಥಳೀಯ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಮನವರಿಕೆ ಆಗಿದೆ. ಅಲ್ಲದೆ ನಾಲ್ಕಾರು ಚಿರತೆಗಳು ಇಲ್ಲಿನ ಅರಣ್ಯದಲ್ಲಿ ನೆಲೆಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.

ಪ್ರತಿ ವರ್ಷ ಈ ದಿನಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ತರುವಾಯ ಕಾಡು ಹಂದಿಗಳ ಕಾಟ ಶುರುವಾಗುತ್ತಿತ್ತು. ಬಿತ್ತನೆ ಮಾಡಿದ ದಿನದಿಂದ ಸರಿಸುಮಾರು ಹತ್ತು ದಿನಗಳ ವರೆಗೆ ರೈತರಿಗೆ ಬಿತ್ತನೆ ಮಾಡಿದ ಜಮೀನುಗಳನ್ನು ಹಂದಿಗಳ ದಾಳಿಗೆ ತುತ್ತಾಗದಂತೆ ರಾತ್ರಿಯೆಲ್ಲ ಕಾವಲು ಕಾಯಬೇಕಿತ್ತು. ಆದರೆ ಇಲ್ಲಿನ ಗುಡ್ಡಗಳಲ್ಲಿ ಚಿರತೆಗಳು ಇರುವುದರಿಂದಲೇ ಏನು ಈ ವರ್ಷ ಹಂದಿಗಳ ಕಾಟ ಕಡಿಮೆ ಆಗಿದೆ.

ಇದರಿಂದ ನಮ್ಮಲ್ಲಿನ ಬಿತ್ತನೆ ಮಾಡಿದ ಮೆಕ್ಕೆಜೋಳ ಹೊಲಗಳಲ್ಲಿ ರಾತ್ರಿ ಕಾವಲು ಮಾಡುವುದನ್ನು ಕೆಲ ರೈತರು ಕೈ ಬಿಟ್ಟಿದ್ದರು. ಹೀಗಾಗಿ ಚಿರತೆಗಳ ಇರುವಿಕೆ ಈ ಮೊದಲೇ ನಮಗೆ ಖಚಿತವಾಗಿತ್ತು ಎನ್ನುತ್ತಾರೆ ಅಳಗವಾಡಿ ಗ್ರಾಮಸ್ಥರು.

Advertisement

ಒಟ್ಟಾರೆ ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ  ಸಂಚರಿಸುವವರು ಚಿರತೆಗಳ ದಾಳಿಗೆ ಒಳಗಾಗದೆ ಎಚ್ಚರಿಕೆಯಿಂದ ಓಡಾಡುವುದು ಉತ್ತಮ.

 

Advertisement

Udayavani is now on Telegram. Click here to join our channel and stay updated with the latest news.

Next