Advertisement

ಆದ್ಯತಾ ವಲಯ ಬೆಳವಣಿಗೆಗೆ ಸಾಲ ನೀಡಿ

07:59 PM Oct 27, 2021 | Team Udayavani |

ಬಳ್ಳಾರಿ: ಸಮಾಜದಲ್ಲಿ ದುರ್ಬಲರಿಗೆ, ಅದ್ಯತಾ ವಲಯಕ್ಕೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆ ವಲಯಗಳ ಬೆಳವಣಿಗೆಗೆ ಬ್ಯಾಂಕ್‌ ಗಳು ಸಹಕಾರ ನೀಡಬೇಕು ಎಂದು ಜಿಪಂ ಸಿಇಒ ನಂದಿನಿ ಕೆ.ಆರ್‌. ಅವರು ಹೇಳಿದರು.

Advertisement

ಆಜಾದಿ ಕಾ ಅಮೃತ್‌ ಮಹೋತ್ಸವ ಅಂಗವಾಗಿ ನಗರದ ಕಮ್ಮ ಭವನದಲ್ಲಿ ಜಿಲ್ಲಾ ಬ್ಯಾಂಕರ್ಸ್‌ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕ್‌ ಗಳು ಮಹಿಳಾ ಸ್ವಸಹಾಯ ಗುಂಪುಗಳು, ರೈತರು ಒಳಗೊಂಡಂತೆ ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯ ಕಲ್ಪಿಸಬೇಕು.

ಸಾಲ ಸೌಲಭ್ಯ ಪಡೆಯುವ ಪ್ರತಿಯೊಬ್ಬರು ಪಡೆದ ಸಾಲವನ್ನು ಎನ್‌ ಇಪಿ (ಅನುತ್ಪಾದಕ ಆಸ್ತಿ ಅಥವಾ ವಸೂಲಾಗದ ಸಾಲ) ಮಾಡದೇ, ಮರು ಪಾವತಿ ಮಾಡಿದರೆ ಮತ್ತಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.

ಬ್ಯಾಂಕ್‌ ಗಳು ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯ ಒದಗಿಸುವ ಕೆಲಸ ಮಾಡುವ ಮೂಲಕ ಜನರ ಅಲೆದಾಟವನ್ನು ತಪ್ಪಿಸಬೇಕು. ಸರ್ಕಾರಿ ಇಲಾಖೆಗಳ ಮುಖಾಂತರ ಬ್ಯಾಂಕ್‌ ನಿಂದ ತುಂಬಾ ಜನರು ಸಾಲ ಸೌಲಭ್ಯ ಪಡೆಯುತ್ತಿದ್ದು, ಇಲಾಖೆಗಳು ಗುರುತಿಸುವ ಫಲಾನುಭವಿಗಳು, ಸಾಲ ಮರು ಪಾವತಿ ಮಾಡುವವರೇ ಎನ್ನುವುದನ್ನು ಗಮನಿಸಿ ಅರ್ಹರಾದವರಿಗೆ ಸಾಲ ಕೊಡಿಸುವ ಕೆಲಸ ಮಾಡಿ ಎಂದು ಸೂಚಿಸಿದರು.

ಆರ್ಥಿಕ ಅಭಿವೃದ್ಧಿ, ಸುಸ್ಥಿರ ಬೆಳವಣಿಗೆಗೆ, ಆರ್ಥಿಕ ಸ್ಥಿತಿ ಸುಧಾರಣೆಗೆ ಇಂಥ ಕಾರ್ಯಕ್ರಮ ನೆರವಾಗಲಿದೆ. ಸ್ವಸಹಾಯ ಗುಂಪುಗಳು ಪಡೆದ ಸಾಲವನ್ನು ಆದಾಯ ವೃದ್ಧಿಸುವ ಕೆಲಸಕ್ಕೆ ಬಳಕೆ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರು ಮಾತನಾಡಿ, ಸಾಲಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಿ, ರೈತ ಸಮುದಾಯಕ್ಕೆ ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ನೀಡುವ ಕೆಲಸ ಬ್ಯಾಂಕ್‌ ಗಳಿಂದ ನಡೆಯಬೇಕು. ಸೂಕ್ತ ಸಮಯಕ್ಕೆ ಸಾಲ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

Advertisement

ಸೈಬರ್‌ ಕ್ರೈಂ ಬಗ್ಗೆ ಬ್ಯಾಂಕ್‌ ಗ್ರಾಹಕರು, ಸಾರ್ವಜನಿಕರು ಎಚ್ಚರಿಕೆಯಿಂದಿರಿ. ಫೇಸ್‌ ಬುಕ್‌, ವಾಟ್‌ಸ್ಯಾಪ್‌ ಗಳಲ್ಲಿ ಬರುವ ಸಂದೇಶ ಮತ್ತು ನಕಲಿ ಕರೆಗಳ ಬಗ್ಗೆ ಜಾಗೃತಿ ಅಗತ್ಯ. ಇಂಥ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ನಡೆದರೆ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದರು. ಆನ್‌ ಲೈನ್‌ ಮೂಲಕ ಎಲ್ಲ ಸೌಲಭ್ಯಗಳು ಬೆರಳಂಚಿನಲ್ಲಿ ಸಿಗಲಿದ್ದು ಇದರ ಜೊತೆಗೆ ಸೈಬರ್‌ ಕ್ರೈಂಗಳು ಕೂಡ ಜಾಸ್ತಿಯಾಗುತ್ತಿವೆ.

ಇದನ್ನು ತಡೆಯಲು ಸಾರ್ವಜನಿಕರು ಗಮನಹರಿಸಬೇಕಿದೆ ಎಂದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ನವೀನ್‌ ಕುಮಾರ್‌ ಪ್ರಾಸ್ತವಿಕವಾಗಿ ಮಾತನಾಡಿ, ಎಲ್ಲ ಬ್ಯಾಂಕ್‌ ಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದ್ದು, ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಬ್ಯಾಂಕ್‌ ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಜನ ಜಾಗೃತಿ ಹಾಗೂ ಅರಿವು ಮೂಡಿಸಲಾಗುತ್ತದೆ ಎಂದರು.

ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಗ್ರಾಹಕರಿಗೆ ಅರಿವು, ಸೈಬರ್‌ ಕ್ರೆ„ಂ ಕುರಿತು ಜಾಗೃತಿ, ಡಿಜಿಟಲ್‌ ಸೇವೆಯ ಸದುಪಯೋಗ ಸೇರಿ ಹತ್ತು ವಿಷಯಗಳ ಮಾಹಿತಿ ಪಡೆಯಿರಿ ಎಂದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ ನ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಡಿ.ಸಿ. ಮೋಹನ್‌ ಕುಮಾರ್‌, ಎಸ್‌ ಬಿಐ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಪ್ರದೀಪ್‌ ನಾಯರ್‌, ಹುಬ್ಬಳ್ಳಿಯ ಕೆನರಾ ಬ್ಯಾಂಕ್‌ ವೃತ್ತ ಕಚೇರಿ ಜನರಲ್‌ ಮ್ಯಾನೇಜರ್‌ಜೆ.ಎಸ್‌.ರವಿ ಸುಧಾಕರ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next