Advertisement

ಲಿಂಬೆ ಹಣ್ಣಿಗೆ ಚಿನ್ನದ ಬೆಲೆ : ಮದುವೆಯಲ್ಲೂ ವಧೂ-ವರರಿಗೆ ಲಿಂಬೆ ಹಣ್ಣು ಗಿಫ್ಟ್

10:35 PM Apr 17, 2022 | Team Udayavani |

ನವದೆಹಲಿ: ಪೆಟ್ರೋಲ್‌ ಬೆಲೆ ಏರಿಕೆಯಾದಾಕ್ಷಣ ಮದುವೆಗಳಲ್ಲಿ ಪೆಟ್ರೋಲ್‌ ಕ್ಯಾನ್‌ಗಳನ್ನೇ ಉಡುಗೊರೆಯಾಗಿ ಕೊಟ್ಟಿರುವ ಸಾಕಷ್ಟು ಉದಾಹರಣೆಗಳಿವೆ.

Advertisement

ಈಗ ವಿಶೇಷವಾಗಿ ಲಿಂಬೆ ಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಆ ಹಿನ್ನೆಲೆ ಮದುವೆಗಳಲ್ಲಿ ವಧೂ-ವರರ ಸ್ನೇಹಿತರು ಲಿಂಬೆ ಹಣ್ಣನ್ನೇ ಉಡುಗೊರೆಯಾಗಿ ಕೊಡಲಾರಂಭಿಸಿದ್ದಾರೆ.

ಗುಜರಾತ್‌ನ ರಾಜಕೋಟ್‌ನಲ್ಲಿ ಇತ್ತೀಚೆಗೆ ಮದುವೆಯೊಂದು ಜರುಗಿದ್ದು, ಅದರಲ್ಲಿ ವರನಿಗೆ ಆತನ ಸ್ನೇಹಿತರು ಲಿಂಬೆ ಹಣ್ಣನ್ನು ಉಡುಗೊರೆಯಾಗಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಲಿಂಬೆ ಹಣ್ಣು ಅತಿ ಹೆಚ್ಚು ಬಳಕೆಯಾಗುತ್ತಿದ್ದು, ಒಂದು ಕೆಜಿ ಲಿಂಬೆ ಹಣ್ಣಿನ ಬೆಲೆ 200-250 ರೂ. ತಲುಪಿದೆ. ಒಂದು ಲಿಂಬೆ ಹಣ್ಣಿಗೆ 10-15 ರೂ. ಬೆಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next