Advertisement

ಅಭ್ಯಾಸ ಪಂದ್ಯ: ಚೇತೇಶ್ವರ್‌ ಪೂಜಾರ ವಿಫ‌ಲ, ರಿಷಭ್‌ ಪಂತ್‌ ಯಶಸ್ವಿ

11:12 PM Jun 24, 2022 | Team Udayavani |

ಲೀಸೆಸ್ಟರ್‌: ಚತುರ್ದಿನ ಅಭ್ಯಾಸ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ಖಾತೆ ತೆರೆಯುವಲ್ಲಿ ವಿಫ‌ಲರಾಗಿದ್ದಾರೆ. ಆದರೆ ರಿಷಭ್‌ ಪಂತ್‌ 76 ರನ್‌ ಬಾರಿಸಿ ಗಮನ ಸೆಳೆದರು. ಇವರಿಬ್ಬರೂ ಲೀಸೆಸ್ಟರ್‌ಶೈರ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

ಭಾರತ ಮೊದಲ ದಿನದ ಮೊತ್ತಕ್ಕೇ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು (8ಕ್ಕೆ 246). ಜವಾಬು ನೀಡಿದ ಲೀಸೆಸ್ಟರ್‌ಶೈರ್‌ 244ಕ್ಕೆ ಆಲೌಟ್‌ ಆಯಿತು.

ಮೊಹಮ್ಮದ್‌ ಶಮಿ ಮತ್ತು ರವೀಂದ್ರ ಜಡೇಜ ತಲಾ 3 ವಿಕೆಟ್‌; ಶಾರ್ದೂಲ್ ಠಾಕೂರ್‌ ಮತ್ತು ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಉರುಳಿಸಿರು.

ಇದನ್ನೂ ಓದಿ:ವಿಂಬಲ್ಡನ್‌-2022: ಸೆರೆನಾ ವಿಲಿಯಮ್ಸ್‌ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್‌

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಗಳಿಸಿ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next