Advertisement

ಭಾರತಕ್ಕಿಂದು ಅಭ್ಯಾಸ ಪಂದ್ಯ: ರೋಹಿತ್ ವಿರುದ್ಧ ಆಡಲಿದ್ದಾರೆ ಪೂಜಾರ, ಬುಮ್ರಾ ರಿಷಭ್

09:26 AM Jun 23, 2022 | Team Udayavani |

ಲೀಸೆಸ್ಟರ್‌: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಇಂದು ಅಭ್ಯಾಸ ಪಂದ್ಯ ಆಡಲಿದೆ. ಲೀಸೆಸ್ಟರ್‌ಶೈರ್ ವಿರುದ್ಧ ಗ್ರೇಸ್ ರೋಡ್ ಮೈದಾನದಲ್ಲಿ ಇಂದು ರೋಹಿತ್ ಶರ್ಮಾ ಪಡೆ ಅಭ್ಯಾಸ ಪಂದ್ಯವಾಡುತ್ತಿದೆ.

Advertisement

ನಾಲ್ಕು ದಿನಗಳ ಅಭ್ಯಾಸ ಪಂದ್ಯಕ್ಕೆ ಎರಡು ತಂಡಗಳನ್ನು ಪ್ರಕಟಿಸಲಾಗಿದೆ. ಲೀಸೆಸ್ಟರ್‌ಶೈರ್ ಪರವಾಗಿ ಭಾರತದ ಚೇತೇಶ್ವರ ಪೂಜಾರ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿಧ್ ಕೃಷ್ಣ ಕಣಕ್ಕಿಳಿಯಲಿದ್ದಾರೆ. ಸ್ಯಾಮುಯೆಲ್ ಇವಾನ್ಸ್ ಲೀಸೆಸ್ಟರ್‌ಶೈರ್ ತಂಡದ ನಾಯಕನಾಗಿದ್ದಾರೆ.

ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಶರ್ಮಾ ಜೊತೆಗೆ ಶುಭ್ಮನ್ ಗಿಲ್ ಇನ್ನಿಂಗ್ಸ ಆರಂಭಿಸಲಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿ ಶ್ರೀಕರ್ ಭರತ್ ಮೇಲಿದೆ.

ಇದನ್ನೂ ಓದಿ:ಇಂದಿನಿಂದ ರಿಷಭ್‌ ‘ಹರಿಕಥೆ ಅಲ್ಲ ಗಿರಿಕಥೆ’ ಶುರು

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಕಳೆದ ವರ್ಷದ ಸರಣಿಯಲ್ಲಿ ಬಾಕಿ ಉಳಿದಿದ್ದ ಏಕೈಕ ಟೆಸ್ಟ್ ಪಂದ್ಯ ಜು.1ರಿಂದ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಾಸ್ಟನ್ ನಲ್ಲಿ ನಡೆಯಲಿದೆ. ಬಳಿಕ ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.

Advertisement

ಅಭ್ಯಾಸ ಪಂದ್ಯಕ್ಕೆ ತಂಡಗಳು

ಲೀಸೆಸ್ಟರ್‌ಶೈರ್ ತಂಡ: ಸ್ಯಾಮ್ಯುಯೆಲ್ ಇವಾನ್ಸ್ (ನಾ), ರೆಹಾನ್ ಅಹ್ಮದ್, ಸ್ಯಾಮ್ಯುಯೆಲ್ ಬೇಟ್ಸ್ (ವಿ.ಕೀ), ನಾಥನ್ ಬೌಲಿ, ವಿಲ್ ಡೇವಿಸ್, ಜೋಯ್ ಎವಿಸನ್, ಲೂಯಿಸ್ ಕಿಂಬರ್, ಅಬಿದಿನ್ ಸಕಾಂಡೆ, ರೋಮನ್ ವಾಕರ್, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ

ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶ್ರೀಕರ್ ಭರತ್ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next