Advertisement

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

01:24 AM May 30, 2024 | Team Udayavani |

ಮಂಗಳೂರು: ಪದವಿ ಶಿಕ್ಷಣ ಪೂರೈಸಿ ಮೂರು ವರ್ಷಗಳ ಬಳಿಕ ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದಲ್ಲಿ ಮತ ಚಲಾಯಿಸಲು ಅರ್ಹತೆ ಪಡೆಯುತ್ತಾರೆ. ಆದರೆ ಲೋಕಸಭೆ-ವಿಧಾನಸಭೆ ಚುನಾವಣೆಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಇರುವ ಉತ್ಸಾಹವನ್ನು ವಿಧಾನ ಪರಿಷತ್‌ನ ಈ ಚುನಾವಣೆಗಳಲ್ಲಿ ಮತದಾರರು ತೋರಿಸಿಲ್ಲ.

Advertisement

ಒಮ್ಮೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದರೂ ಆರು ವರ್ಷಗಳ ಬಳಿಕ ಮತ್ತೆ ನೋಂದಣಿ ಮಾಡಿದರೆ ಮಾತ್ರ ಮತದಾನದ ಹಕ್ಕು. ಸದ್ಯ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಮತದಾನ ಮಾಡಲು ಅರ್ಹತೆ ಹೊಂದಿರುವ ಅಂದಾಜು 15 ಲಕ್ಷ ಮಂದಿಯ ಪೈಕಿ ಮತದಾನ ಮಾಡಲು ಬಯಸಿದವರು ಕೇವಲ 85 ಸಾವಿರ ಮಾತ್ರ.

ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಕ್ರಮಬದ್ಧವಾದ ನೋಂದಣಿ ಅವಶ್ಯ. ಮೊದಲೆಲ್ಲ ನೋಂದಣಿ ಪ್ರಕ್ರಿಯೆ ಸುಲಭವಿತ್ತು. ರಾಜಕೀಯ ಪಕ್ಷದವರು, ಸಂಘಟನೆಯವರು ಆ ಕಾರ್ಯ ಮಾಡಿಸುತ್ತಿದ್ದರು. ಆದರೆ ಈ ಬಾರಿ ಮತದಾರರು ಸ್ವತಃ ತಹಶೀಲ್ದಾರರ ಕಚೇರಿಗೆ ತೆರಳಿ ನಿಗದಿತ ಅರ್ಜಿ ಭರ್ತಿ ಮಾಡಿ, ಪದವಿ ಪ್ರಮಾಣಪತ್ರ ಸಹಿತ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ನಿಯಮ ಮಾಡಿದ ಕಾರಣ ಸರಕಾರಿ ಕಚೇರಿಗೆ ಹೋಗಿ ಕಾದುಕುಳಿತು ನೋಂದಣಿ ಮಾಡುವ ರಗಳೆಯೇ ನಮಗೆ ಬೇಡವೆಂದು ಕುಳಿತವರು ಹಲವು ಮಂದಿ.

ಈ ಮಧ್ಯೆ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 23,402 ಮತದಾರರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next