Advertisement

ಟಿಕೆಟ್‌ ಕೊಡಿಸುವಲ್ಲಿ ಡಿಕೆಶಿ, ಸಿದ್ದು ಯಶಸ್ವಿ

11:02 PM Nov 22, 2021 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಹೈಕಮಾಂಡ್‌ ಮಣೆ ಹಾಕಿದ್ದರೆ ಮತ್ತೂಬ್ಬ ನಾಯಕ ಕೆ.ಎಚ್‌.ಮುನಿಯಪ್ಪ ಅವರ ಮಾತಿಗೆ ಸೊಪ್ಪು ಹಾಕಿಲ್ಲ.

Advertisement

ಬಳ್ಳಾರಿ ಕ್ಷೇತ್ರದ ವಿಚಾರದಲ್ಲಿ ಕೊಂಡಯ್ಯ ಅವರಿಗೆ ಮತ್ತೊಮ್ಮೆ ಟಿಕೆಟ್‌ ಕೊಡಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ ಮಟ್ಟದಲ್ಲಿ ತಮ್ಮ ಪ್ರಭಾವ ಸಾಬೀತುಪಡಿಸಿಕೊಂಡರೆ ಅಲ್ಲಿ ಮುಂಡರಗಿ ನಾಗರಾಜ್‌ಗೆ ಟಿಕೆಟ್‌ ಕೊಡಿಸಲು ಪಟ್ಟು ಹಿಡಿದಿದ್ದ ಕೆ.ಎಚ್‌.ಮುನಿಯಪ್ಪ ಹಿನ್ನಡೆ ಅನುಭವಿಸುವಂತಾಗಿದೆ.

ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಸೋಮವಾರ ಮಧ್ಯಾಹ್ನವೇ ಅನಿಲ್‌ಕುಮಾರ್‌ಗೆ ಬಿ ಫಾರಂ ನೀಡಲಾಗಿದೆ ಎಂದು ಹೇಳಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಬರುವಂತೆ ಅವರು ಜಿಲ್ಲಾ ನಾಯಕರಿಗೆ ದೂರವಾಣಿ ಕರೆ ಮೂಲಕ ಆಹ್ವಾನ
ನೀಡಿದ್ದಾರೆ. ಇದರಿಂದಾಗಿ ಕೆಪಿಸಿಸಿ ಅಷ್ಟೇ ಅಲ್ಲದೆ ಎಐಸಿಸಿಯಲ್ಲೂ ಕೆ.ಎಚ್‌.ಮುನಿಯಪ್ಪ ಅವರ ಮಾತು ನಡೆಯದಂತಾಗಿದೆ.

ಬಳ್ಳಾರಿ-ವಿಜಯನಗರ ಕ್ಷೇತ್ರದ ಟಿಕೆಟ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕೆ.ಎಚ್‌.ಮುನಿಯಪ್ಪ ಅವರು ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ, ಮಾಜಿ ಸಚಿವರಾದ ಎಚ್‌.ಆಂಜನೇಯ, ಆರ್‌.ಬಿ.ತಿಮ್ಮಾಪುರ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಜತೆಗೂಡಿ ಸೋನಿಯಾಗಾಂಧಿಯವರಿಗೆ ಪತ್ರ ಬರೆದು ಆ ಜಿಲ್ಲೆಯಲ್ಲಿ ದಲಿತ ಎಡಗೈ ಸಮುದಾಯದ ಮುಂಡರಗಿ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಬೇಕು. ಅಲ್ಲಿನ ದಲಿತ ಸಮುದಾಯದ ಜನಸಂಖ್ಯೆಯಲ್ಲಿ ಶೇ.70ರಷ್ಟು ಎಡಗೈ ಸಮುದಾಯವಿದೆ ಎಂದು ಉಲ್ಲೇಖೀಸಲಾಗಿತ್ತು. ಇಷ್ಟಾದರೂ ಕೊಂಡಯ್ಯ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ

Advertisement

ಜೆಡಿಎಸ್‌ ಹೊಡೆತದ ಆತಂಕ
ಕೋಲಾರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದೆಯಾದರೂ ಜೆಡಿಎಸ್‌ ಯಾವ ರೀತಿ ಕಾರ್ಯತಂತ್ರ ಮಾಡಲಿದೆ ಎಂಬುದು ನಿಗೂಢವಾಗಿದೆ. ಇಲ್ಲಿ ಜೆಡಿಎಸ್‌ ಕೈಗೊಳ್ಳುವ ನಿಲುವು ಕಾಂಗ್ರೆಸ್‌ ಮೆಲೆ ಪರಿಣಾಮ ಬೀರಲಿದ್ದು ಜೆಡಿಎಸ್‌ ಯಾವ ರೀತಿ ಹೊಡೆತ ನೀಡಬಹುದೆಂಬ ಆತಂಕವೂ ಇದೆ.

ಜೆಡಿಎಸ್‌ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ಪಡೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು. ಕಾಂಗ್ರೆಸ್‌ ಸೋಲಿಸಲು ಜೆಡಿಎಸ್‌ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಗುಸು ಗುಸು ಪ್ರಾರಂಭವಾ ಗಿರುವುದು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕೆಲವೆಡೆ ಎದೆಬಡಿತ ಹೆಚ್ಚಿಸಿದೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next