Advertisement

“ಮನೆಮನೆಗೂ ಕಾನೂನು ಸೇವೆ ಒದಗಿಸಬೇಕಿದೆ’

04:40 PM May 08, 2022 | Team Udayavani |

ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸಮಿತಿ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ವತಿಯಿಂದ ಇಲ್ಲಿನ ತಹಶೀಲ್ದಾರ್‌ ಕಚೇರಿ, ತಾಲೂಕಾ ಆಸ್ಪತ್ರೆ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆಯಲ್ಲಿ ಕಾನೂನು ಸೇವಾ ಕೇಂದ್ರ ಆರಂಭಿಸಲಾಯಿತು.

Advertisement

ಸೇವಾ ಕೇಂದ್ರಗಳನ್ನು ಉದ್ಘಾಟಿಸಿ ಪ್ರಧಾನ ಸಿವಿಲ್‌ ಹಾಗೂ ಜೆ.ಎಂ.ಎಫ್‌.ಸಿ. ನ್ಯಾಯಾಧೀಶ ಫವಾಜ್‌ ಪಿ.ಎ. ಮಾತನಾಡಿ, ಕಾನೂನು ಸೇವಾ ಪ್ರಾ ಧಿಕಾರದ ವತಿಯಿಂದ ಮನೆ ಮನೆಗೂ ಕಾನೂನು ಸೇವೆ ಒದಗಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವವರಿಗೂ ಕೂಡಾ ಕಾನೂನು ನೆರವು ದೊರೆಯಬೇಕು. ಇಂದು ನಗರ ಪ್ರದೇಶದಲ್ಲಿ ಕಾನೂನು ನೆರವು ಕೇಂದ್ರ ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಆಯ್ದ ಗ್ರಾಪಂಗಳಲ್ಲಿ ಕೂಡಾ ಕಾನೂನು ಸೇವಾ ಕೇಂದ್ರ ತೆರೆಯಲಾಗುವುದು ಎಂದರು.

ಕಾನೂನು ಸೇವಾ ಕೇಂದ್ರದಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೇಮಕವಾದ ವಕೀಲರು ವಾರದಲ್ಲಿ ಎರಡು ದಿನ ಇಲ್ಲವೇ ಆರು ದಿನ ಕರ್ತವ್ಯ ನಿರ್ವಹಿಸುತ್ತಾರೆ. ಅಗತ್ಯವಿರುವವರು ಬಂದು ಕಾನೂನು ಸಲಹೆ, ಮಾಹಿತಿ, ಸಹಾಯ ಉಚಿತವಾಗಿ ಪಡೆಯಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್‌. ನಾಯ್ಕ ಮಾತನಾಡಿ ಇದೊಂದು ಉತ್ತಮ ಕಾರ್ಯವಾಗಿದ್ದು, ಇಲ್ಲಿರುವ ವಕೀಲರು ಕೇಂದ್ರಕ್ಕೆ ಬಂದವರಿಗೆ ಅಗತ್ಯ ಮಾರ್ಗದರ್ಶನ, ಸಲಹೆ, ಸಹಾಯ ಮಾಡುತ್ತಾರೆ ಎಂದರು.

ಮುಖ್ಯ ಅತಿಥಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್‌ ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರಿಗೂ ಕೆಲವೊಮ್ಮೆ ಕ್ಲಿಷ್ಟ ಸಮಸ್ಯೆ ಬರುತ್ತದೆ. ಅಂತಹ ಸಂದರ್ಭದಲ್ಲಿ ವಕೀಲರ ಸಲಹೆ ಅಗತ್ಯವಿರುತ್ತದೆ. ಅಂತಹ ಗ್ರಾಮೀಣ ಭಾಗದ ಜನರಿಗೆ ಕಾನೂನು ಸೇವಾ ಕೇಂದ್ರದಿಂದ ಪ್ರಯೋಜನವಾಗಲಿದೆ ಎಂದರು. ಉಪ ತಹಶೀಲ್ದಾರ್‌ ವಿಜಯಲಕ್ಷ್ಮೀ ಮಣಿ, ಶಿಶು ಅಭಿವೃದ್ಧಿ ಇಲಾಖೆಯ ಸುಶೀಲಾ, ಪುರಸಭಾ ಅಧ್ಯಕ್ಷ ಪರ್ವೆàಜ್‌ ಕಾಶಿಮಜಿ ಮುಂತಾದವರು ಉಪಸ್ಥಿತರಿದ್ದರು.

Advertisement

ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ. ಭಟ್ಟ ನಿರೂಪಿಸಿದರು. ಸಹ ಕಾರ್ಯದರ್ಶಿ ಎನ್‌. ಎಸ್‌. ನಾಯ್ಕ ವಂದಿಸಿದರು. ನ್ಯಾಯವಾದಿ ನಾರಾಯಣ ಯಾಜಿ, ಎಂ.ಜೆ. ನಾಯ್ಕ, ದಾಮೋದರ ನಾಯ್ಕ, ಎಸ್‌.ಜೆ. ನಾಯ್ಕ ಎಂ.ಟಿ. ನಾಯ್ಕ, ಶಂಕರ ನಾಯ್ಕ, ನಾರಾಯಣ ನಾಯ್ಕ ಮುಂತಾದವರಿದ್ದರು.

ಗ್ರಾಮೀಣರಿಗೂ ಕಾನೂನು ಅರಿವು ಅಗತ್ಯ

ಭಟ್ಕಳ: ಗ್ರಾಮೀಣ ಭಾಗದ ಜನತೆಗೂ ಕೂಡಾ ಕಾನೂನಿನ ಅರಿವು ಮೂಡಿಸಬೇಕು, ಕಾನೂನಿನ ನೆರವು ದೊರೆಯಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಕೂಡಾ ಕಾನೂನು ನೆರವು ಕೇಂದ್ರ ತೆರೆಯಲಾಗುತ್ತಿದೆ ಎಂದು ಪ್ರಧಾನ ಸಿವಿಲ್‌ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಫವಾಜ್‌ ಪಿ.ಎ. ಹೇಳಿದರು.

ಅವರು ತಾಲೂಕಿನ ಅತೀ ಗ್ರಾಮೀಣ ಪ್ರದೇಶವಾದ ಉತ್ತರ ಕೊಪ್ಪ ಹಾಗೂ ಮಾವಳ್ಳಿ-1 ಮತ್ತು ಶಿರಾಲಿ ಗ್ರಾಪಂಗಳಲ್ಲಿ ಕಾನೂನು ನೆರವು ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್‌. ನಾಯ್ಕ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕಾನೂನು ನೆರವು ಕೇಂದ್ರವನ್ನು ಉದ್ಘಾಟಿಸಿರುವುದು ತುಂಬಾ ಸಂತಸ ತಂದಿದೆ ಎಂದರು.

ತಾಪಂ ಇಒ ಪ್ರಭಾಕರ ಚಿಕ್ಕನಮನೆ ಮಾತನಾಡಿ ಗ್ರಾಪಂ ಮಟ್ಟದಲ್ಲಿ ವಕೀಲರೋಬ್ಬರು ವಾರದಲ್ಲಿ ಎರಡು ದಿನ ಲಭ್ಯವಿದ್ದು ಗ್ರಾಮೀಣ ಜನತೆ ತಮಗೆ ಅಗತ್ಯವಿರುವ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದರು.

ಕೊಪ್ಪ ಗ್ರಾಪಂ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ-1 ಗ್ರಾಪಂ ಅಧ್ಯಕ್ಷೆ ಮಾದೇವಿ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷೆ ರೇವತಿ ನಾಯ್ಕ, ನ್ಯಾಯವಾದಿ ಶಂಕರ ನಾಯ್ಕ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಹೇಶ ನಾಯ್ಕ, ದಿನೇಶ ನಾಯ್ಕ, ಕೊಪ್ಪ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ಗೊಂಡ, ಸದಸ್ಯರಾದ ಗೋವಿಂದ ಮರಾಠಿ, ಮಾಸ್ತಿ ಗೊಂಡ, ಮಾಸ್ತಿ ಗೊಂಡ, ಲಕ್ಷ್ಮೀ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next