Advertisement

ಕಾನೂನು ಸಾಕ್ಷ ರತೆ ಅವಶ್ಯ: ನ್ಯಾ|ಚಂದ್ರಕಾಂತ

12:12 PM Oct 18, 2021 | Team Udayavani |

ಮಾದನಹಿಪ್ಪರಗಿ: ಪ್ರತಿಯೊಬ್ಬ ನಾಗರಿಕರಿಗೂ ಕಾನೂನು ಸಾಕ್ಷರತೆ ಅವಶ್ಯಕವಾಗಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಚಂದ್ರಕಾಂತ ಹೇಳಿದರು.

Advertisement

ಆಳಂದ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಭಾರತ ಅಮೃತ ಮಹೋತ್ಸವ, ರಾಷ್ಟ್ರೀಯ ಕಾನೂನು ಪ್ರಾಧಿಕಾರದ 25ನೇ ವರ್ಷದ ಆಚರಣೆ ಸಂಭ್ರಮ, ಕಾನೂನು ಸೇವೆಗಳ ಸಪ್ತಾಹದ ಅಂಗವಾಗಿ ಶಿವಲಿಂಗೇಶ್ವ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣಪುಟ್ಟ ಪ್ರಕರಣಗಳನ್ನು ಸ್ಥಳೀಯವಾಗಿ ಬಗೆಹರಿಸಿಕೊಂಡರೆ ನೆಮ್ಮದಿಯಾಗಿ ಇರಬಹುದು. ಈ ಹಿನ್ನೆಲೆಯಲ್ಲಿ ಉಚಿತವಾಗಿ ಕಾನೂನಿನ ಸಲಹೆ ನೀಡಲಾಗುವುದು ಎಂದರು.

ಶಿವಲಿಂಗೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ವಕೀಲರಾದ ಜ್ಯೋತಿ ಹಂಚಾಟೆ, ಎಂ.ವಿ.ಏಕಬೋಟೆ, ಶಾಂತಾಬಾಯಿ ಎಸ್‌. ಚೆನ್ನಗುಂಡ, ನಾಗೇಶ ರೆಡ್ಡಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಸ್ಥಳೀಯ ಪೊಲೀಸ್‌ ಠಾಣೆ ಪಿಎಸ್‌ಐ ಮಲ್ಲಣ್ಣ ಯಲಗೋಡ ತುರ್ತು ಕರೆ ಸಂಖ್ಯೆ 112ರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ವಕೀಲರಾದ ಶುಭಾಶ್ರೀ ಬಡಿಗೇರ, ಜ್ಯೋತಿ ವಿ.ಬಂದಿ, ಕಮಲಾಕರ ರಾಠೊಡ, ಗ್ರಾ.ಪಂ ಉಪಾಧ್ಯಕ್ಷ ಚೆನ್ನಪ್ಪ ಹಾಲೇನವರ್‌, ಮಲ್ಲಿನಾಥ ದುಧಗಿ ಇದ್ದರು. ವಕೀಲರಾದ ಡಿ.ಎಸ್‌. ನಾಡ್ಕರ್‌, ಎಸ್‌ ಆರ್‌.ಚೆನ್ನಗುಂಡ, ಎಂಎಸ್‌.ಹತ್ತಿ, ಮುಖಂಡರಾದ ಮಹಾದೇವಯ್ಯ ಸ್ವಾಮಿ, ಧರ್ಮಣ್ಣ ಕೌಲಗಿ, ಶರಣಬಸಪ್ಪ ಜಿಡ್ಡಿಮನಿ, ಶಾಂತಮಲ್ಲ ಬುರುಡ, ಹರಿದಾಸ್‌ ಹಜಾರೆ, ಗಣೇಶ ಓನಮಶೆಟ್ಟಿ, ಶಿವಲಿಂಗಪ್ಪ ಜಮಾದಾರ, ರೇವಪ್ಪ ದುಗಿ, ಶ್ರೀಮಂತ ಪರೇಣಿ, ಕಲ್ಲಪ್ಪ ದಢೂತಿ ಭಾಗವಹಿಸಿದ್ದರು. ಮಹಿಬೂಬ್‌ ಫಣಿಬಂದ್‌ ನಿರೂಪಿಸಿ, ವಂದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next