ಎಚ್.ಡಿ.ಕೋಟೆ: ಮಹಿಳೆಯರಿಗಾಗಿಯೇ ವಿಶೇಷ ಕಾನೂನುಗಳಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್ ಠಾಣೆ ಅಥವಾ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಬೇಕು ಎಂದು ಪಿಎಸ್‌ಐ ಅಶ್ವಿನಿ ಶಿವಾನಂದ್ ಸಲಹೆ ನೀಡಿದರು.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಂಜನಾಯ್ಕನಹಳ್ಳಿ ಗ್ರಾಮದ ಮಹಿಳಾ ಒಕ್ಕೂಟದಮಹಿಳೆಯರಿಗಾಗಿ ಆಯೋಜಿಸಿದ್ದಉಚಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಚಿನ್ನದ ಸರ ಕದಿಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ರಸ್ತೆ ಮಾರ್ಗವಾಗಿ ಸಂಚರಿಸುವ ಮಹಿಳೆಯರು ಧರಿಸಿರುವ ಒಡವೆಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಮೊಬೈಲ್ ಗೀಳು ಮಕ್ಕಳ ಮನಸ್ಸಿನಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಹೆಚ್ಚಾಗಿದ್ದು, ಮಕ್ಕಳಿಗೆ ಮೊಬೈಲ್ ನೀಡದೇ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಜಶೀಲ ಮಾತನಾಡಿ, ಎಚ್.ಡಿ.ಕೋಟೆ ತಾಲೂಕುಬಾಲ್ಯವಿವಾಹದಲ್ಲಿ ಜಿಲ್ಲೆಯಲ್ಲೇ ಪ್ರಥಮಸ್ಥಾನದಲ್ಲಿದೆ. ಬಾಲ್ಯವಿವಾಹ ಕಂಡುಬಂದರೆ ಕೂಡಲೆ ಪೊಲೀಸರಿಗೆ ಇಲ್ಲವೇಸಾಂತ್ವನ ಮಹಿಳಾ ಕೇಂದ್ರಕ್ಕೆ ಮಾಹಿತಿನೀಡಬೇಕು. ದೌರ್ಜನ್ಯ, ಅತ್ಯಾಚಾರನಡೆದರೆ ಆಯಾ ತಾಲೂಕುಗಳ ಸಾಂತ್ವನಕೇಂದ್ರಗಳಿಗೆ ದೂರು ನೀಡಬೇಕು ಎಂದರು. ಈ ವೇಳೆ ಗ್ರಾಮಾಭಿವೃದ್ಧಿಯೋಜನೆಯ ಅಶ್ವಿನಿ, ನಂಜನಾಯ್ಕನಹಳ್ಳಿಯ ಜಯ, ಸಾಕಮ್ಮ, ಜಯಮ್ಮ,ಕಲಾವತಿ, ಮಂಜುಳಾ, ಉಮಾ,ಹೇಮಾವತಿ, ಮೀನಾಕ್ಷಿ, ಗಾಯತ್ರಿ, ವಿದ್ಯಾ ಮತ್ತಿತರರು ಹಾಜರಿದ್ದರು.
ಶಾಲೆಯಲ್ಲಿ ಕೋವಿಡ್ ಜಾಗೃತಿ ಗೋಡೆ ಬರಹ :
ನಂಜನಗೂಡು: ತಾಲೂಕಿನ ಹಳ್ಳದ ಕೇರಿಯ ಸರ್ಕಾರಿ ಶಾಲೆಯಲ್ಲಿ ಕೋವಿಡ್ ಜಾಗೃತಿ ಗೋಡೆ ಬರಹವನ್ನು ಅನಾವರಣ ಮಾಡಲಾಯಿತು. ಈ ವೇಳೆ ಕ್ಷೇತ್ರ ಶಿಕ್ಷಣಣಾಧಿಕಾರಿ ರಾಜು ಮಾತನಾಡಿ, ಎಲ್ಲರನ್ನೂ ಸಂಕಷ್ಟಕ್ಕೆ ದೂರಿದ ಕೋವಿಡ್ ಸೋಂಕು ನಮಗೆ ಅನೇಕ ಪಾಠ ಕಲಿಸಿದೆ. ಸ್ವತ್ಛತೆ ಸೇರಿದಂತೆ ಮುನ್ನೆಚ್ಚರಿಕ ಕ್ರಮಗಳನ್ನು ಪಾಲಿಸಬೇಕು ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಯುವ ಬ್ರಿಗೇಡ್‌ನ ಬ್ರಿàಗೇಡ್ ಚಂದ್ರು ಅವರನ್ನು ಸನ್ಮಾನಿಸಲಾಯಿತು.
ಮೈಸೂರಿನ ಡಯಟ್ ಉಪನ್ಯಾಸಕ ನಂಜುಂಡಾರಾಧ್ಯ, ಆರೋಗ್ಯ ಇಲಾಖೆಯ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ರಮೇಶ್, ರಾಘವೇಂದ್ರ, ಶಾಲಾ ಮುಖ್ಯ ಶಿಕ್ಷಕ ಸತೀಶ್ ದಳವಾಯಿ, ಶಿಕ್ಷಕ ನಾಗೇಂದ್ರ ಇತರರಿದ್ದರು.