Advertisement

ಕೊರಟಗೆರೆ ಪಟ್ಟಣದಲ್ಲಿ ಕಾನೂನು ಅರಿವು ಜಾಥಾ

06:42 PM Nov 02, 2022 | Team Udayavani |

ಕೊರಟಗೆರೆ: ಭಾರತ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನದ ಕಾನೂನಿನ ಅರಿವು ಅಗತ್ಯ. ದೇಶದ ಪ್ರತಿಯೊಬ್ಬ ಪ್ರಜೆಯ ತಮ್ಮ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಕಾನೂನಿನ ಅರಿವು ಪಡೆಯಬೇಕಿದೆ. ಸೆ.31ರಿಂದ ನ.13 ರವರೆಗೆ ಕಾನೂನು ಅರಿವಿನ ಜಾಥಾ ಕಾರ್ಯಕ್ರಮ ಗ್ರಾಪಂ ಮಟ್ಟದಲ್ಲಿಯು ನಡೆಯುತ್ತಿದೆ ಎಂದು ಕೊರಟಗೆರೆ ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ಜೆ.ಎನ್.ಶ್ರೀನಾಥ್ ತಿಳಿಸಿದರು.

Advertisement

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊರಟಗೆರೆ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಕೊರಟಗೆರೆ ಪಟ್ಟಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಉಚಿತ ಕಾನೂನು ನೆರವು ಮತ್ತು ಸಲಹೆ ಕಾರ್ಯಕ್ರಮದ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.

ಬಡಜನರ ಅನುಕೂಲಕ್ಕಾಗಿ ರಾಷ್ಟ್ರ ಮಟ್ಟದಿಂದ ಗ್ರಾಪಂಯ ಮೂಲಕ ಪ್ರತಿ ಗ್ರಾಮಕ್ಕೂ ಕಾನೂನು ಅರಿವು ಜಾಗೃತಿ ನಡೆಯುತ್ತೀದೆ. ಉಚಿತ ಕಾನೂನು ಅರಿವು ಜಾಥದಿಂದ ಆಗುವ ಉಪಯೋಗದ ಬಗ್ಗೆ ಪ್ರತಿಯೊಬ್ಬ ನಾಗರೀಕರು ಕಾಳಜಿ ವಹಿಸಬೇಕಿದೆ. ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣ ಇತ್ಯರ್ಥಗೊಳಿಸಿ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸುವ ಲೋಕಾ ಅದಾಲತ್ ಕಾರ್ಯಕ್ರಮವು ನ್ಯಾಯಾಲಯದಲ್ಲಿ ನ.೧೨ರಂದು ನಡೆಯಲಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ ನ್ಯಾಯಾಲಯದಲ್ಲಿ ೩ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮ ಜರುಗಲಿದೆ. ನ.೧೧ರಂದು ಕೊರಟಗೆರೆ ನ್ಯಾಯಾಲಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಲೋಕಾ ಅದಾಲತ್ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವ ಉದ್ದೇಶದಿಂದ ಕಾನೂನು ಅರಿವು ಜಾಥಾ ನಡೆಯುತ್ತೀದೆ ಎಂದು ತಿಳಿಸಿದರು.

ವಕೀಲರ ಸಂಘದ ಹಿರಿಯ ವಕೀಲರಾದ ಟಿ.ಕೃಷ್ಣಮೂರ್ತಿ ಮಾತನಾಡಿ ಸಂವಿಧಾನದ ಅಡಿಯಲ್ಲಿ ಸರ್ವರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಉಚಿತ ಕಾನೂನು ನೆರವು ಮತ್ತು ಅರಿವು ಜಾಥಾ ನಡೆಯುತ್ತೀದೆ. ರಾಷ್ಟ್ರೀಯ ರಾಜ್ಯ ಮಟ್ಟದಿಂದ ಗ್ರಾಪಂಯವರೆಗೆ ಉಚಿತ ಕಾನೂನು ನೆರವಿನ ಸೇವೆಯನ್ನು ಎಲ್ಲಾ ವರ್ಗದ ಬಡಜನತೆ ಪಡೆದು ಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

Advertisement

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಖಜಾಂಚಿ ಮಲ್ಲಿಕಾರ್ಜುನ್, ಜಂಟಿ ಕಾರ್ಯದರ್ಶಿ ಹುಸೇನ್‌ಪಾಷ, ಸಂತೋಷ್ ಲಕ್ಷ್ಮಿ ವಕೀಲರಾದ ಜಿ.ಎಂ.ಕೃಷ್ಣಮೂರ್ತಿ, ಶಿವರಾಮಯ್ಯ, ನಾಗೇಂದ್ರಪ್ಪ, ಪುಟ್ಟರಾಜಯ್ಯ, ಸಂಜೀವರಾಜು, ನರಸಿಂಹರಾಜು, ಕೃಷ್ಣಮೂರ್ತಿ, ರಾಮಚಂದ್ರಪ್ಪ, ಕೃಷ್ಣಪ್ಪ, ಅನಿಲ್, ಮಧೂಸೂಧನ್, ಕೆ.ಸಿ.ನಾಗರಾಜು, ವೃಷಬೇಂದ್ರಸ್ವಾಮಿ, ಸಂತೋಷ, ಹನುಮಂತರಾಜು, ತಿಮ್ಮರಾಜು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next