Advertisement

ಕಾರ್ಮಿಕರಿಂದ ಹೆಚ್ಚು ಶುಲ್ಕ ಪಡೆದರೆ ಕಾನೂನು ಕ್ರಮ

07:28 AM May 23, 2020 | Suhan S |

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಗೆ ನೋಂದಣಿಗಾಗಿ ಕಾರ್ಮಿಕರಿಂದ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಕೇಳಿ ಬಂದಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಮೀನಾ ಪಾಟೀಲ ಎಚ್ಚರಿಸಿದ್ದಾರೆ.

Advertisement

ಕಾರ್ಮಿಕ ಕಲ್ಯಾಣ ಮಂಡಳಿಗೆ ಕಾರ್ಮಿಕರ ನೋಂದಣಿಗಾಗಿ ಕೆಲ ಸಂಘ-ಸಂಸ್ಥೆ ಹಾಗೂ ಆನ್‌ಲೈನ್‌ ಕೇಂದ್ರಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನೋಂದಣಿಗೆ 25ರೂ.ಗಳ ಶುಲ್ಕ ನಿಗದಿ ಪಡಿಸಲಾಗಿದ್ದು, ಇದಕ್ಕಿಂತಲೂ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ. ಸೇವಾ ಸಿಂಧು ಮೂಲಕ ಕಾರ್ಮಿಕರು ಆನ್‌ಲೈನ್‌ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅರ್ಹ ಕಾರ್ಮಿಕರನ್ನು ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರನ್ನಾಗಿ ನೋಂದಾಯಿಸಿಕೊಂಡು, ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಕಟ್ಟಡ ಕಾರ್ಮಿಕರು ಮಧ್ಯಸ್ಥರು, ಸಂಘ-ಸಂಸ್ಥೆಗಳನ್ನು ನೋಂದಣಿಗೆ ಸಂಪರ್ಕಿಸದೆ ಇಲಾಖೆ ಮೂಲಕ ನೋಂದಣಿ, ನವೀಕರಣ ಇನ್ನಿತರ ಅರ್ಜಿ ಪಡೆಯಬಹುದು, ಇಲಾಖೆಯ ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಕಾರ್ಮಿಕ ಇಲಾಖೆ ಹೆಸರು ದುರುಪಯೋಗ ಪಡಿಸಿಕೊಂಡು ಹೆಚ್ಚು ಹಣ ಕೇಳಿದರೆ, ದೂ.ಸಂ. 0836-2353662, 2356503ಗೆ ಕರೆ ಮಾಡಬಹುದೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next