ಚನ್ನಪಟ್ಟಣ: ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆ ಯಲ್ಲಿ ರೈತರ ಮೇಲೆ ರೀಲರುಗಳು ನಡೆಸಿದ ದೌರ್ಜನ್ಯ ದಬ್ಟಾಳಿಕೆ ಖಂಡಿಸಿ ಹಾಗೂ ಹಲ್ಲೆ ನಡೆಸಿದ ರೀಲರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಯುವಘಟಕದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತಮೋರ್ಚಾ ತಾಲೂಕು ಅಧ್ಯಕ್ಷ ಬುಕ್ಕ ಸಾಗರ ಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿದ ರೈತಮೋರ್ಚಾ ಕಾರ್ಯಕರ್ತರು, ತಹಶೀಲ್ದಾರ್ ಪರವಾಗಿ ಕಚೇರಿ ಶಿರಸ್ತೇದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೇ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸ ಬೇಕು. ಯಾವುದೇ ಕಾರಣಕ್ಕೂ, ಈ ವಿಚಾರದಲ್ಲಿ ಲೋಪವೆಸಗಿ ರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ
ಆಗ್ರಹಿಸಿದರು.
ಗೂಂಡಾಗಿರಿ ಸಹಿಸಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ರೈತಮೋರ್ಚಾ ಅಧ್ಯಕ್ಷ ಬುಕ್ಕಸಾಗರ ಕುಮಾರ್, ಮಾರುಕಟ್ಟೆಗೆ ಗೂಡು ತರುವ ರೈತರು, ಕಷ್ಟಪಟ್ಟು ಬೆಳೆದ ಗೂಡನ್ನು ತರುತ್ತಾರೆ. ಇದನ್ನು ಅಲ್ಲಿನ ರೀಲರ್ ಗಳು ಕಳ್ಳಮಾರ್ಗದಲ್ಲಿ ಕಸಿಯುವುದು, ಪ್ರಶ್ನಿಸುವ ರೈತರ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ರಾಮ ನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ರೈತರ ಮೇಲಿನ ಗೂಂಡಾಗಿರಿ ಅಕ್ಷಮ್ಯವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಕಾನೂನು ಕ್ರಮ ಜರುಗಿಸಿ: ಕೋವಿಡ್ ಹಿನ್ನೆಲೆ ಸರಳವಾಗಿ ನಮ್ಮ ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲವಾದಲ್ಲಿ ನಮ್ಮ ರೈತ ಘಟಕದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತಿತ್ತು ಎಂದು ಎಚ್ಚರಿಸಿದರು. ಜಿಲ್ಲಾಡಳಿತ ಈ ವಿಚಾರದಲ್ಲಿ ಉದಾಸೀನ ಮಾಡದೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ನಿಂಗೇಗೌಡ, ಉಪಾಧ್ಯಕ್ಷ ನೆರಳೂರು ರಾಮೇಗೌಡ, ಮೈಲನಾಯಕನ ಹೊಸಹಳ್ಳಿ ಉಮೇಶ್, ಕಾರ್ಯದರ್ಶಿ ವಿಜ ಯ್ ಕುಮಾರ್ ಹಾರೋಕೊಪ್ಪ, ಜಿಲ್ಲಾಕಾರ್ಯದರ್ಶಿ ಗರಕಹಳ್ಳಿ ಸಿದ್ದಪ್ಪ , ಯುವಮೋರ್ಚಾ ಅಧ್ಯಕ್ಷ ನಾಗವಾರ ಶಿವಕುಮಾರ್, ಕೋಟೆ ಚೇತನ್, ತಾಲೂಕು ಬಿಜೆಪಿ ಕಾರ್ಯದರ್ಶಿ ರಾಂಪುರ ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.