Advertisement
ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದು,ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಡಿ ನೊಟಿಫಿಕೇಶನ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಆ ನಂತರ 2016 ಫೆಬ್ರವರಿಯಲ್ಲಿ ಭೂ ಮಾಲಿಕರು ಹೈಕೋರ್ಟ್‌ನಲ್ಲಿ ಮತ್ತೂಂದು ಅರ್ಜಿ ಸಲ್ಲಿಸಿ ಅಂತಿಮ ಅಧಿಸೂಚನೆ ಲ್ಯಾಪ್ಸ್ ಆಗಿದೆ ಎಂದು ಅರ್ಜಿ ಸಲ್ಲಿಸುತ್ತಾರೆ. ಬಿಡಿಎ ಕಾಯ್ದೆ ಪ್ರಕಾರ ವಶಪಡಿಸಿಕೊಂಡ ಜಮೀನು ಸಂಪೂರ್ಣ ಬಳಸಿಕೊಳ್ಳಲು ಬಿಡಿಎ ವಿಫಲವಾಗಿದೆ ಎಂದು ಹೀಗಾಗಿ ಈ ಯೋಜನೆ ಲ್ಯಾಪ್ಸ್ ಆಗಿದೆ ಎಂದು ಹೈ ಕೋರ್ಟ್ ಆದೇಶ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ನಡುವೆ ಶಾಸಕ ವಸಂತ ಬಂಗೇರಾ ಕಂದಾಯ ಜಮೀನಿನಲ್ಲಿರುವ ನಾಲ್ಕು ನಿವೇಶನಗಳನ್ನು ಸಕ್ರಮಗೊಳಿಸಿ ಕೊಡುವಂತೆ ಎರಡು ಪತ್ರ ಬರೆದಿದ್ದರು. ಎರಡೂ ಪತ್ರಗಳನ್ನು ಪರಿಶೀಲಿಸಿ ಎಂದು ಬರೆದಿದ್ದೇನೆ. ಅಷ್ಟು ಬರೆದ ಮಾತ್ರಕ್ಕೆ ಡಿ ನೊಟಿಫಿಕೇಶನ್ ಆಗುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ನಿಯಮಗಳಿವೆ. ಬಿಜೆಪಿಯವರು ಸಿಲ್ಲಿ ರಾಜಕಾರಣಕ್ಕಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಜನರಿಗೆ ತಪ್ಪು ಮಾಹಿತಿ ನೀಡಿ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಫಲ ದೊರೆಯುವುದಿಲ್ಲ ಎಂದು ಸಿಎಂ ಹೇಳಿದರು.
ಸರ್ಕಾರಕ್ಕೆ ಡಿನೊಟಿಫಿಕೇಶನ್ ಮಾಡುವ ಅಧಿಕಾರ ಇದ್ದರೂ ನಾನು ಇದುವರೆಗೂ ಯಾವುದೇ ಡಿ ನೊಟಿಫಿಕೇಶನ್ ಮಾಡಿಲ್ಲ. ಬಿಜೆಪಿಯವರು ನನ್ನ ಇಮೇಜ್ ಹಾಳು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.
ಶಾಂತಾ ಇಂಡಸ್ಟ್ರೀಗೂ ನನ್ನ ಮಗನಿಗೂ ಸಂಬಂಧ ಇಲ್ಲಶಾಂತಾ ಇಂಡಸ್ಟ್ರೀಯಲ್ಲಿ ನನ್ನ ಮಗ ಡಾ.ಯತೀಂದ್ರ ಪಾಲುದಾರಿಕೆ ಹೊಂದಿದ್ದಾರೆ ಎಂದು ಪುಟ್ಟಸ್ವಾಮಿ ಸುಳ್ಳು ಆರೋಪ ಮಾಡಿದ್ದರು. ನನ್ನ ಮಗ ಮ್ಯಾಟ್ರಿಕ್ಸ್ ಸಂಸ್ಥೆಯಲ್ಲಿ ಸದಸ್ಯನಾಗಿದ್ದ ಆದರೆ, ಅವನ ವಿರುದ್ದ ಆರೋಪ ಕೇಳಿ ಬಂದ ತಕ್ಷಣ ಅದರಿಂದ ಹೊರ ಬರುವಂತೆ ಸೂಚಿಸಿದೆ. ಅವನು ಡಾಕ್ಟರ ಆಗಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತೆರೆಯಲು ಸ್ಥಳ ಕೇಳಿದ್ದ ಅದರಲ್ಲಿ ತಪ್ಪೇನಿದೆ. ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದ್ದರೆ, ಬಿಜೆಪಿಯವರು ಕೋರ್ಟ್‌ಗೆ ಹೋಗಿ ಪ್ರಶ್ನಿಸಲಿ ಎಂದು ಹೇಳಿದರು.