Advertisement

ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್‌

04:28 PM Apr 03, 2021 | Team Udayavani |

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಬರುತ್ತಿರುವ ಚುನಾವಣಾ ಪೂರ್ವ ಸರ್ವೆ ಫಲಿತಾಂಶ ಬಗ್ಗೆ ವಿಶ್ವಾಸವಿಲ್ಲ. ಈ ಸರ್ವೆಗಳೆಲ್ಲ ಪೈಡ್‌ ಸರ್ವೆಗಳಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್‌ ಹೇಳಿದರು.

Advertisement

ಕಾಸರಗೋಡು ಡಿಸಿಸಿ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 20 ರಲ್ಲಿ 20 ಸೀಟುಗಳನ್ನು ಐಕ್ಯರಂಗ ಗೆದ್ದುಕೊಳ್ಳಲಿದೆ ಎಂದು ಅಂದು ಹೇಳಿದ್ದೆ. ಅಂದು 19 ಸೀಟುಗಳನ್ನು ಗೆದ್ದುಕೊಂಡಿತ್ತು. ಅದೇ ಕಾಸರಗೋಡಿನಲ್ಲಿ ಹೇಳುತ್ತಿದ್ದೇನೆ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್‌ 100 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಜಾಹೀರಾತುಗಳಿಗಾಗಿ ಕೇರಳ ಸರಕಾರ 800 ಕೋಟಿ ರೂ. ವ್ಯಯಿಸಿದೆ. ಚುನಾವಣೆಗೆ ಮುನ್ನ 200 ಕೋಟಿ ರೂ. ವ್ಯಯಿಸಿದೆ. ಅದರ ಪ್ರತಿಫಲವಾಗಿ ಸರ್ವೆ ಫಲಿತಾಂಶ ಪ್ರಕಟಗೊಳ್ಳುತಿದೆ ಎಂದರು.

ಮಂಜೇಶ್ವರದಲ್ಲಿ ಎಡರಂಗ ಹಾಗು ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಂಡಿದೆ. ಅದಕ್ಕಾಗಿಯೇ ಮಂಜೇಶ್ವರ ಕ್ಷೇತ್ರದಲ್ಲಿ ಎಡರಂಗ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಅಭ್ಯರ್ಥಿಗೆ ಬಿಜೆಪಿ-ಆರ್‌ಎಸ್‌ಎಸ್‌ ನೊಂದಿಗೆ ಹಲವು ವರ್ಷಗಳಿಂದ ರಹಸ್ಯ ಸಂಬಂಧವಿದೆ ಎಂದು ಆರೋಪಿಸಿದರು.

ಸಿ.ಟಿ.ಅಹಮ್ಮದಲಿ, ಹಕೀಂ ಕುನ್ನಿಲ್‌, ನ್ಯಾಯವಾದಿ ಸಿ.ಕೆ.ಶ್ರೀಧರನ್‌, ಪಿ.ಎ.ಅಶ್ರಫಲಿ, ನ್ಯಾಯವಾದಿ ಎ.ಗೋವಿಂದನ್‌ ನಾಯರ್‌, ಕರುಣ್‌ತಾಪ ಮೊದಲಾದವರು ಅವರ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next