ಎಡಪದವು: ಕುಪ್ಪೆಪದವು ಪಂಚಾಯತ್‌ನ ಭಾರತ್ ನಿರ್ಮಾಣ್ ರಾಜೀವ್ ಗಾಂಧೀ ಸೇವಾ ಕೇಂದ್ರದಲ್ಲಿ ನಡೆದ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಭಾರೀ ಚರ್ಚೆ ಜರಗಿತು. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲು ಗ್ರಾಮಸ್ಥರು ಒತ್ತಾಯಿಸಿದರು.
ಪಡೀಲ್‌ಪದವಿನಲ್ಲಿ ಜಿ.ಪಂ. ಸದಸ್ಯರ ಅನುದಾನದಲ್ಲಿ ಬೋರ್‌ವೆಲ್ ಕೊರೆದು 2 ತಿಂಗಳಾದರೂ ಅದಕ್ಕೆ ಪಂಪ್ ಅಳ ವಡಿಸದೆ ನೀರಿಲ್ಲದ ಹಳೇ ಬೋರ್‌ವೆಲ್‌ಗೆ ಅಳವಡಿಸಲಾಗಿದೆ. ಮಳೆ ಆಗದಿರು ವುದರಿಂದ ಕೆಲವು ಸ್ಥಳಗಳಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಇದೆ. ಪಂಚಾಯತ್ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ರಫೀಕ್ ಅಚಾರಿಜೋರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಚಾರಿಜೋರ ಅಂಗನವಾಡಿ ಸಮೀಪದಲ್ಲಿ ವಿದ್ಯುತ್ ಕಂಬ ವಾಲಿಕೊಂಡಿದ್ದು, ಬದಲಾಯಿಸಲು ಹೇಳಿದರೂ ಇನ್ನು ಬದಲಾಯಿಸಿಲ್ಲ ಎಂದು ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ. ಚರಂಡಿ ಗಳ ಹೂಳೆತ್ತಿಲ್ಲ. ಇದರಲ್ಲಿ ಕೊಳಚೆ ನೀರು ಶೇಖರಣೆಯಾಗಿ ದುರ್ನಾತ ಬೀಳುತ್ತಿದೆ. ಅದರಲ್ಲೂ ಪ್ರಾ. ಆ. ಕೇಂದ್ರ, ಶಾಲೆಯ ಮುಂಭಾಗದಲ್ಲಿಯೂ ಈ ದುರವಸ್ಥೆ ಇದೆ ಎಂದು ಗ್ರಾಮಸ್ಥರು ದೂರಿದರು.
ಕೆಂಪುಗುಡ್ಡೆ ಎಂಬಲ್ಲಿ ನಿವೇಶನ ಹಂಚಿಕೆಯ ವೇಳೆ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಗ್ರಾಮಸ್ಥರೊಬ್ಬರು ಆಕ್ರೋಶಪಡಿಸಿದರು. ಕುಪ್ಪೆಪದವು ಪ್ರಾ. ಆ. ಕೇಂ.ಖಾಯಂ ವೈದ್ಯಾಧಿಕಾರಿಗಳ ನೇಮಕಕ್ಕೆ ಒತ್ತಾಯ, ಕುಪ್ಪೆಪದವು ಮಸೀದ ಬಳಿ ಹೈಮಾಸ್ಟ್ ದೀಪ ಅಳವಡಿಕೆಗೆ ಒತ್ತಾಯ, ಮೂಲರ ಪಟ್ಣ ಹೊಸ ಸೇತುವೆ ನಿರ್ಮಾ ಣಕ್ಕೆ ಆಗ್ರಹಿಸಿ ನಿರ್ಣಯಕ್ಕೆ ಆಗ್ರಹ ಮತ್ತು ಪೇಟೆಯ ರಸ್ತೆ ಮಧ್ಯ ಭಾಗದಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಬಗ್ಗೆ ಗ್ರಾಮ ಸಭೆಯಲ್ಲಿ ಕೇಳಿಬಂದಿತು.
ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಮುಚ್ಚಾರು, ತಾ.ಪಂ ಸದಸ್ಯ ನಾಗೇಶ್ ಶೆಟ್ಟಿ, ವೈದ್ಯ ಡಾ| ಕಿರಣ್ ರಾಜ್,ಎಂಜಿನಿಯರ್ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಭಾಗ್ಯಾವತಿ, ಮಕ್ಕಳ ಕಲ್ಯಾಣ ಇಲಾಖೆಯ ಮಾಲಿನಿ, ಪಶುವೈದ್ಯಾಧಿಕಾರಿ ಡಾ| ಪ್ರಸಾದ್, ಗ್ರಾಮಕರ ಣಿಕ ದೇವರಾಜ್, ಸಂತೋಷ್ ಉಪಸ್ಥಿ ತರಿದ್ದರು. ಪ್ರದೀಪ್ ನೋಡಲ್ ಅಧಿಕಾರಿಯಾಗಿದ್ದರು. ಪಂ. ಅಧ್ಯಕ್ಷೆ ಲೀಲಾ ವತಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸವಿತಾ ಮಂದೋಳಿಕರ್ ಸಭೆ ನಡೆಸಿಕೊಟ್ಟರು.