Advertisement
ಈ ಮನೆಯಿಂದ ಪಿಸ್ತೂಲು, ತಲವಾರುಗಳು, ಸ್ಪ್ರಿಂಗ್ ಚಾಕು ಮತ್ತಿತರ ಆಯುಧಗಳು, ಹಲವು ಮೊಬೈಲ್‌ಗಳು ಮತ್ತು ವಾಹನಗಳ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ರೈಂಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಪಾರಿ ತಂಡಕ್ಕೆ ಸೇರಿದ ಪೆರುಂ ಬಾವೂರಿನ ಬಿಲಾಲ್ ಸಹಿತ ಇಬ್ಬರನ್ನು ಕ್ರೈಂಬ್ರಾಂಚ್ ಕೆಲವು ದಿನಗಳ ಹಿಂದೆ ಬಂಧಿಸಿತ್ತು. ಆ ಪೈಕಿ ಬಿಲಾಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಿಕ್ಕಿದ ಮಾಹಿತಿಯಂತೆ ಪೈವಳಿಕೆಯ ಮನೆಗೆ ದಾಳಿ ನಡೆಸಲಾಗಿದೆ. ಮೋನಾಯಿ ಎಂಬಾತ ಶೂಟೌಟ್ ಪ್ರಕರಣದ ಸೂತ್ರಧಾರನಾಗಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ. ಮೂಲತಃ ತೃಶೂರು ನಿವಾಸಿರುವ ಆತ ಮಲೇಶ್ಯಾಕ್ಕೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗುತ್ತಿದೆ. ಕೆಲವು ವರ್ಷ ಕಾಸರಗೋಡಿನಲ್ಲೂ ನೆಲೆಸಿದ್ದ. ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಲು ಈತನೇ ಬಿಲಾಲ್ ಮತ್ತು ಇನ್ನೋರ್ವನಿಗೆ ಸುಪಾರಿ ನೀಡಿ ಬಂದೂಕು ಮತ್ತು ಬೈಕ್ ಒದಗಿಸಿದ್ದ ಎಂದು ಕ್ರೈಂಬ್ರಾಂಚ್ ತಿಳಿಸಿದೆ.
Related Articles
Advertisement
ಕ್ರಿಮಿನಲ್‌ಗಳ ಅಡ್ಡೆ ?ಮಾರಕಾಯುಧಗಳು ಪತ್ತೆಯಾದ ಪೈವಳಿಕೆಯ ಮನೆ ಕ್ರಿಮಿನಲ್ ಪ್ರಕರಣ ತಂಡಗಳು ಕಾರ್ಯ ವೆಸಗುವ ರಹಸ್ಯ ತಾಣವಾಗಿದ್ದು, ದಾಳಿ ಸಂದರ್ಭ ಇಲ್ಲಿ ಹಾಸಿಗೆ ಹಿಡಿದಿದ್ದ ಅಸ್ವಸ್ಥ ವೃದ್ಧ ಮಾತ್ರ ಇದ್ದರು. ಆ ಮನೆಯಲ್ಲಿ ಹಲವು ಬಟ್ಟೆಗಳು ಪತ್ತೆಯಾಗಿದ್ದು, ಆ ಬಗ್ಗೆ ವೃದ್ಧನ ಹೇಳಿಕೆಯನ್ನು ಕ್ರೈಂಬ್ರಾಂಚ್ ದಾಖಲಿಸಿಕೊಂಡಿದೆ. ಆದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವಂತಿಲ್ಲವೆಂದು ಕ್ರೈಂಬ್ರಾಂಚ್ ತಿಳಿಸಿದೆ.