Advertisement

ಬ್ಯಾಡ್ಮಿಂಟನ್‌ ತಾರೆ ಲೀ ಚಾಂಗ್‌ ವೀಗೆ ಕ್ಯಾನ್ಸರ್‌

06:00 AM Sep 23, 2018 | Team Udayavani |

ಕೌಲಾಲಂಪುರ: ಮಲೇಶ್ಯದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ ಲೀ ಚಾಂಗ್‌ ವೀ ಕ್ಯಾನ್ಸರ್‌ ಕಂಟಕಕ್ಕೆ ಸಿಲುಕಿದ್ದಾರೆ. ಮೊದಲ ಹಂತದಲ್ಲಿರುವ ಮೂಗಿನ ಕ್ಯಾನ್ಸರ್‌ ಬೆಳಕಿಗೆ ಬಂದಿದೆ. 

Advertisement

ಅವರೀಗ ತೈವಾನ್‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮಲೇಶ್ಯದ ತಾರಾ ಆಟಗಾರ ಎಂದೇ ಗುರುತಿಕೊಂಡಿದ್ದ ಲೀ ಚಾಂಗ್‌ ವಿ ಕಳೆದ ಕೆಲವು ದಿನಗಳಿಂದ ಕ್ರೀಡಾಕ್ಷೇತ್ರದಲ್ಲಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಕ್ರೀಡಾವಲಯದಲ್ಲಿ ಗುಸುಗುಸು ಶುರುವಾಗಿತ್ತು. ಇದೀಗ ಸ್ವತಃ ಮಲೇಶ್ಯ ಕ್ರೀಡಾ ಮೂಲಗಳು ಲೀಗೆ ಕ್ಯಾನ್ಸರ್‌ಗೆ ಇರುವುದನ್ನು ಸ್ಪಷ್ಟಪಡಿಸಿವೆ. ಲೀ ಹಾಗೂ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಮಲೇಸ್ಯ ಬ್ಯಾಡ್ಮಿಂಟನ್‌ ಸಂಸ್ಥೆ ತಿಳಿಸಿದೆ.

3 ಒಲಿಂಪಿಕ್ಸ್‌ ಸಿಂಗಲ್ಸ್‌ ಬೆಳ್ಳಿ, 4 ವಿಶ್ವ ಚಾಂಪಿಯನ್‌ಶಿಪ್‌, 6 ಕಾಮನ್ವೆಲ್ತ್‌, 5 ಏಶ್ಯನ್‌ ಗೇಮ್ಸ್‌ ಪದಕ ಸೇರಿದಂತೆ ವಿಶ್ವದ ಪ್ರಮುಖ ಬ್ಯಾಡ್ಮಿಂಟನ್‌ ಕೂಟಗಳಲ್ಲಿ ಲೀ ಚಾಂಗ್‌ ವೀ ಗಮನಾರ್ಹ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next