Advertisement
ಉಡುಪಿ ಜಿಲ್ಲೆಯ ನಗರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ, ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಲ್ಲಿ ಯೋಜನೆಯನ್ನು ಜಾರಿಗೆ ತರುವ ಉದ್ದೇಶವಿತ್ತು. ಇಲ್ಲೆಲ್ಲ ಸರ್ವೇ ಕೂಡ ನಡೆದಿತ್ತು. ಅವುಗಳನ್ನು ಸರಕಾರಕ್ಕೂ ಸಲ್ಲಿಸಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆಗಳು ನಡೆಯದೆ ರಾಜ್ಯವ್ಯಾಪಿ ಯೋಜನೆ ಅರ್ಧಕ್ಕೇ ನಿಂತಿದೆ. ಒಂದೇ ಬಾರಿಗೆ ಟೆಂಡರ್ ನಡೆಯಬೇಕಿದ್ದು, ವಿಳಂಬದಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.
Related Articles
Advertisement
ಎನ್ನುವ ಅಭಿಪ್ರಾಯವಿದೆ. ಬೀದಿದೀಪಗಳ ನಿರ್ವಹಣೆ 5 ವರ್ಷಕ್ಕೆ ಖಾಸಗಿಯವರಿಗೆ ನೀಡಲಾಗುತ್ತಿದೆ. ಎಲ್ಇಡಿ ವಿದ್ಯುತ್ ದೀಪ ಹಾಗೂ ಅದರ ನಿರ್ವಹಣೆ ಮಾಡಿದ ಅನಂತರ ಉಳಿತಾಯ ಹಣದಿಂದ ಸ್ಥಳಿಯಾಡಳಿತಕ್ಕೆ ಅನುಕೂಲವಾಗುತ್ತದೆ.
ಭಿನ್ನ ಧ್ವನಿಯೂ ಇದೆ :
ವಿದ್ಯುತ್ ಉಳಿತಾಯ, ಎಲ್ಇಡಿ ವಿದ್ಯುತ್ ದೀಪ ಇದೆಲ್ಲವೂ ಮೇಲ್ಮಟ್ಟದ ಲೂಟಿ ಸ್ಕೀಂಗಳೇ ಆಗಿವೆ. ಹಲವು ವರ್ಷದಿಂದ ಸರ್ವೇಗಾಗಿಯೇ ಹಣ ವ್ಯಯವಾಗಿದೆ. ಯೋಜನೆ ಯಶಸ್ವಿಯಾಗುವುದು ಅನುಮಾನ ಎಂಬ ಭಿನ್ನ ಧ್ವನಿಯೂ ವ್ಯಕ್ತವಾಗುತ್ತಿದೆ.
2 ವರ್ಷಗಳ ಹಿಂದೆ ಸರ್ವೆ :
ಎರಡು ವರ್ಷಗಳ ಹಿಂದೆ ಸರ್ವೆ ನಡೆದಾಗ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ಕೂಡ ನಡೆದಿತ್ತು. ಬಳಿಕ ಉಡುಪಿ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಪ್ರಸ್ತುತ ಬೀದಿದೀಪಗಳಿಂದ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚು ಪ್ರಕಾಶ ನೀಡುವ ಬಾಳಿಕೆ ಬರುವ ಎಲ್ಇಡಿ ದೀಪಗಳನ್ನು ಅಳವಡಿಸಲು ಹಣ ಹಾಗೂ ವಿದ್ಯುತ್ ಉಳಿತಾಯ ವಾಗುತ್ತದೆ. ಈ ಕುರಿತು ತಜ್ಞರ ತಂಡ ಅಧ್ಯಯನ ನಡೆಸಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿತ್ತು. ಹಾಲಿ ಅಳವಡಿಸಿರುವ ವಿದ್ಯುತ್ ದೀಪಗಳನ್ನು ಬದಲಿಸಿ, ಎಲ್ಇಡಿ ದೀಪ ಅಳವಡಿಸಿ, ವಿದ್ಯುತ್ ಹಾಗೂ ನಿರ್ವಹಣೆಗೆ ವ್ಯಯವಾಗುವ ಹಣ ಉಳಿತಾಯ ಮಾಡಿ ಗುತ್ತಿಗೆದಾರರು ಹಾಗೂ ನಗರ ಸ್ಥಳಿಯಾಡಳಿತ
ಗಳು ಸ್ಮರ್ಧಾತ್ಮಕ ರೀತಿ ಹಂಚಿಕೊಳ್ಳುವ ಷರತ್ತಿಗೆ ಒಳಪಟ್ಟು ಖಾಸಗೀಕರಣ ಮಾಡಿದರೆ ಸ್ಥಳೀಯಾಡಳಿಗಳಿಗೆ ಆರ್ಥಿಕವಾಗಿ ಲಾಭ ವಾಗು ತ್ತದೆ ಎನ್ನುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.ಮೂರು ವರ್ಷದ ಹಿಂದಿನ ಯೋಜನೆ ಸರಕಾರ ಎಲ್ಇಡಿ ಅಳವಡಿಕೆಗೆ ನಗರ, ಪುರಸಭೆ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವಂತೆ ಉದ್ದೇಶಿಸಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ರಾಜ್ಯದ ವಿವಿಧ ಜಿಲ್ಲೆಗಳ ನಗರ ಸ್ಥಳಿಯಾಡಳಿತಗಳ ಆಯುಕ್ತರಿಗೆ 2018ರಲ್ಲಿ ಆದೇಶ ನೀಡಿದ್ದರು.
ವಿದ್ಯುತ್ ಮಿತ ಬಳಕೆಗೆ ಪ್ಲ್ಯಾನ್ :
ವಿದ್ಯುತ್ ಮಿತಬಳಕೆ ದೃಷ್ಟಿಯಿಂದ ಕೇಂದ್ರ ಸರಕಾರ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಯೋಜನೆಯನ್ನು ಆಯಾ ರಾಜ್ಯದ ಸ್ಥಳಿಯ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಿದ್ದು. ತಮ್ಮ ಉಸ್ತುವಾರಿಯಲ್ಲೇ ಯೋಜನೆಗೆ ಚಾಲನೆ ನೀಡಬೇಕಿದೆ. ಸರಕಾರಿ ಮಟ್ಟ ದಲ್ಲಿ ಪ್ರಕ್ರಿಯೆ ಬಾಕಿಯಾಗಿ ಯೋಜನೆ ನಿಂತಿದೆ. ತಾಂತ್ರಿಕ ಕಾರಣದಿಂದಾಗಿ ಯೋಜನೆ ಮುಂದೆ ಹೋಗಿಲ್ಲ.
ಸರ್ವೆ ಪ್ರಕಾರ ಕಂಬಗಳು :
ಉಡುಪಿ (ನಗರಸಭೆ)
ವಾರ್ಡ್ 23 ಕಂಬಗಳು-4787
ಕಾರ್ಕಳ (ಪುರಸಭೆ)
ವಾರ್ಡ್ 23, ಕಂಬಗಳು 3,115
ಕುಂದಾಪುರ (ಪುರಸಭೆ)
ವಾರ್ಡ್-23 ಕಂಬಗಳು-2,161
ಕಾಪು (ಪುರಸಭೆ)
ವಾರ್ಡ್-23 ಕಂಬಗಳು-1,520
ಸಾಲಿಗ್ರಾಮ (ಪ.ಪಂ.)
ವಾರ್ಡ್-16 ಕಂಬಗಳು-1,460
ಯೋಜನೆಗೆ ಸಂಬಂಧಿಸಿ ಖಾಸಗಿ ಸಂಸ್ಥೆ ಸರ್ವೆ ನಡೆಸಿದೆ. ಟೆಂಡರ್ ಹಂತದಲ್ಲಿದೆ. ಶೀಘ್ರದಲ್ಲಿ ಸಮ್ಮತಿ ಸಿಗುವ ಸಾಧ್ಯತೆಯಿದೆ.
–ಅರುಣ ಪ್ರಭ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಉಡುಪಿ
-ಬಾಲಕೃಷ್ಣ ಭೀಮಗುಳಿ