ಉಡುಪಿ: ತರಗತಿಯಲ್ಲಿ ತನ್ನನ್ನು ಭಯೋತ್ಪಾದಕನಿಗೆ ಹೋಲಿಸಿದ ಪ್ರಾಧ್ಯಾಪಕರ ಮಾತಿಗೆ ವಿದ್ಯಾರ್ಥಿಯೋರ್ವ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಎಂಐಟಿ ಎಂಜಿನಿಯರಿಂಗ್ ವಿಭಾಗದ ತರಗತಿಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆ ದಿದೆ. ವಿದ್ಯಾರ್ಥಿಯು ತನ್ನನ್ನು ಭಯೋ ತ್ಪಾದಕ ಎಂದು ಕರೆದ ಬೋಧಕ ಸಿಬಂದಿಯನ್ನು ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಘಟನೆ ಬಗ್ಗೆ ಪ್ರಾಧ್ಯಾಪಕರು ವಿದ್ಯಾರ್ಥಿಯ ಕ್ಷಮೆ ಯಾಚಿಸಿದ್ದಾರೆ. ಘಟನೆ ಬಳಿಕ ಪ್ರಾಧ್ಯಾಪಕರ ಜತೆಗೆ ಮಾತನಾಡಿದ್ದು, ಉದ್ದೇಶಪೂರ್ವಕವಾಗಿ ಪದ ಬಳಕೆ ಮಾಡಿಲ್ಲ ಎಂಬುದು ಅರಿವಿಗೆ ಬಂದಿದೆ. ಈ ವಿವಾದವನ್ನು ಕೊನೆ ಗೊಳಿಸಿದ್ದೇವೆ ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.
ಪ್ರಕರಣವನ್ನು ಆಂತರಿಕ ತನಿಖೆಗೆ ಒಳಪಡಿಸಿರುವ ಸಂಸ್ಥೆಯು, ವಿಚಾರಣೆ ಪೂರ್ಣಗೊಳ್ಳುವವರೆಗೂ ಸಂಬಂಧಪಟ್ಟ ಸಿಬಂದಿಗೆ ತರಗತಿ ಪ್ರವೇಶಿಸದಂತೆ ಸೂಚನೆ ನೀಡಿದೆ.