Advertisement

ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸ

05:50 PM Apr 10, 2019 | Team Udayavani |

ಮಹಾನಗರ: ವಳಚ್ಚಿಲ್‌ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಾಣಿಜ್ಯೋದ್ಯಮ ಅಭಿವೃದ್ಧಿ ಕ್ಲಬ್‌ (ಇ.ಡಿ.ಸಿ.) ವತಿಯಿಂದ ಎಂ.ಬಿ.ಎ., ಎಂ.ಸಿ.ಎ. ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಬಿ ಕೀಪ್‌ ಆ್ಯಸ್‌ ಬ್ಯುಸಿನೆಸ್‌ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

Advertisement

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಶ್ಯಾಮ ಭಟ್‌ ಮಾತನಾಡಿ, ಜೇನು ನೋಣ ಗಳ ಜೀವನ ಶೈಲಿ, ವಿವಿಧ ಪ್ರಕಾರಗಳು ಮತ್ತು ಅವುಗಳ ಸಮರ್ಥವಾದ ಪರಾಗಸ್ಪರ್ಶ ಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

ಜೇನು ಸಾಕಾಣೆಗೆ ಉತ್ತಮ ಭವಿಷ್ಯ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ. ಮಾತ ನಾಡಿ, ವಿದ್ಯಾರ್ಥಿಗಳು ಜೇನು ಸಾಕಾಣಿಕೆಯ ಬಗ್ಗೆ ಒಲವನ್ನು ವ್ಯಕ್ತಪಡಿಸಿಕೊಂಡು ಮತ್ತು ಅದನ್ನು ಉದ್ಯಮವನ್ನಾಗಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದು ಅವರು ಹೇಳಿದರು.

ಎಂ.ಬಿ.ಎ.ವಿಭಾಗದ ಇ.ಡಿ.ಸಿ.ಸಂಯೋಜಕ ಡಾ| ರಾಧಾಕೃಷ್ಣನ್‌,ಇ.ಡಿ.ಸಿ. ಕಾರ್ಯದರ್ಶಿ ಪ್ರೊ|ಸುದರ್ಶನ್‌ ಕೆ.,ಪ್ರೊ| ಸೌಮ್ಯಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next