Advertisement

ಬಾಯಿ ಚಪಲಕ್ಕೆ ಮಾತನಾಡುವುದ ಬಿಟ್ಟು ಅಭಿವೃದ್ಧಿ ಮಾಡಿ

04:31 PM Sep 09, 2021 | Team Udayavani |

ಬಂಗಾರಪೇಟೆ: ಸಂಸದ ಎಸ್‌.ಮುನಿಸ್ವಾಮಿ ಗೆದ್ದು ಎರಡು ವರ್ಷವಾದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಆದರೂ ಬೇರೊಬ್ಬರ ‌ ಬಗ್ಗೆ
ಆರೋಪ ‌ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಶಾಸಕ ‌ ಎಸ್‌.ಎನ್‌. ನಾರಾಯಣಸ್ವಾಮಿ ತಿರುಗೇಟು ನೀಡಿದರು.

Advertisement

ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಿಜೆಪಿ ಪ್ರಭಾವಿ ಮುಖಂಡ ಮೇಸ್ತ್ರೀ ಶ್ರೀನಿವಾಸ್‌ ಮತ್ತು ಅವರ
ಬೆಂಬಲಿಗರನ್ನು ಸ್ವಾಗತಿಸಿ ಮಾತನಾಡಿ, ಜನರು ಇವರು ಏನೋ ಮಾಡುವರೆಂದು ನಂಬಿ ಮತನೀಡಿ ಗೆಲ್ಲಿಸಿದರು. ಆದರೆ, ಎರಡು ವರ್ಷ
ವಾದರೂ ಅವರ ಸಾಧನೆ ಮಾತ್ರ ಏನೂ ಇಲ್ಲ, ಬರೀ ಬಾಯಿಚಪಲಕ್ಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿರುವ ನನ್ನ ಬಗ್ಗೆ ಲಘುವಾಗಿ
ಮಾತನಾಡುತ್ತ, ಕಲಹರಣ ಮಾಡುತ್ತಿದ್ದಾರೆ. ಈ ಸಮಯವನ್ನುಅಭಿವೃದ್ಧಿ ಕಡೆ ತೋರಿದರೆ ಉತ್ತಮ ಎಂದು ಹೇಳಿದರು.

ಯಾವ ಸಾಕ್ಷಿಗಳು ಇಲ್ಲ: ಕ್ಷೇತ್ರಕ್ಕೆ ಸಂಸದರುಬಂದಾಗಲೆಲ್ಲಾ ಶಾಸಕರು ಅಲ್ಲಿ ಅಷ್ಟು ಗೋಮಾಳ ಜಮೀನು ಒತ್ತುವರಿ ಮಾಡಿ ಕೊಂಡಿದ್ದಾರೆ, ಅವರ ಅವ್ಯವಹಾರಗಳ ಕಡತಗಳು ‌ ರಾಶಿಯೇ ಇದೆ ಎಂದು ಹೇಳುವುದೇ ಆಯಿತು, ಇದುವರೆಗೂ ಬಿಡುಗಡೆ ಮಾಡಿಲ್ಲ, ಅವರ ಬಳಿ ಯಾವುದಕ್ಕೂ ಸಾಕ್ಷಿಗ ‌ಳಿಲ್ಲ ಎಂದು ಸಂಸದರ ಬಗ್ಗೆ ಕಿಡಿಕಾರಿದರು.

ಇದನ್ನೂ ಓದಿ:ಒಡಿಶಾದ “ಮಂಡ ಎಮ್ಮೆ’ಗೂ ತಳಿ ಮಾನ್ಯತೆ

ಹಣ ಲಪಟಾಯಿಸಿದ್ದೇ ಸಾಧನೆ: ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಸಾಗುತ್ತಿಲ್ಲ, ಬದಲಾಗಿ
ಕೋವಿಡ್‌ ಹೆಸರಲ್ಲಿ ಹಣ ಲಪಟಾಯಿಸಿದ್ದೇ ಸಾಧನೆಯಾಗಿದೆ. ಇದರಿಂದ ಜನರು ಬೇಸತ್ತಿದ್ದು, ಸಾಲು ಸಾಲಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

ಮೇಸ್ತ್ರೀ ಶ್ರೀನಿವಾಸ್‌ ಕಾಂಗ್ರೆಸ್‌ ಪಕ್ಷಕ್ಕೆ ಬಂದಿರುವುದರಿಂದ ಕಾರಹಳ್ಳಿ ಗ್ರಾಪಂನಲ್ಲಿ ಇನ್ನು ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು. ಸಮಾಜ ಸೇವಕ ಪ್ರವೀಣ್‌, ಮೇಸ್ತ್ರೀ ಶ್ರೀನಿವಾಸ್‌, ಮುಖಂಡರಾದ ಎಚ್‌.ಕೆ. ನಾರಾಯಣ ಸ್ವಾಮಿ, ಚಿನ್ನಿವೆಂಕಟೇಶ್‌, ಶ್ರೀನಿವಾಸ್‌, ರಂಗರಾಮಯ್ಯ ಮತ್ತಿತರರು ಹಾಜರಿದ್ದರು.

ಅವ್ಯವಹಾರ ಬಯಲಿಗೆ ತರಲಿ
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಕೆ.ಚಂದ್ರಾರೆಡ್ಡಿ ಮಾತನಾಡಿ, ಸಂಸದರು ಶಾಸಕರ ಬಗ್ಗೆ ಬರೀ ಬುಟ್ಟಿಯಲ್ಲಿ ಹಾವಿದೆ ಎಂದು ಹೇಳುವರೆ ವಿನಃ, ಯಾವತ್ತೂ ಹಾವನ್ನು ತೋರಿಸಿಲ್ಲ,ಶಾಸಕರ ಒತ್ತುವರಿ ಮತ್ತು ಅವ್ಯವಹಾರಗಳ ಬಗ್ಗೆ ಪದೇ ಪದೆ ಹೇಳುವರೇ ವಿನಃ ಅವರದ್ದೇ ಸರ್ಕಾರ ವಿದೆ, ತನಿಖೆ ಮಾಡಿಸಿ ಬಯಲಿಗೆ ತರಲಿ ಎಂದು ಸವಾಲು ಹಾಕಿದರು.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next