Advertisement

ಜೇನ್ನೊಣದಂತೆ ಬಾಳಿದರೆ ಬದುಕು ಸಿಹಿ!

12:30 AM Mar 16, 2019 | |

ಬದುಕಿನ ಎಲ್ಲಾ  ಆಗುಹೋಗುಗಳಲ್ಲಿ ಉಂಟಾಗುವ ತೊಡಕುಗಳಿಗೆ ನಾವು ಮಾಯೆ ಎಂತಲೇ ಕರೆಯುತ್ತೇವೆ. ತಪ್ಪು ಆದಾಗ ಯಾವ ಮಾಯೆಯಿಂದ ಹೀಗಾಯಿತೋ, ಯಾವ ಮಾಯೆ ನನ್ನನ್ನು ಕುರುಡನನ್ನಾಗಿಸಿತೋ ಎಂದು ಪರಿತಪಿಸುತ್ತೇವೆ.  ಮೊದಲನೆಯದು ಅಜ್ಞಾನದಿಂದಾಗುವ ತಪ್ಪು. ಈ ಅಜ್ಞಾನವು ಭ್ರಮೆಯನ್ನೇ ಸತ್ಯವೆಂದು ನಂಬಿಸಿಬಿಡುತ್ತದೆ. 

Advertisement

ಶ್ರೀಮದ್ಭಾಗವತದ ಏಕಾದಶಸ್ಕಂಧದ ಎಂಟನೆ ಅಧ್ಯಾಯದಲ್ಲಿ, ಸಂನ್ಯಾಸಿಯು ಜೇನುಹುಳದ ಬದುಕನ್ನು ಆದರ್ಶವಾಗಿಟ್ಟುಕೊಂಡು ಬಾಳಬೇಕು ಎಂದು ಹೇಳಲಾಗಿದೆ.

ಸಾಯಂತನಂ ಶ್ವಸ್ತನಂ ವಾ ನ ಸಂಗೃಹಿ¡àತ ಭಿಕ್ಷಿತಮ… |
ಪಾಣಿಪಾತ್ರೋದರಾಮತ್ರೋ ಮಕ್ಷಿಕೇವನ ಸಂಗ್ರಹೀ ||
ಸಾಯಂತನಂ ಶ್ವಸ್ತನಂ ವಾ ನ ಸಂಗೃಹಿತ ಭಿಕ್ಷಿತಮ… |
ಮಕ್ಷಿಕಾ ಇವ ಸಂಗೃಹ¡ನ್‌ ಸಹತೇನ ವಿನಶ್ಯತಿ ||12||

ಈ ಎರಡು ನುಡಿಗಳ ಅರ್ಥ: “ಸಂನ್ಯಾಸಿಯಾದವನು ಭಿಕ್ಷೆಯನ್ನು ಸಂಜೆಗಾಗಲೀ ನಾಳೆಗೆಂದಾಗಲೀ ಉಳಿಸಿಕೊಳ್ಳಬಾರದು. ಜೇನುಹುಳವು ಜೇನನ್ನು ಸಂಗ್ರಹಿಸಿದರೆ ಜೇನಿನ ಜೊತೆಗೆ ಅದರ ಜೀವನವು ಆಪತ್ತಿಗೆ ಗುರಿಯಾಗುತ್ತದೆ. ಇದನ್ನು ಅರಿತುಕೊಂಡು ಸಂನ್ಯಾಸಿಯು ಯಾವುದೇ ರೀತಿಯ ಸಂಗ್ರಹ ಮಾಡಬಾರದು ಎಂಬುದಾಗಿದೆ.
 
ಇಲ್ಲಿ, ಜೀವನದ ಸರಳಮಾರ್ಗವನ್ನು ಸರಳ ದೃಷ್ಟಾಂತದ ಮೂಲಕ ಹೇಳಲಾಗಿದೆ. ರೂಢಿಯಲ್ಲಿ ಒಂದು ಮಾತಿದೆ, ಅತಿಯಾದರೆ ಅಮೃತವೂ ವಿಷ ಅಂತ. ಅಂದರೆ, ಯಾವುದೂ ನಮ್ಮ ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಾಗಬಾರದು. ಅದನ್ನು ಸ್ವೀಕರಿಸಲೂ ಬಾರದು. ಸಂನ್ಯಾಸಜೀವನಕ್ಕೆ ಶ್ರೀಮದ್ಭಾಗವತ ಹೇಳಿದ ಜೇನುಹುಳದ ಪಾಠವು ಸಾಮಾನ್ಯ ಜೀವನಕ್ಕೂ ಮಾರ್ಗದರ್ಶಕವೇ ಆಗಿದೆ. 

ಪ್ರಸ್ತುತ ಕಾಲಮಾನದಲ್ಲಂತೂ ಇಂಥ ಅರಿವು ಪ್ರತಿಯೊಬ್ಬನಲ್ಲೂ ಇರಬೇಕು ಮತ್ತು ಪಾಲಿಸಲ್ಪಡಬೇಕು. ಏಕೆಂದರೆ, ಸಂಪತ್ತಿನ ಸಂಗ್ರಹ ಎಂಬುದೇ ಎಲ್ಲಾ   ತಾರತಮ್ಯಗಳಿಗೆ, ಆರ್ಥಿಕಸಮಸ್ಯೆಗಳಿಗೆ ಕಾರಣವಾಗಿದೆ. ಉಣ್ಣುವ ಅನ್ನವನ್ನೂ ಸಂಗ್ರಹಿಸಬಾರದು ಎಂಬುದನ್ನು ಇಲ್ಲಿ ಸೂಚಿಸಲಾಗಿದೆ. ಅಂತೆಯೇ ಧನ-ಕನಕಾದಿ ಸಂಪತ್ತುಗಳನ್ನು ನಾವು ಸಂಗ್ರಹಿಸುತ್ತಾ ಹೋದಾಗ ಆ ಸಂಪತ್ತಿನಿಂದಲೇ ನಮಗೆ ಆಪತ್ತು ಒದಗಿಬರುತ್ತದೆ. ಸಂಪತ್ತಿನ ಸಂಗ್ರಹ ಎಂಬುದು ಒಂದು ಬಗೆಯ ವ್ಯಾಮೋಹ. ಈ ಸಂಪತ್ತಿನ ಹಿಂದೆ ಬಿದ್ದವನು ಎಂದಿಗೂ ಸಂಯಮಿಯಾಗಿರಲು ಸಾಧ್ಯವಿಲ್ಲ. ಅರಿಷಡ್ವರ್ಗಗಳು ಸುಲಭವಾಗಿ ಅವನನ್ನು ಆಕ್ರಮಿಸಿಕೊಳ್ಳುತ್ತದೆ. ಹಾಗಾಗಿ, ನ್ಯಾಯಯುತವಾದ ಜೀವನ ನಡೆಸಲಾಗದೆ ಮುಕ್ತಿಯ ಮಾರ್ಗವನ್ನು ತಲುಪುವಲ್ಲಿ ಸೋಲುತ್ತಾನೆ.

Advertisement

  ಸಂಪತ್ತಿನ ಸಂಗ್ರಹದಿಂದ ಒಬ್ಬನು ಶ್ರೀಮಂತನಾಗುತ್ತ ಹೋಗುತ್ತಾನೆ. ಅದೇ ಸಮಯದಲ್ಲಿ ಇನ್ನೊಬ್ಬ ಬಡವನಾಗುತ್ತ ಹೋಗುತ್ತಾನೆ. ಒಬ್ಬನಿಗೆ ಮೃಷ್ಟಾನ್ನವಾದರೆ ಇನ್ನೊಬ್ಬನಿಗೆ ತುತ್ತುಕೂಳೂ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿ ಕಲಿಯುಗದಲ್ಲಿ ಎÇÉಾ ಕಡೆಯೂ ಇದ್ದೇ ಇದೆ. ಅಗತ್ಯಕ್ಕಿಂತ ಹೆಚ್ಚಿನ ಊಟವು ಆರೋಗ್ಯಕ್ಕೂ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತು. ಅಂತೆಯೇ, ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತಿನ ಸಂಗ್ರಹವೂ ಅಪಾಯಕಾರಿಯೇ. ಅಲೌಕಿಕವಾಗಿ ಮನಸ್ಸು ಚಂಚಲವಾಗಲು ಇದು ಪೂರಕವಾಗಿ, ನಿಧಾನವಾಗಿ ನಮ್ಮನ್ನು ಸನ್ಮಾರ್ಗದಿಂದ ದುರ್ಮಾರ್ಗದತ್ತ ಒಯ್ದು, ಅಂಧಕಾರದಲ್ಲಿಯೇ ಬದುಕಿ ವಿನಾಶಕ್ಕೆ ತುತ್ತಾಗುವಂತೆ ಮಾಡುತ್ತದೆ. ಜೇನುಹುಳ ತಾನು ಸಂಗ್ರಹಿಸಿದ ಜೇನಿನೊಳಗೇ ಬಿದ್ದು ಸಾಯುವಂತೆ ನಾವು, ಮುಕ್ತರಾಗದೆ ಹೋಗುತ್ತೇವೆ. ಲೌಕಿಕವಾಗಿಯೂ ಇದು ನಮಗೆ ಚಿಂತೆ, ದುಃಖಕ್ಕೆ ಕಾರಣವಾಗುತ್ತದೆ. ಇದರಿಂದಾಗಿಯೇ “ಚಿನ್ನ ಸಿಕ್ಕಿದವನಿಗೆ ಸದಾ ಚಿಂತೆ’ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ. ಕಳ್ಳರ ಭಯ ಒಂದೆಡೆ, ಸಂಪತ್ತನ್ನು ಹೇಗೆ ಬಳಸಬೇಕೆಂಬುದೂ ತಿಳಿಯದೆ ಜೀವನವು ಹಾಳಾಗುವ ಪರಿಸ್ಥಿತಿ ಇನ್ನೊಂದೆಡೆ. ಪರಿಣಾಮ,  ಸಂಪತ್ತಿದ್ದರೂ ನೆಮ್ಮದಿ ಇಲ್ಲದ ಸ್ಥಿತಿ.  ಇಂಥ ಪಜೀತಿಗಳಿಗೆ ಇದು ಕಾರಣವಾಗುವುದರಿಂದ, ಜೇನುಹುಳದಿಂದ ಪಾಠ ಕಲಿತುಕೊಂಡು ಅಗತ್ಯವಾದಷ್ಟನ್ನೇ ಸಂಗ್ರಹಿಸಿಕೊಂಡು ಬಳಸುವುದು ಉತ್ತಮ.

ಹೆಣ್ಣಾನೆಯಿಂದ ಗಂಡಾನೆ ಕಂದಕಕ್ಕೆ 
 ಈ ದೃಷ್ಟಾಂತಗಳು ಕೇವಲ ಸಂನ್ಯಾಸಿಯಾದವನಿಗಷ್ಟೇ ಅಲ್ಲದೆ ಸಾಮಾನ್ಯ ಮನುಷ್ಯನಿಗೂ ಅನ್ವಯವಾಗುತ್ತವೆ.  ಹಾಗಾಗಿಯೇ, ನಾವು ಶ್ರೀಮದ್ಭಾಗವತವನ್ನು ಓದಿ, ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು. ಹದಿನಾಲ್ಕನೆಯ ಗುರುವಾಗಿ ಆನೆಯನ್ನು ಉದಾಹರಣೆಯಾಗಿಟ್ಟುಕೊಂಡು ಹೇಳುವ ಸಂಯಮದ ಪಾಠ ಹೀಗಿದೆ.

 ಸಂನ್ಯಾಸಿಯಾದವನು ಮರದಿಂದ ಮಾಡಿದ ಸ್ತ್ರೀಯನ್ನೂ ಕೂಡ ಕಾಲಿನಿಂದಲೂ ಮುಟ್ಟಬಾರದು. ಇಲ್ಲದಿದ್ದರೆ ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಕಂದಕಕ್ಕೆ ಬಿದ್ದು ಬಂಧಿತವಾಗುವಂತೆ, ಮೋಸಕ್ಕೆ ಸಿಲುಕುವಂತಾಗುತ್ತದೆ. ಕಾಡಾನೆಯನ್ನು ಹಿಡಿಯಲು ಆಳವಾದ ಕಂದಕವನ್ನು ನಿರ್ಮಿಸಿ, ಅದನ್ನು ಬಿದಿರು ಹುಲ್ಲಿನಿಂದ ಮುಚ್ಚಿ,  ಅದರ ಮೇಲೆ ಮರದಿಂದ ಮಾಡಿದ ಹೆಣ್ಣಾನೆಯನ್ನು ನಿಲ್ಲಿಸಿಡುತ್ತಾರೆ. ಅದನ್ನು ದೂರದಿಂದ ನೋಡಿದ ಗಂಡಾನೆ, ಮರದ ಆನೆಯನ್ನೇ ನಿಜವಾದ ಹೆಣ್ಣಾನೆ ಎಂದುಕೊಂಡು ಅದರ ಹತ್ತಿರ ಬಂದು ಕಂದಕಕ್ಕೆ ಬಿದ್ದು ಪರಾಧೀನವಾಗುತ್ತದೆ. ಮನುಷ್ಯನೂ ಇಂಥ ಮಾಯೆಗಳನ್ನೇ ಸತ್ಯವೆಂದು ಭ್ರಮಿಸಿ ಪರಾಧೀನನಾಗುವ ಸಂಭವ ಇರುವುದರಿಂದ ಮರದ ಹೆಣ್ಣು ಬೊಂಬೆಯನ್ನೂ ಮುಟ್ಟಬಾರದಂತೆ. ಮನುಷ್ಯನು ಮೋಹಪಾಶಕ್ಕೆ ಸುಲಭವಾಗಿ ಬಿದ್ದುಬಿಡುತ್ತಾನೆ. ಹೀಗೆ ಬಿದ್ದವನು ಬದುಕಿನಲ್ಲಿ ಸೆರೆಯಾದಂತೆ. ಅವನಿಗೆ ನೀತಿನಿಯಮಗಳಾವುವೂ ಅರಿವಿಗೆ ಬಾರದು. ಕೇವಲ ಆಸೆಲಾಲಸೆಗಳಿಗೆ ತುತ್ತಾಗಿ ಸಂನ್ಯಾಸಿಯೂ ಆಗಲಾರ; ಸಂಸಾರಿಯೂ ಆಗಲಾರ. ಹಾಗಾಗಿ, ಯಾವುದು ನಮ್ಮನ್ನು ತನ್ನತ್ತ ಆಕರ್ಷಿಸುವುದೋ ಅದರ ಬಗ್ಗೆ ತಿಳಿದುಕೊಂಡು, ಅದರಿಂದಾಗುವ ಪರಿಣಾಮವನ್ನೂ ಅರಿತುಕೊಂಡು ಅಡಿ ಇಡುವುದು ಉತ್ತಮ ಎಂದು ಶ್ರಿಮದಾºಗವತದಲ್ಲಿ ಹೇಳಲಾಗಿದೆ. 
ಮೃತ್ಯುವು ಸ್ತ್ರೀಯ ರೂಪದಲ್ಲಿಯೂ ಬರಬಹುದು. ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಬಲಿಷ್ಠವಾದ ಗಂಡಾನೆಗಳಿಂದ ಕೊಲ್ಲಲ್ಪಡುತ್ತದೆ. ಅಂತೆಯೇ, ಮನುಷ್ಯನು ಸ್ತ್ರೀಯ ರೂಪದಲ್ಲಿರಬಹುದಾದ ಮಾಯೆಯನ್ನು ವಿವೇಚನೆಯಿಂದ ಅರಿತುಕೊಂಡು ಅವಳಿಂದ ದೂರ ಇರಬೇಕು. ಬದುಕಿನ ಎÇÉಾ ಆಗುಹೋಗುಗಳಲ್ಲಿ ಉಂಟಾಗುವ ತೊಡಕುಗಳಿಗೆ ನಾವು ಮಾಯೆ ಎಂತಲೇ ಕರೆಯುತ್ತೇವೆ. ತಪ್ಪು ಆದಾಗ ಯಾವ ಮಾಯೆಯಿಂದ ಹೀಗಾಯಿತೋ, ಯಾವ ಮಾಯೆ ನನ್ನನ್ನು ಕುರುಡನನ್ನಾಗಿಸಿತೋ ಎಂದು ಪರಿತಪಿಸುತ್ತೇವೆ.  ಮೊದಲನೆಯದು ಅಜ್ಞಾನದಿಂದಾಗುವ ತಪ್ಪು. ಈ ಅಜ್ಞಾನವು ಭ್ರಮೆಯನ್ನೇ ಸತ್ಯವೆಂದು ನಂಬಿಸಿಬಿಡುತ್ತದೆ. ಆಗ ಕಂದಕವನ್ನು ಆನಂದದ ಆಗರ ಎಂದುಕೊಂಡು, ಆಕರ್ಷಿತರಾಗಿ ಯೋಚನೆ, ವಿವೇಚನೆ ಎಲ್ಲವನ್ನೂ ಬಿಟ್ಟು ಅದರತ್ತ ಹೋಗಿ ನಾವೇ ನಮಗೆ ದುರಂತವನ್ನು ತಂದುಕೊಳ್ಳುತ್ತೇವೆ. ಇನ್ನು ಮಾಯೆಗೆ ಸಿಲುಕುವವರು ಒಬ್ಬಿಬ್ಬರಲ್ಲ. ಒಂದು ಆನೆಯನ್ನು ಕೊಲ್ಲಲು ಇನ್ನಷ್ಟು ಆನೆಗಳು ಆ ಮಾಯೆಗೆ ಸಿಲುಕಿದ್ದೇ ಕಾರಣ. ಮನುಷ್ಯನೂ ಇದರಿಂದ ಹೊರತಲ್ಲ. ಜಗತ್ತೆಲ್ಲ ತುಂಬಿಕೊಂಡಿರುವ ಮಾಯೆಯನ್ನು ಅರಿಯಲು ಒಳಗಣ್ಣು ಬೇಕು. ಮಾಯೆಯ ಹಿಂದೆ ಬಿ¨ªಾಗ ಮೃತ್ಯುವು ಹತ್ತಿರವೇ ಸುಳಿಯುತ್ತಿರುತ್ತಾನೆ. ದುಷ್ಟಕಾರ್ಯಗಳಲ್ಲಿ ತೊಡಗಿಕೊಂಡಿರುವವನು ಯಾವಾಗಲೂ ಇನ್ನೊಬ್ಬ ದುಷ್ಟನಿಂದಲೇ ನಾಶವಾಗುವುದು. ಹೆಣ್ಣು ಮಾಯೆ ಎಂಬ ಮಾತಿದೆ. ಆದರೆ ಮೋಹವು, ಕಾಮವು ನಮ್ಮನ್ನು ಹೆಣ್ಣಿನತ್ತ ಎಳೆದುಕೊಂಡು ಹೋಗುತ್ತದೆ ಅಷ್ಟೆ. ಅವಳ ಹಿಂದೆ ತಪ್ಪು ಮಾಡುವವರನ್ನು ಕಂದಕಕ್ಕೆ ದೂಡಲು ಮೃತ್ಯು ಕಾಯುತ್ತಲೇ ಇರುತ್ತಾನೆ.

..ಮುಂದುವರಿಯುವುದು.

ವಿಷ್ಣುಭಟ್‌ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next