Advertisement

ಇಂಡೋ – ಪಾಕ್ ಕ್ರಿಕೆಟ್ ; ಸರಕಾರವೇ ನಿರ್ಧರಿಸಲಿ : ಕಪಿಲ್

06:48 AM Feb 23, 2019 | Karthik A |

ಪುಣೆ: ಮುಂಬರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತವು ಪಾಕಿಸ್ಥಾನ ತಂಡದ ವಿರುದ್ಧ ಆಡಬೇಕೇ ಬೆಡವೇ ಎಂಬುದನ್ನು ಭಾರತ ಸರಕಾರವೇ ತೀರ್ಮಾನಿಸಲಿ ಎಂದು ಮಾಜೀ ಆಲ್ ರೌಂಡರ್ ಕಪಿಲ್ ದೇವ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯದಲ್ಲಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ಕಪಿಲ್ ಅವರು ಹೆಳಿದ್ದಾರೆ.

Advertisement

‘ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಭಣಿಸಿರುವ ಈ ಪರಿಸ್ಥಿತಿಯಲ್ಲಿ ಭಾರತ –ಪಾಕ್ ಕ್ರಿಕೆಟ್ ಆಡಬೇಕೇ ಬೇಡವೇ ಎಂಬುದನ್ನು ನಮ್ಮ ನಿಮ್ಮಂತಹ ಜನಸಾಮಾನ್ಯರು ನಿರ್ಧರಿಸಲಾಗುವುದಿಲ್ಲ ಬದಲಾಗಿ ಇದನ್ನು ಸರಕಾರವೇ ತೀರ್ಮಾನಿಸಬೇಕು, ಮತ್ತು ಸರಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯವೂ ಹೌದು’ ಎಂದು ಪುಣೆಯಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಕಪಿಲ್ ದೇವ್ ಅವರು ಹೇಳಿದರು.

ಪುಲ್ವಾಮ ಉಗ್ರ ದಾಳಿಯ ಬಳಿಕ ಭಾರತವು ಪಾಕಿಸ್ಥಾನದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿದೆ. ಇದೇ ರೀತಿಯಲ್ಲಿ ಭಾರತ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಆಡುವುದನ್ನೂ ನಿಲ್ಲಿಸಬೇಕು ಎಂಬ ಆಗ್ರಹ ಇದೀಗ ದೇಶಾದ್ಯಂತ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವಾರು ಮಾಜೀ ಕ್ರಿಕೆಟ್ ಆಟಗಾರರೂ ಸಹ ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಉಗ್ರಚಟುವಟಿಕೆಗಳಲ್ಲಿ ನಿರತವಾಗಿರುವ ರಾಷ್ಟ್ರಗಳೊಂದಿಗೆ ಕ್ರಿಕೆಟ್ ಬಾಂಧವ್ಯವನ್ನು ಕಡಿದುಕೊಳ್ಳಬೇಕೆಂದು ಶುಕ್ರವಾರ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಾಕೀತು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next