Advertisement

ಅಕ್ರಮವಾಗಿ ಮಗಳಿಗೆ ಗುತ್ತಿಗೆ: ಎಲ್‌ಜಿ ವಿರುದ್ಧ ಆಪ್‌ ಆರೋಪ

08:00 PM Sep 02, 2022 | Team Udayavani |

ನವದೆಹಲಿ: ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ)ದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಮಗಳಿಗೆ ಅಕ್ರಮವಾಗಿ ಖಾದಿ ಲಾಂಜ್‌ನ ಒಳಾಂಗಣ ವಿನ್ಯಾಸದ ಗುತ್ತಿಗೆ ನೀಡಿದ್ದರು ಎಂದು ಅಮ್‌ ಆದ್ಮಿ ಪಕ್ಷ(ಆಪ್‌) ಆರೋಪಿಸಿದೆ.

Advertisement

ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಸಕ್ಸೇನಾ ಅವರನ್ನು ಲೆಫ್ಟಿನೆಂಟ್‌ ಗವರ್ನರ್‌ ಸ್ಥಾನದಿಂದ ವಜಾಗೊಳಿಸಬೇಕು,” ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಆಗ್ರಹಿಸಿದರು. ಅಲ್ಲದೇ, ಸಕ್ಸೇನಾ ವಿರುದ್ಧ ಕೋರ್ಟ್‌ ಮೆಟ್ಟಿಲೇರುವುದಾಗಿಯೂ ಎಚ್ಚರಿಸಿದರು.

ಸಕ್ಸೇನಾ ಅವರ ವಿರುದ್ಧ ಆರೋಪಗಳ ಸರಣಿಯನ್ನು ಆಪ್‌ ಮುಂದುವರಿಸಿದೆ. ಕೆವಿಐಸಿ ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು ನೋಟು ಅಮಾನ್ಯದ ಸಂದರ್ಭದಲ್ಲಿ 1,400 ಕೋಟಿ ರೂ.ಗಳ ವಿನಿಮಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಇತ್ತೀಚೆಗೆ ಆಪ್‌ ಆರೋಪಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next