ಪಾವತಿ ಮಾಡಿ ಪಡೆಯುವ ಜಮೀನಿಗೆ ಪ್ರಸ್ತುತ ಇರುವ 99 ವರ್ಷ ಲೀಸ್ ನಿರ್ಬಂಧ ತೆಗೆದು ಹಾಕಿ, “ಲೀಸ್ ಕಂ ಸೇಲ್ ಡೀಡ್’
ಮಾಡಿಕೊಡಲು ನಿಯಮಾವಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ತೀರ್ಮಾನಿಸಿದೆ.
Advertisement
ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಸರ್ಕಾರಿ, ಸಾರ್ವಜನಿಕ ಸ್ವಾಮ್ಯ, ಕೇಂದ್ರ-ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದ ಯೋಜನೆಗಳು, ಏಕಘಟಕದಡಿ ಕೈಗಾರಿಕೆ ಹಾಗೂ ವಸತಿ ಯೋಜನೆಗಳಿಗೆ ಪಡೆಯುವ
ಹಾಗೂ ರಾಜ್ಯದಲ್ಲಿ ಕೈಗಾರಿಕೆ ನೀತಿ ಜಾರಿಗೆ ಬಂದ ನಂತರ ಪಡೆದಿರುವ ಜಮೀನುಗಳಿಗೆ ಇದು ಅನ್ವಯವಾಗುತ್ತದೆ. ಕೆಐಎಡಿಬಿ
ಮಧ್ಯಸ್ಥಿಕೆಯಲ್ಲಿ ಕೈಗಾರಿಕೆ ಅಥವಾ ವಸತಿ ಯೋಜನೆ ಪ್ರಾರಂಭಿಸಲು ಇಚ್ಛಿಸಿರುವವರು ತಾವೇ ಸ್ವಾಧೀನಪಡಿಸಿಕೊಂಡ ಜಮೀನಿಗೆ
ಪರಿಹಾರ ನೀಡಿದ್ದರೆ ಅಂತಹ ಪ್ರಕರಣಗಳಿಗೆ ಮಾತ್ರ ಇದು ಅನ್ವಯ ಎಂದು ತಿಳಿಸಿದರು.
ಸಾಕಷ್ಟು ತೊಂದರೆಗಳಾಗುತ್ತವೆ. ಸರ್ಕಾರಿ ಸ್ವಾಮ್ಯ, ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಈ ರೀತಿ ಮಾಡುವುದರಿಂದ
ತೊಂದರೆ ಯಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ: ಜಲಸಂಪನ್ಮೂಲ ಇಲಾಖೆಯಲ್ಲಿ 700 ಕಿರಿಯ ಅಭಿಯಂತರ ಹಾಗೂ 1200
ಸಹಾಯಕ ಅಭಿಯಂತರ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ಅನುಷ್ಟಾನದ ಹಿನ್ನೆಲೆಯಲ್ಲಿ ಅಭಿಯಂತರರ ಕೊರತೆ ಇರುವುದರಿಂದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ತುಂಬಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.