Advertisement

ಬಿಡುವಿನ ವೇಳೆಯಲ್ಲಿ ಹೊಸದನ್ನು ಕಲಿಯಿರಿ…

05:11 AM May 19, 2020 | Lakshmi GovindaRaj |

ಮನೆಯಲ್ಲಿ ಇರುವ ಎಲ್ಲಾ ಕೆಲಸ ಮಾಡಿ ಮುಗಿಸಿದ್ದಾಯ್ತು. ಇನ್ನೇನು ಮಾಡೋದು ಅನ್ನೋ ಚಿಂತೆ ಬೇಡ. ಲಾಕ್‌ಡೌನ್‌ ಸಮಯವನ್ನೇ ಕಲಿಯುವ ಸಮಯವನ್ನಾಗಿಸಿಕೊಳ್ಳಿ. ಹೊಸತನ್ನು ಕಲಿಯುವ ಪ್ರಯತ್ನ ಮಾಡಿ. ಬಾಲ್ಯದಲ್ಲಿ  ಕಲಿಯದೇ ಉಳಿದಿರುವ ವಿದ್ಯೆ ಯಾವುದು ಅಂತ ಪಟ್ಟಿ ಮಾಡಿ. ಅದನ್ನು ಮತ್ತೆ ಕಲಿಯುವ ಪ್ರಯತ್ನ ಮಾಡಿ. ಬಿಡ್ರೀ.. ಕಲೆ ಅನ್ನೋದು ರಕ್ತಗತವಾಗಿ ಬರಬೇಕು.

Advertisement

ಸಂಸ್ಕಾರ ಇರಬೇಕು. ಸುಮ್ಮನೆ ಮೂರು ದಿನದಲ್ಲಿ ಬರೋದಿಲ್ಲ ಅಂತೆಲ್ಲ   ಅಂದುಕೊಳ್ಳಬೇಡಿ. ಇವತ್ತು ಪ್ರಯತ್ನ ಪಟ್ಟರೆ, ಮುಂದೆ ಫ‌ಲಿತಾಂಶ ಸಿಗಬಹುದು. ದಿನಕ್ಕೆ ಮೂರು ನಾಲ್ಕು ಗಂಟೆಯಷ್ಟು ಸಮಯ ಇದೆ ಅನ್ನೋದಾದರೆ, ಚಿತ್ರಕಲೆಯ ಬೇಸಿಕ್‌ ಕಲಿಯಬಹುದು. ಸಂಗೀತದ ಆರಂಭಿಕ ಪಾಠಗಳ ಕಡೆ ಗಮನ ಕೊಡಬಹುದು. ಪಕ್ಕವಾದ್ಯಗಳ ಮೇಲೆ ಬೆರಳನ್ನು ಕೂಡ್ರಿಸಿಕೊಳ್ಳಬಹು ದು. ಇದಕ್ಕೆ, ಸಮಯಕ್ಕಿಂತ ಮುಖ್ಯವಾಗಿ ಆಸಕ್ತಿ ಮತ್ತು ಕುತೂಹಲ ಇರಬೇಕು. ಇವತ್ತು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್‌. ಜಾನಕಿ, ಪಿ. ಸುಶೀಲ,  ಎಸ್ಪಿಬಿ… ಇವರ್ಯಾರೂ ಸಂಗೀತವನ್ನು ಕಲಿಯಬೇಕು ಅಂತ ಡಿಗ್ರಿ ಮಾಡಿದವರಲ್ಲ.

ಸಿಕ್ಕಿದ ಬಿಡುವಿನ ಸಮಯವನ್ನು ಸಂಗೀತ ಕಲಿಕೆಗೆ ಬಳಸಿಕೊಂಡವರು. ಆಮೇಲೆ, ಅದರಲ್ಲಿ ಹೆಚ್ಚಿನ ಆಸಕ್ತಿ ಮೂಡಿ, ಸಾಧನೆ ಮಾಡಿ ಮುಂದೆ  ಬಂದವರು. ಹಿಂದೆ, ಎಷ್ಟೋ ಹೆಣ್ಣು ಮಕ್ಕಳು ಮನೆಕೆಲಸಗಳ ನಂತರ ಸಿಗುವ ಬಿಡುವಿನ ಅವಧಿಯಲ್ಲಿ ಕಸೂತಿ, ಸಂಗೀತ, ಚಿತ್ರಕಲೆ ಕಲಿತು ದೊಡ್ಡ ಯಶಸ್ಸು ಪಡೆದ ಉದಾಹರಣೆಗಳಿವೆ. ಹೀಗಿರುವಾಗ, ಉಡುಗೊರೆಯ ರೂಪದಲ್ಲಿ  ಸಿಕ್ಕಿರುವ ಲಾಕ್‌ಡೌನ್‌ ಸಮಯವನ್ನು ನಿಮ್ಮ ಹವ್ಯಾಸಗಳ ಕಲಿಕೆಗೆ ಏಕೆ ಬಳಸಬಾರದು?

Advertisement

Udayavani is now on Telegram. Click here to join our channel and stay updated with the latest news.

Next